ಅಂಬೇಡ್ಕರ್ ಜಯಂತಿ ಕುರಿತ ಸಭೆ ಮುಂದೂಡಿದ ಕ್ರಮ ಸರಿಯಲ್ಲ: ಶೇಖರ್

| Published : Apr 03 2025, 12:34 AM IST

ಅಂಬೇಡ್ಕರ್ ಜಯಂತಿ ಕುರಿತ ಸಭೆ ಮುಂದೂಡಿದ ಕ್ರಮ ಸರಿಯಲ್ಲ: ಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ಅಂಬೇಡ್ಕರ್ ಅವರ ಜಯಂತಿ ಆಚರಣೆ ಸಂಬಂಧ ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಮತ್ತು ತಹಸಿಲ್ದಾರ್ ಬಸವರಾಜು ಅವರು ಸಭೆ ಮುಂದೂಡಿದ ಕ್ರಮ ಸರಿಯಲ್ಲ ಎಂದು ಪ್ರಗತಿಪರ ವೇದಿಕೆಯ ಸಂಚಾಲಕ ಶೇಖರ ಬುದ್ದ ಹೇಳಿದರು.

ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ

ಅಂಬೇಡ್ಕರ್ ಅವರ ಜಯಂತಿ ಆಚರಣೆ ಸಂಬಂಧ ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಮತ್ತು ತಹಸಿಲ್ದಾರ್ ಬಸವರಾಜು ಅವರು ಸಭೆ ಮುಂದೂಡಿದ ಕ್ರಮ ಸರಿಯಲ್ಲ ಎಂದು ಪ್ರಗತಿಪರ ವೇದಿಕೆಯ ಸಂಚಾಲಕ ಶೇಖರ ಬುದ್ದ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕರು ಸಭೆ ಮುಂದೂಡಿ ಕಪ್ಪಡಿ ಹಾಗೂ ಗುಂಬಳ್ಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಾಬಾ ಸಾಹೇಬರಿಗೆ ಅವಮಾನ ಮಾಡಿದ್ದಾರೆ. ಇದರಿಂದ ಅಂಬೇಡ್ಕರ್ ಅವರು ಅನುಯಾಯಿಯಾದ ಸಾವಿರಾರು ಮಂದಿಗೆ ನೋವುಂಟಾಗಿದೆ. 14ರಂದು ಜಯಂತಿ ಆಚರಣೆ ಸಂಬಂಧ ಇನ್ನು ಸಹ ಸಭೆ ಕರೆದಿಲ್ಲ, ಹಾಗಾಗಿ ಸಭೆ ನಡೆಸುವುದು, ಬಿಡುವುದು ಶಾಸಕರಿಗೆ ಬಿಟ್ಟ ವಿಚಾರ. ಆದರೆ ಶಾಸಕರು ಮತ್ತು ತಹಸೀಲ್ದಾರ್ ಅವರು ಸಭೆಗೂ ಮುನ್ನ ಅಂಬೇಡ್ಕರ್ ಅನುಯಾಯಿಗಳನ್ನು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ನಾನು ಅನೇಕ ಜನಪರ ಹೋರಾಟಗಳನ್ನು ನಡೆಸುವ ಮೂಲಕ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿರುವೆ ಎಂದರು.

ಈ ವೇಳೆ ಸುಮಂತ್, ರಂಜನ್ ಇನ್ನಿತರರು ಇದ್ದರು

--