ಸಾರಾಂಶ
ಹಗಲಿರುಳು ಸೇವೆ ಸಲ್ಲಿಸಿ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಲು ಶ್ರಮಿಸಿ ನಿವೃತ್ತರಾಗುತ್ತಿರುವ ಸಿಬ್ಬಂದಿ ಸೇವೆಯನ್ನು ಸಂಸ್ಥೆ ಸ್ಮರಿಸುತ್ತದೆ.
ಯಲ್ಲಾಪುರ: ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದಾಗ ಮಾತ್ರ ನಿವೃತ್ತಿಯ ವರೆಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯ. ಅಧಿಕಾರ ಸಿಕ್ಕಾಗ ದುರುಪಯೋಗ ಪಡಿಸಿಕೊಳ್ಖದೇ ಸದ್ಬಳಕೆ ಮಾಡಿಕೊಳ್ಳಿ ಎಂದು ವಾಕರಸಾ ಸಂಸ್ಥೆಯ ಶಿರಸಿ ವಿಭಾಗದ ಉಗ್ರಾಣಾಧಿಕಾರಿ ಟಿ.ಎಂ. ಚಂದ್ರಶೇಖರ ಹೇಳಿದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯಲ್ಲಾಪುರ ಘಟಕದಲ್ಲಿ ನಿವೃತ್ತರಾದ ನೌಕರರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಹಗಲಿರುಳು ಸೇವೆ ಸಲ್ಲಿಸಿ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಲು ಶ್ರಮಿಸಿ ನಿವೃತ್ತರಾಗುತ್ತಿರುವ ಸಿಬ್ಬಂದಿ ಸೇವೆಯನ್ನು ಸಂಸ್ಥೆ ಸ್ಮರಿಸುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಂತೋಷ ವೆರ್ಣೇಕರ್ ಮಾತನಾಡಿ, ಈಗ ನಿವೃತ್ತಿ ಆಗುತ್ತಿರುವ ಐದು ಸಿಬ್ಬಂದಿ ಉತ್ತಮ ಸೇವೆ ಸಲ್ಲಿಸಿ ಸಂಸ್ಥೆಯ ಏಳಿಗೆಗೆ ಶ್ರಮಿಸಿದ್ದಾರೆ. ನಮ್ಮ ಸೇವೆ ಸುಲಭದ ಕರ್ತವ್ಯವಲ್ಲ ಎಂದರು.
ಸೇವೆಯಿಂದ ನಿವೃತ್ತರಾದ ಸಂಚಾರ ನಿಯಂತ್ರಕರಾದ ದೇವಿಪ್ರಸಾದ ಮಾಳಮ್ಮನವರ, ಶ್ರೀಪಾದ ಬಾಡಕರ್, ಮಹದೇವ ಮಾದರ ಹಾಗೂ ನಿರ್ವಾಹಕರಾದ ಮಹದೇವ ನಾಯ್ಕ, ರಸ್ತುಂಅಲಿ ಜಮಖಂಡಿ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.ಘಟಕ ವ್ಯವಸ್ಥಾಪಕ ಸಂತೋಷ ವರ್ಣೇಕರ್ ಅವರನ್ನು ನಿವೃತ್ತ ನೌಕರರು ಅಭಿನಂದಿಸಿದರು. ಶಂಕರಮ್ಮ ಎಸ್.ಎಲ್. ವಂದಿಸಿದರು. ನಿವೃತ್ತರ ಕುಟುಂಬಸ್ಥರು ಉಪಸ್ಥಿತರಿದ್ದರು
ಸನ್ಮಾನ ಸ್ವೀಕರಿಸಿದ ಶ್ರೀಪಾದ ಬಾಡ್ಕರ್, ಮಹದೇವ ಮಾದರ, ದೇವಿಪ್ರಸಾದ ಮಾಳಮ್ಮನವರ್, ನಿವೃತ್ತ ನೌಕರ ರವೀಂದ್ರ ಪೋಕಳೆ, ಮಾದರ ಅವರ ಪತ್ನಿ ಎನ್.ವೈ. ಚೆನ್ನಮ್ಮನವರ್ ಮಾತನಾಡಿದರು.ಸುರೇಶ ನಾಯಕ, ಸಂಚಾರ ನಿರೀಕ್ಷಕ ನಾಗರಾಜ ಗಾಣಿಗೇರ ಉಪಸ್ಥಿತರಿದ್ದರು. ಶಿವನ ಗೌಡ ಪ್ರಾರ್ಥಿಸಿದರು. ಜಿ. ಪುಷ್ಪಾ ಸ್ವಾಗತಿಸಿದರು. ಎನ್.ಎಂ. ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಶಂಕರಮ್ಮ ಎಸ್.ಎಲ್. ವಂದಿಸಿದರು.