ನರಸಿಂಹರಾಜಪುರತಂಬಾಕು ಮತ್ತು ಅದರ ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದ್ದು 18 ವರ್ಷದ ಒಳಗಿನ ಪ್ರಾಯದವರಿಗೆ ತಂಬಾಕು ತಂಬಾಕಿನ ಉತ್ಪನ್ನ ಮಾರಾಟ ಮಾಡುವುದು ಕಾನೂನು ಬಾಹಿರವಾಗಿರುತ್ತದೆ ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೇಶವಮೂರ್ತಿ ಹೇಳಿದರು.
- ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗಡಿಗಳ ಮೇಲೆ ದಾಳಿ - ದಂಡ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಂಬಾಕು ಮತ್ತು ಅದರ ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದ್ದು 18 ವರ್ಷದ ಒಳಗಿನ ಪ್ರಾಯದವರಿಗೆ ತಂಬಾಕು ತಂಬಾಕಿನ ಉತ್ಪನ್ನ ಮಾರಾಟ ಮಾಡುವುದು ಕಾನೂನು ಬಾಹಿರವಾಗಿರುತ್ತದೆ ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೇಶವಮೂರ್ತಿ ಹೇಳಿದರು.
ತಾಲೂಕಿನ ಹೊನ್ನೇಕೊಡಿಗೆ, ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕು ತನಿಖಾ ದಳದಿಂದ ಪ್ರಾವಿಜನ್ ಸ್ಟೋರ್, ಅಂಗಡಿ, ಹೋಟೆಲ್, ಕ್ಯಾಂಟೀನ್ ಗಳ ಮೇಲೆ ದಾಳಿ ನಡೆಸಿ ಮಾತನಾಡಿ, ಪ್ರತಿ ಅಂಗಡಿಯಲ್ಲಿ ಧೂಮಪಾನ ನಿಷೇಧಿಸಿದೆ. 18 ವರ್ಷದ ಒಳಗಿನ ಮಕ್ಕಳಿಗೆ ಮಾರಾಟ ಮಾಡಲಾಗುವುದಿಲ್ಲ ಎಂಬ ನಾಮಫಲಕವನ್ನ ಕಡ್ಡಾಯವಾಗಿ ಅಳವಡಿಸಬೇಕು. ನಕಲಿ ಉತ್ಪನ್ನಗಳ ಕಡೆ ಜಾಗೃತೆ ವಹಿಸಬೇಕು. ಅವಧಿ ಮೀರಿದ ಉತ್ಪನ್ನಗಳನ್ನು ಮಾರಾಟ ಮಾಡಬಾರದು. ಕ್ಯಾನ್ಸರ್ ರೋಗ ನಿಯಂತ್ರಿಸಲು ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಕಡಿಮೆ ಮಾಡಿ ಎಲ್ಲ ವ್ಯಾಪಾರಿಗಳು ಸಹಕರಿಸಬೇಕು ಎಂದು ಕೋರಿದರು. ಶಿಕ್ಷಣ ಇಲಾಖೆಯ ರಮೇಶ್ ಮಾತನಾಡಿ, ಶಾಲೆಯ 100 ಮೀಟರ್ ದೂರದಲ್ಲಿ ತಂಬಾಕು ಮತ್ತು ತಂಬಾಕು ಉತ್ಪನ್ನ ಮಾರಾಟ ಮಾಡುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮಾರಾಟ ಮಾಡಿದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲು ಮೇಲಾಧಿಕಾರಿಗಲಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.ನಂತರ ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮಾರಾಟದ ಕುರಿತು ಅರಿವು ಮೂಡಿಸಿ ಏಳು ಪ್ರಕರಣ ದಾಖಲಿಸಿ ₹2300 ದಂಡ ವಿಧಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್, ಬಾಳೆ ಗ್ರಾ.ಪಂ. ಪಿಡಿಒ ಪ್ರೇಮ, ಮೂಡಬಾಗಿಲು ಶಾಲೆಯ ಮುಖ್ಯೋಪಾಧ್ಯಾಯ ಜಯಣ್ಣ, ಗೃಹರಕ್ಷಕ ಇಲಾಖೆ ತಿಮ್ಮೇಶ ಹಾಗೂ ಸುಚಿತ್ರ ಉಪಸ್ಥಿತರಿದ್ದರು.