ಸಾರಾಂಶ
ಸಾಣಾಪುರ, ಜಂಗ್ಲಿ, ಹನುಮನಹಳ್ಳಿ, ಅಂಜನಹಳ್ಳಿ, ರುಷಿಮುಖ ಪರ್ವತ ಸೇರಿದಂತೆ ತುಂಗಭದ್ರಾ ನದಿ ತೀರದಲ್ಲಿರುವ ಅನಧಿಕೃತ ರೆಸಾರ್ಟ್ ಮತ್ತು ಹೋಂ ಸ್ಚೇಗಳ ಮೇಲೆ ತಹಸೀಲ್ದಾರ್ ನೇತೃತ್ವದಲ್ಲಿ ಎರಡು ತಂಡ ರಚಿಸಿ ದಾಳಿ ನಡೆಸಲಾಗಿದೆ.
ಗಂಗಾವತಿ:
ಸಾಣಾಪುರ ಬಳಿ ನಡೆದ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲಿನ ಗ್ಯಾಂಗ್‌ರೇಪ್‌ನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು, ಮಂಗಳವಾರ ಅನಧಿಕೃತ ರೆಸಾರ್ಟ್ ಹಾಗೂ ಹೋಂ ಸ್ಟೇಗಳ ಮೇಲೆ ದಾಳಿ ನಡೆಸಿ ಸುಮಾರು 100 ರೆಸಾರ್ಟ್‌ಗಳ ವಿದ್ಯುತ್ ಕಡಿತಗೊಳಿಸಿದ್ದಾರೆ.ಸಾಣಾಪುರ, ಜಂಗ್ಲಿ, ಹನುಮನಹಳ್ಳಿ, ಅಂಜನಹಳ್ಳಿ, ರುಷಿಮುಖ ಪರ್ವತ ಸೇರಿದಂತೆ ತುಂಗಭದ್ರಾ ನದಿ ತೀರದಲ್ಲಿರುವ ಅನಧಿಕೃತ ರೆಸಾರ್ಟ್ ಮತ್ತು ಹೋಂ ಸ್ಚೇಗಳ ಮೇಲೆ ತಹಸೀಲ್ದಾರ್ ನೇತೃತ್ವದಲ್ಲಿ ಎರಡು ತಂಡ ರಚಿಸಿ ದಾಳಿ ನಡೆಸಲಾಗಿದೆ.
ತಹಸೀಲ್ದಾರ್ ನಾಗರಾಜ್ ಮತ್ತು ತಹಸೀಲ್ದಾರ್ ಗ್ರೇಡ್ -2 ಮಹಾಂತಗೌಡ ನೇತೃತ್ವದಲ್ಲಿ ತಂಡ ರಚಿಸಿದ್ದು, ಜೆಸ್ಕಾಂ, ತಾಲೂಕು ಪಂಚಾಯಿತಿ, ಇಒ, ಅರಣ್ಯ ಇಲಾಖೆ. ಗ್ರಾಮೀಣ ಪೊಲೀಸ್ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಇದ್ದು 80ಕ್ಕೂ ಹೆಚ್ಚು ರೆಸಾರ್ಟ್ ಮತ್ತು ಹೋಂ ಸ್ಟೇ ಮೇಲೆ ದಾಳಿ ನಡೆಸಿ ಅವುಘಲ ವಿದ್ಯುತ್ ಕಡಿತಗೊಳಿಸಿದ್ದಾರೆ. ಜತೆಗೆ ನ್ಯಾಯಾಲಯದಲ್ಲಿ ಪ್ರಕರಣಗಳಿದ್ದ 20 ರೆಸಾರ್ಟ್‌ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಅವುಗಳ ವಿದ್ಯುತ್ ಸಹ ಕಡಿತಗೊಳಿಸಿದ್ದಾರೆ. ಅಧಿಕಾರಿಗಳು ದಿಢೀರ್ ದಾಳಿ ನಡೆಸಿದಕ್ಕೆ ರೆಸಾರ್ಟ್ ಮಾಲೀಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ತಮಗೆ ಯಾವುದೇ ರೀತಿಯ ನೋಟಿಸ್ ನೀಡಿಲ್ಲ. ಅಲ್ಲದೇ ರೆಸಾರ್ಟ್‌ಗಳ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ದಾಳಿ ನಡೆಸಿರುವುದು ಉಲ್ಲಂಘನೆಯಾಗಿದೆ ಎಂದು ಅರೋಪಿಸಿದ್ದಾರೆ.ಕಾಲ್ಕಿತ್ತಿದ ವಿದೇಶಿಯರು:
ರೆಸಾರ್ಟ್‌ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತಯೇ ಅಲ್ಲಿದ್ದ ವಿದೇಶಿಗರು ಕಾಲ್ಕಿತ್ತಿದ್ದಾರೆ. ವಿದ್ಯುತ್ ಕಡಿತ, ರೆಸಾರ್ಟ್‌ಗಳಿಗೆ ಬೀಗ ಹಾಕಿದ್ದರಿಂದ ನಿರ್ಗಮಿಸಿದ್ದಾರೆ.ಸಾಣಾಪುರ ಬಳಿ ನಡೆದ ಗ್ಯಾಂಗ್‌ರೇಪ್ ಪ್ರಕರಣದ ಹಿನ್ನೆಲೆ 80ಕ್ಕೂ ಅಧಿಕ ಅನಧಿಕೃತ ರೆಸಾರ್ಟ್ ಮತ್ತು ಹೋಂ ಸ್ಟೇಗಳ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿ ವಿದ್ಯುತ್ ಕಡಿತಗೊಳಿಸಿದೆ. ನ್ಯಾಯಲಯದಲ್ಲಿರುವ ರೆಸಾರ್ಟ್‌ಗಳ ವಿದ್ಯುತ್ ಕಡಿತಗೊಳಿಸಲಾಗಿದೆ ಎಂದು ಗಂಗಾವತಿ ತಹಸೀಲ್ದಾರ್ ನಾಗರಾಜ್ ಹೇಳಿದರು.