ಸಾರಾಂಶ
ವಿದ್ಯಾರ್ಥಿಗಳ ಜೀವನದಲ್ಲಿ ತಾವು ಅನುಭವಿಸುತ್ತಿರುವ ಬಡತನ ಹಾಗೂ ಹಸಿವು ಜೀವನಕ್ಕೆ ಪ್ರೇರಣೆ ಆಗಬೇಕೆ ಹೊರತು ಮತ್ಯಾವ ವ್ಯಕ್ತಿಯಲ್ಲ
ಕುಷ್ಟಗಿ: ಸಾಧನೆಗೆ ಬಡತನ ಹಾಗೂ ಸಾಧಿಸಬೇಕೆಂಬ ಹಸಿವು ಪ್ರೇರಣೆಯಾಗಬೇಕು ಎಂದು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಉಪಮಹಾನಿರೀಕ್ಷಕ ರವಿ.ಡಿ.ಚನ್ನಣ್ಣನವರ ಹೇಳಿದರು.
ತಾಲೂಕಿನ ಹಿರೇಮನ್ನಾಪೂರ ಗ್ರಾಮದಲ್ಲಿ ಶ್ರೀಮರಿಶಾಂತವೀರ ಮಹಾಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಸ್ಥೆ ಆಯೋಜಿಸಿದ್ದ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ವಿದ್ಯಾರ್ಥಿಗಳ ಜೀವನದಲ್ಲಿ ತಾವು ಅನುಭವಿಸುತ್ತಿರುವ ಬಡತನ ಹಾಗೂ ಹಸಿವು ಜೀವನಕ್ಕೆ ಪ್ರೇರಣೆ ಆಗಬೇಕೆ ಹೊರತು ಮತ್ಯಾವ ವ್ಯಕ್ತಿಯಲ್ಲ ಸಾಧನೆ ಮಾಡಲು ದೃಢ ನಿರ್ಧಾರ, ಕಠಿಣ ಪರಿಶ್ರಮ ಮುಖ್ಯ ಹಾಗೂ ಕುಟುಂಬದ ಪರಿಸ್ಥಿತಿ ಒಬ್ಬ ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವದಕ್ಕೆ ಕಾರಣವಾಗುತ್ತದೆ ಆದ ಕಾರಣ ಮನೆಯಲ್ಲಿ ಎಷ್ಟೆ ಕಷ್ಟಗಳಿದ್ದರೂ ಅದನ್ನೆಲ್ಲವನ್ನು ಮೆಟ್ಟಿ ನಿಂತು ಉನ್ನತ ಶಿಕ್ಷಣ ಪಡೆದುಕೊಳ್ಳುವ ಮೂಲಕ ಸಾಧಿಸಬೇಕು ಎಂದರು.
ಈ ಸಂವಾದ ಕಾರ್ಯಕ್ರಮದಲ್ಲಿ ಕುಷ್ಟಗಿ ಪಿಎಸ್ಐ ಹನುಮಂತಪ್ಪ ತಳವಾರ, ಮಾನಪ್ಪ ತಳವಾರ, ಮಂಜುನಾಥಗೌಡ ಪಾಟೀಲ, ಶರಣಪ್ಪ ಗುಮಗೇರಿ, ಮಂಜುನಾಥ ಕಜ್ಜಿ, ಪರಸಪ್ಪ ಅಳ್ಳಳ್ಳಿ, ಆರ್.ಕೆ. ಸುಬೇದಾರ, ಬಸನಗೌಡ ಪೊಲೀಸ್ ಪಾಟೀಲ್, ದೇವಪ್ಪ ಗಂಗನಾಳ, ಮಾನಪ್ಪ ಶಾಖಾಪುರ ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಇದ್ದರು.ಶರಣಪ್ಪ ಲೈನದ ಸ್ವಾಗತಿಸಿದರು. ಶಿವಾನಂದ ಹಿರೇಮಠ ನಿರೂಪಿಸಿ ವಂದಿಸಿದರು. ಇದಕ್ಕೂ ಮೊದಲು ರವಿ ಚನ್ನಣ್ಣವರು ಕುಷ್ಟಗಿಯಲ್ಲಿನ ಅಗ್ನಿಶಾಮಕ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.