ಕುಶಾಲನಗರ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಪ್ರದೀಪ್ ಬಿ ಆರ್ ಅಧಿಕಾರ ವಹಿಸಿಕೊಂಡರು.
ಕುಶಾಲನಗರ: ಕುಶಾಲನಗರ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಪ್ರದೀಪ್ ಬಿ ಆರ್ ಅಧಿಕಾರ ವಹಿಸಿಕೊಂಡರು.
ಕಳೆದ ಒಂದು ವರ್ಷದಿಂದ ತೆರವುಗೊಂಡಿದ್ದ ಹುದ್ದೆಗೆ ಹೊಳೆನರಸೀಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರದೀಪ್ ಅವರನ್ನು ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ. ಪ್ರದೀಪ್ ಅವರು ಈ ಹಿಂದೆ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದರು.--------------------------------------------
ಇಂದು ಪೊನ್ನಂಪೇಟೆಯಲ್ಲಿ ತರಬೇತಿ ಕಾರ್ಯಕ್ರಮಮಡಿಕೇರಿ: ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು, ಬೆಂಗಳೂರು ಅವರ ಸೂಚನೆಯಂತೆ ಡಿಜಿಟಲ್ ಇ-ಸ್ಟಾಂಪ್ ವ್ಯವಸ್ಥೆಯನ್ನು ರಾಜ್ಯಾದ್ಯಂತ ಜಾರಿಗೊಳಿಸುವ ಸಂಬಂಧ ಕೊಡಗು ಜಿಲ್ಲೆಯ ಪೊನ್ನಂಪೇಟೆ ಉಪ ನೋಂದಣಿ ಕಚೇರಿಗೆ ವ್ಯಾಪ್ತಿಗೆ ಬರುವ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ನೆಮ್ಮದಿ ಕೇಂದ್ರ ಹಾಗೂ ಎಸ್‌ಎಚ್‌ಸಿಐಎಲ್ ಮೂಲಕ ಇ-ಸ್ಟಾಂಪ್ ಮಾರಾಟ ವ್ಯವಸ್ಥೆ ನಿರ್ವಹಿಸುತ್ತಿರುವ ಸಹಕಾರ ಸೌಹಾರ್ಧ ಸಂಸ್ಥೆಗಳ ಸಿಬ್ಬಂದಿಯವರಿಗೆ ತರಬೇತಿ ಕಾರ್ಯಕ್ರಮ ಜ. 10 ರಂದು ಮಧ್ಯಾಹ್ನ 1ರಿಂದ 2 ಗಂಟೆಯವರೆಗೆ ಪೊನ್ನಂಪೇಟೆ ಉಪ ನೋಂದಣಾಧಿಕಾರಿ ಅವರ ಕಚೇರಿಯ ಆವರಣದಲ್ಲಿ ನಡೆಯಲಿದೆ ಎಂದು ಪೊನ್ನಂಪೇಟೆ ಉಪ ನೋಂದಣಾಧಿಕಾರಿ ತಿಳಿಸಿದ್ದಾರೆ.