ಸಾರಾಂಶ
ಶಿವಮೊಗ್ಗ : ತುರ್ತು ನಿರ್ವಹಣಾ ಕಾಮಗಾರಿ ಪ್ರಯುಕ್ತ ಏ.7ರಂದು ಬೆಳಗ್ಗೆ 10ರಿಂದ ಸಂಜೆ 6ವರೆಗೆ ಉಂಬ್ಳೇಬೈಲು, ಲಕ್ಕಿನಕೊಪ್ಪ, ಮತ್ತೂರು ಕುಡಿಯುವ ನೀರಿನ ಘಟಕ, ಸಂತೇಕಡೂರು, ಗಣಿದಾಳು ವಿದ್ಯುತ್ ಕೇಂದ್ರಗಳಿಂದ ಸರಬರಾಜು ಪಡೆಯುವ ಸಂತೇಕಡೂರು, ಶ್ರೀರಾಮನಗರ, ರಾಂಪುರ, ಕೂರಲಹಳ್ಳಿ, ಕಾಚೀನಕಟ್ಟೆ, ಜ್ಯೋತಿನಗರ, ದೊಡ್ಡಿಬೀಳು, ವಿನಾಯಕನಗರ, ಲಕ್ಕಿನಕೊಪ್ಪ, ತೋಟದಕೆರೆ, ಹುರಳಿಹಳ್ಳಿ, ಗಣಿದಾಳು, ಉಂಬ್ಳೇಬೈಲು, ಕಣಗಲಸರ, ಮರಾಠಿ ಕ್ಯಾಂಪ್, ಸಾಲಿಗೆರೆ, ಕೈತೊಟ್ಟಿಲು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ ಎಂದು ಮೆಸ್ಕಾಂ ಎಂಜಿನಿಯರ್ ತಿಳಿಸಿದ್ದಾರೆ.
-------ಏರ್‌ಪೋರ್ಸ್ ಮಾಜಿ ಸೈನಿಕರಿಗಾಗಿ ಸ್ಪರ್ಶ್ ಸಹಾಯಕ ಶಿಬಿರಶಿವಮೊಗ್ಗ: ಏರ್‌ಫೋರ್ಸ್ ಅಸೋಸಿಯೇಷನ್ (ಕರ್ನಾಟಕ ಬ್ರಾಂಚ್) ಮಾಜಿ ಸೈನಿಕರಿಗಾಗಿ ಏ.18 ಮತ್ತು 19 ರಂದು ಎರಡು ದಿನಗಳ ಸ್ಪರ್ಶ್ ಸಹಾಯಕ ಶಿಬಿರವನ್ನು ನಗರದ ಸರ್ಕಾರಿ ನೌಕರರ ಸಂಘದ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿದ್ದು, ಏರ್‌ಫೋರ್ಸ್ ಮಾಜಿ ಸೈನಿಕರುಗಳು ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080-23513319/23411081 ಹಾಗೂ ಇಮೇಲ್: afa.bangalore@gmail.com / afakarnataka@gmail.com ಗಳನ್ನು ಸಂಪರ್ಕಿಸಬಹುದು.------------------------
;Resize=(128,128))
;Resize=(128,128))
;Resize=(128,128))
;Resize=(128,128))