ಜಡೆ ಸಿದ್ದ ಶಿವಯೋಗಿಗಳ ಭಾವಚಿತ್ರ ಮೆರವಣಿಗೆ

| Published : Sep 07 2024, 01:33 AM IST

ಜಡೆ ಸಿದ್ದ ಶಿವಯೋಗಿಗಳ ಭಾವಚಿತ್ರ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಠಶಾಲೆಯಲ್ಲಿ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಮಹಾಮಂಗಳಾರತಿ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಕಂಪ್ಲಿ: ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಎಮ್ಮಿಗನೂರು ಜಡೆಸಿದ್ದ ಶಿವಯೋಗಿಗಳ ಪುರಾಣ ಪ್ರವಚನ ಮಹಾಮಂಗಲ ಕಾರ್ಯಕ್ರಮದ ಅಂಗವಾಗಿ ಜಡೆಸಿದ್ದ ಶಿವಯೋಗಿಗಳ ಭಾವಚಿತ್ರ ಮೆರವಣಿಗೆ ಬುಧವಾರ ಅದ್ಧೂರಿಯಾಗಿ ಜರುಗಿತು.

ಪಾಠಶಾಲೆಯಲ್ಲಿ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಮಹಾಮಂಗಳಾರತಿ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಪುರಾಣ ವಾಚಿಸಿದ ಎಂ.ಶರಣಯ್ಯಶಾಸ್ತ್ರಿ ಕಂಬಳದಿನ್ನಿ, ಸಂಗೀತ ಸೇವೆ ಮಾಡಿದ ಬಿ.ಚಿದಾನಂದಪ್ಪ ಗವಾಯಿ, ತಬಲಾ ವಾದಕ ಕೆ.ದೊಡ್ಡಬಸಪ್ಪ ಸೇರಿ ನಾನಾ ಸೇವೆಗಳನ್ನು ಸಲ್ಲಿಸಿದವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಂಗಾತ್ರಯ ಸಂಸ್ಕೃತ ಪಾಠ ಶಾಲೆಯಿಂದ ಆರಂಭಗೊಂಡ ಭಾವಚಿತ್ರ ಮೆರವಣಿಗೆ ಡಾ.ರಾಜಕುಮಾರ್ ರಸ್ತೆ, ಕಂಪ್ಲಿ ಕೋಟೆ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಸೇರಿ ವಿವಿಧ ಮುಖ್ಯ ರಸ್ತೆಗಳ ಮಾರ್ಗವಾಗಿ ತೆರಳಿ ಪಾಠ ಶಾಲೆಯ ಆವರಣದಲ್ಲಿ ಸಮಾವೇಶಗೊಂಡಿತು.

ತಾಲೂಕಿನ ವಿವಿಧೆಡೆಯಿಂದ ಭಕ್ತರು ಆಗಮಿಸಿ ಹೂ, ಹಣ್ಣು ಅರ್ಪಿಸಿ ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಕೆ.ಎಂ. ಹೇಮಯ್ಯಸ್ವಾಮಿ, ಅರವಿ ಬಸವನಗೌಡ, ಪಿ.ಮೂಕಯ್ಯಸ್ವಾಮಿ, ಪಾಠಶಾಲೆ ಅಧ್ಯಕ್ಷ ಇಟಗಿ ಬಸವರಾಜಗೌಡ, ಪ್ರಚಾರ್ಯರಾದ ಘನಮಠದಯ್ಯ ಹಿರೇಮಠ, ಪದಾಧಿಕಾರಿಗಳಾದ ಅಲಬನೂರು ಬಸವರಾಜ, ಬಿ.ಎಚ್. ಶಶಿಧರಗೌಡ, ಗಂಡಿ. ಗಣೇಶ, ಟಿ.ಸುರೇಶಗೌಡ, ಅರವಿ ಅಮರೇಶಗೌಡ, ಡಾ.ಜಗನ್ನಾಥ ಹಿರೇಮಠ, ಯುಗಾದಿ ಬಸವರಾಜ, ಗೌಳೇರ ಶೇಖರಪ್ಪ, ಅಳ್ಳಿ ನಾಗರಾಜ, ಕೋರಿಶೆಟ್ರು ಸಣ್ಣ ಶಿವಪ್ಪ, ಹುಲಿಹೈದರ ಅಮರೇಶ, ಎಂ.ವಿಜಯಕುಮಾರ, ಕುಕನೂರು ಅಶೋಕ, ಸಜ್ಜನ ಶರಣಪ್ಪ, ಸೇರಿ ವೀರಶೈವ ಸಮುದಾಯದ ಮುಖಂಡರು, ಅಕ್ಕಮಹಾದೇವಿ ಮಹಿಳಾ ಮಂಡಳಿಯ ಪದಾಧಿಕಾರಿಗಳು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.