ಡಾಂಬರ್ ರಸ್ತೆಯಲ್ಲಿ ಗುಂಡಿ: ಅವೈಜ್ಞಾನಿಕ ಕಾಮಗಾರಿಗೆ ಖಂಡಿಸಿ ಗ್ರಾಮಸ್ಥರ ಆಕ್ರೋಶ

| Published : Jun 08 2024, 12:38 AM IST

ಡಾಂಬರ್ ರಸ್ತೆಯಲ್ಲಿ ಗುಂಡಿ: ಅವೈಜ್ಞಾನಿಕ ಕಾಮಗಾರಿಗೆ ಖಂಡಿಸಿ ಗ್ರಾಮಸ್ಥರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ತಿರುಲಾಪುರ ಗ್ರಾಮದ ಬಳಿಯ ಕನಗನಹಳ್ಳಿ- ಕೆರೆತೊಣ್ಣೂರು ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ ಎಲ್ ಆಂಡ್ ಟಿ ಕಂಪನಿ ಗುತ್ತಿಗೆದಾರರು ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆಗಾಗಿ ಕಳೆದ ಒಂದು ವರ್ಷದ ಹಿಂದೆ ಹೊಸದಾಗಿ ಡಾಂಬರೀಕರಣ ಮಾಡಿರುವ ರಸ್ತೆಯನ್ನು ಗುಂಡು ಮಾಡಿ ಪೈಪ್ ಲೈನ್ ಅಳವಡಿಕೆ ಮಾಡುತ್ತಿದ್ದಕ್ಕೆ ಗ್ರಾಮಸ್ಥ ವಿರೋಧ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ತಿರುಲಾಪುರ ಗ್ರಾಮದ ಬಳಿ ಎಲ್ ಆಂಡ್ ಟಿ ಕಂಪನಿ ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿ ಖಂಡಿಸಿ ಸುತ್ತಮುತ್ತಲಿನ ಗ್ರಾಮಸ್ಥರು ಗುತ್ತಿಗೆದಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಿರುಲಾಪುರ ಗ್ರಾಮದ ಬಳಿಯ ಕನಗನಹಳ್ಳಿ- ಕೆರೆತೊಣ್ಣೂರು ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ ಎಲ್ ಆಂಡ್ ಟಿ ಕಂಪನಿ ಗುತ್ತಿಗೆದಾರರು ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆಗಾಗಿ ಕಳೆದ ಒಂದು ವರ್ಷದ ಹಿಂದೆ ಹೊಸದಾಗಿ ಡಾಂಬರೀಕರಣ ಮಾಡಿರುವ ರಸ್ತೆಯನ್ನು ಗುಂಡು ಮಾಡಿ ಪೈಪ್ ಲೈನ್ ಅಳವಡಿಕೆ ಮಾಡುತ್ತಿದ್ದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.

ರಸ್ತೆಯಲ್ಲಿ ಬರುತ್ತಿದ್ದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜುರಿಗೆ ಗ್ರಾಮಸ್ಥರು ವಿಷಯ ತಿಳಿಸಿದಾಗ ಕಾಮಗಾರಿ ವೀಕ್ಷಣೆ ಮಾಡಿ ಹೊಸದಾಗಿ ಮಾಡಿರುವ ಡಾಂಬರ್ ರಸ್ತೆ ಅಗೆದು ಕಾಮಗಾರಿ ಮಾಡುತ್ತಿರುವುದು ಸರಿಯಲ್ಲ ಎಂದು ಗುತ್ತಿಗೆದಾರರ ವಿರುದ್ಧ ಆಕ್ರೋಶ ಹೊರಹಾಕಿದರು.

ಈ ರಸ್ತೆಯಿಂದ ಪಕ್ಕದಲ್ಲಿ ಇರುವ ಖಾಲಿ ಜಾಗದಲ್ಲಿ ರಸ್ತೆ ಪೈಪ್ ಲೈನ್ ಮಾಡಿ ಅಳವಡಿಕೆ ಮಾಡಿ ಅದನ್ನು ಬಿಟ್ಟು ರಸ್ತೆಯನ್ನು ಅಗೆದು ಅಧ್ವಾನಗೊಳಿಸಬೇಡಿ ಎಂದು ತರಾಟೆಗೆ ತೆಗೆದುಕೊಂಡರು. ಪಿಡಬ್ಲೂಡಿ ಎಇಇ ಆದರ್ಶ ಗೆ ವಿಷಯ ತಿಳಿಸಿ ಸ್ಥಳಕ್ಕೆ ಬಂದಾಗ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡು ರಸ್ತೆ ಪಕ್ಕದ ಜಾಗದಲ್ಲಿ ಪೈಪ್ ಲೈನ್ ಅಳವಡಿಕೆ ಮಾಡಿ ಎಂದು ತೆಗೆದಿರುವ ಗುಂಡಿಯನ್ನು ಮುಚ್ಚಿಸಿದರು.

ಕಳೆದ ಹಲವು ವರ್ಷಗಳಿಂದ ಗುಂಡಿಬಿದ್ದು ಅಧ್ವಾನಗೊಂಡಿದ್ದ ಕೆರೆತೊಣ್ಣೂರು-ಕನಗನಹಳ್ಳಿ ಗ್ರಾಮದ ಸಂಪರ್ಕ ರಸ್ತೆಯನ್ನು ಕಳೆದ ಒಂದು ವರ್ಷದ ಹಿಂದೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ರಸ್ತೆಯನ್ನು ಕೋಟ್ಯಂತರ ರು. ಹಣ ಖರ್ಚು ಮಾಡಿ ರಸ್ತೆ ಅಭಿವೃದ್ಧಿಪಡಿಸಿದ್ದರು.

ಇದೀಗ ಹೊಸದಾಗಿ ಮಾಡಿರುವ ರಸ್ತೆಯನ್ನು ಅಗೆದು ಅಧ್ವಾನಗೊಳಿಸುವುದು ರಸ್ತೆಯಲ್ಲಿ ಕಾಮಗಾರಿ ಮಾಡಿಸುವುದಾದರೆ ವೈಜ್ಞಾನಿಕವಾಗಿ ಮಾಡಿ ಅದನ್ನು ಬಿಟ್ಟು ಅವೈಜ್ಞಾನಿಕ ಕಾಮಗಾರಿ ಮಾಡಿಸಬೇಡಿ ಎಂದು ಸ್ಥಳೀಯರು ಲೋಕೋಪಯೋಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಪೈಪ್ ಲೈನ್ ಕಾಮಗಾರಿ ಮಾಡದಂತೆ ಗುತ್ತಿಗೆದಾರರಿಗೆ ಸೂಚಿಸಿದರು.