ಸಾರಾಂಶ
Poster released for Sri Matha Jatra Mahotsav
-ಕೆಂಭಾವಿಯ ಮುದನೂರ ಕೋರಿಸಿದ್ದೇಶ್ವರರ ಪಲ್ಲಕ್ಕಿ ಉತ್ಸವ, ಶ್ರೀಮಠದ ಜಾತ್ರಾ ಮಹೋತ್ಸವ
----ಕನ್ನಡಪ್ರಭ ವಾರ್ತೆ ಸುರಪುರ
ಕೆಂಭಾವಿ ಪಟ್ಟಣದ ಸಮೀಪ ಮುದನೂರ ಗ್ರಾಮದ ಶ್ರೀ ಕೋರಿಸಿದ್ದೇಶ್ವರರ ಪಲ್ಲಕ್ಕಿ ಉತ್ಸವ ಹಾಗೂ ಶ್ರೀಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಯ ಭಿತ್ತಿ ಪತ್ರಿಕೆ ಬಿಡುಗಡೆ ಮಾಡಲಾಯಿತು.ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಸಿದ್ಧಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಫೆ.8 ರಂದು ನಾಲವಾರದ ಪೂಜ್ಯ ಸಿದ್ಧತೋಟೆಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಭವ್ಯ ಮೆರವಣಿಗೆಯೊಂದಿಗೆ ಕುಂಭ, ಕಳಸ ವಾದ್ಯ ವೈಭವದೊಂದಿಗೆ ಸ್ವಾಗತವಿರುವುದು. ನಂತರ ಧಾರ್ಮಿಕ ಕಾರ್ಯಕ್ರಮಗಳು ಜರಗುವವು. ಫೆ.9 ರಂದು ಬೆಳಿಗ್ಗೆ 8ಕ್ಕೆ ಗಂಗಾಸ್ನಾನ, ಪಲ್ಲಕ್ಕಿ ಉತ್ಸವ, ಪುರವಂತರ ಸೇವೆ ನಂತರ ಧರ್ಮಸಭೆ ನಡೆಯಲಿವೆ ಎಂದು ತಿಳಿಸಿದರು.
ನಾಗಯ್ಯಸ್ವಾಮಿ ದೇಸಾಯಿಗುರು ಹುಣಸಗಿ, ಚೆನ್ನಯ್ಯಸ್ವಾಮಿ ಮುದನೂರ, ಮಹಾಂತಯ್ಯ ಸ್ವಾಮಿ ಮುದನೂರ, ಸಿದ್ರಾಮರೆಡ್ಡಿ ಚೌದ್ರಿ, ಚೆನ್ನಪ್ಪಗೌಡ ಬೆಕಿನಾಳ, ಪ್ರಭುಗೌಡ ಹರನಾಳ, ರಾಮನಗೌಡ ರಸ್ತಾಪುರ, ಶಿವಪುತ್ರಪ್ಪಗೌಡ ಅಲ್ಲಿಪುರ, ಗೋಪಾಲರೆಡ್ಡಿ ಹೊಸಮನಿ, ಸುಭಾಷ್‌ರೆಡ್ಡಿ ಹೊಸಮನಿ, ಮಲ್ಲನಗೌಡ ನಗನೂರ, ಬಸ್ಸು ಅಂಗಡಿ, ಈರಣ್ಣ ಹಸ್ಕಿ, ಗೋಪಾಲ್ ಹಜೇರಿ ಇದ್ದರು.-----
ಫೋಟೊ: ಸುರಪುರ ತಾಲೂಕಿನ ಕೆಂಭಾವಿಯ ಮುದನೂರ ಗ್ರಾಮದ ಕೋರಿಸಿದ್ದೇಶ್ವರರ ಪಲ್ಲಕ್ಕಿ ಉತ್ಸವ ಹಾಗೂ ಶ್ರೀಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಯ ಭಿತ್ತಿ ಪತ್ರಿಕೆ ಬಿಡುಗಡೆ ಮಾಡಲಾಯಿತು.28ವೈಡಿಆರ್7