ಸಾರಾಂಶ
ಐಗೂರು ಕಾಜೂರು ಹಾಗೂ ಯಡವಾರೆ ಗ್ರಾಮದಲ್ಲಿ ಕಳೆದ 13ದಿನಗಳಿಂದ ವಿದ್ಯುತ್ ಕಡಿತಗೊಂಡಿದೆ. ಕತ್ತಲೆಯಲ್ಲಿ ಗ್ರಾಮಗಳು ಮುಳುಗಿದೆ.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಇಲ್ಲಿಗೆ ಸಮೀಪದ ಐಗೂರು ಕಾಜೂರು ಹಾಗೂ ಯಡವಾರೆ ಗ್ರಾಮದಲ್ಲಿ ಕಳೆದ 13 ದಿನಗಳಿಂದ ವಿದ್ಯುತ್ ಕಡಿಗೊಂಡಿದ್ದು, ಕತ್ತಲೆಯಲ್ಲಿ ಗ್ರಾಮಗಳು ಮುಳುಗಿದೆ. ಮತ್ತೊಂದೆಡೆ ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೆ ಜನರು ಹಾಹಾಕಾರ ಪಡುವಂತಾಗಿದೆ. ಜುಲೈ ತಿಂಗಳಿನಲ್ಲಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಗೆ ಮರಗಳು ಎಲ್ಲೆಡೆ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ್ದು, ವಿದ್ಯುತ್ ಕಂಬ, ತಂತಿಗಳ ಮೇಲೆ ಮರ ಬಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಚೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಳೆ ಗಾಳಿ ಕಡಿಮೆಯಾಗಿದ್ದು, ಬಿಸಿಲಿನ ಈಣುಕು ನೋಟ ಕಾಣುತ್ತಿದ್ದರೂ ವಿದ್ಯುತ್ ಯಾವಾಗ ಬರುತ್ತದೆ. ಕುಡಿಯುವ ನೀರಿನ ಸರಬರಾಜು ಎಂದು ಲಭಿಸುತ್ತದೆ ಎಂದು ಗ್ರಾಮಸ್ಥರು ಕಾಯುತ್ತಿದ್ದಾರೆ.ಈ ಮೊದಲು ಸೋಮವಾರಪೇಟೆ ವಿದ್ಯುತ್ ಕೆ.ವಿ.ಕೇಂದ್ರದಿಂದ ಐಗೂರು ವಿಭಾಗಕ್ಕೆ ವಿದ್ಯುತ್ ಸರಬರಾಜಾಗುತ್ತಿರುವುದರಿಂದ ಆಗಾಗ್ಗೆ ವಿದ್ಯುತ್ ವ್ಯತ್ಯಯ ಉಂಟಾಗಲು ಕಾರಣ ಎನ್ನಲಾಗಿದೆ.