ಪ್ರಧಾನಮಂತ್ರಿ ಸ್ವನಿಧಿ ಯೋಜನೆ ₹ 15 ಸಾವಿರಕ್ಕೆ ಏರಿಕೆ

| Published : Oct 01 2025, 01:01 AM IST

ಸಾರಾಂಶ

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಫಲಾನುಭವಿಗಳಿಗೆ ಆರಂಭಿಕ ೧೦ ಸಾವಿರ ಬದಲಾಗಿ ೧೫ ಸಾವಿರದ ಹಂತ ಆರಂಭಿಸಲಾಗಿದೆ. ಈಗಾಗಲೇ ಮೊದಲ ಹಂತದ ಸಾಲ ಯೋಜನೆ ಅರ್ಹ ಫಲಾನುಭವಿಗಳಿಗೆ ಯೋಜನೆಯ ನಿಧಿಯಲ್ಲಿ ಏರಿಕೆಯಾಗಿದೆ. ಯೋಜನೆಯಡಿ ಏರಿಕೆಯ ಹಂತಗಳನ್ನು ಪರಿಗಣಿಸಲಾಗಿದೆ ಎಂದು ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ನಾಗನಗೌಡ್ರ ಹೇಳಿದರು.

ಶಿಗ್ಗಾಂವಿ: ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಫಲಾನುಭವಿಗಳಿಗೆ ಆರಂಭಿಕ ೧೦ ಸಾವಿರ ಬದಲಾಗಿ ೧೫ ಸಾವಿರದ ಹಂತ ಆರಂಭಿಸಲಾಗಿದೆ. ಈಗಾಗಲೇ ಮೊದಲ ಹಂತದ ಸಾಲ ಯೋಜನೆ ಅರ್ಹ ಫಲಾನುಭವಿಗಳಿಗೆ ಯೋಜನೆಯ ನಿಧಿಯಲ್ಲಿ ಏರಿಕೆಯಾಗಿದೆ. ಯೋಜನೆಯಡಿ ಏರಿಕೆಯ ಹಂತಗಳನ್ನು ಪರಿಗಣಿಸಲಾಗಿದೆ ಎಂದು ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ನಾಗನಗೌಡ್ರ ಹೇಳಿದರು.ಪಟ್ಟಣದ ಪುರಸಭೆಯ ಸಭಾಭವನದಲ್ಲಿ ಪಿಎಂ ಸ್ವನಿಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಬೀದಿಬದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಯೋಜನೆಯ ಲೋಕ ಕಲ್ಯಾಣ ಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾಲಕಾಲಕ್ಕೆ ಸಾಲವನ್ನು ಭರಣ ಮಾಡಿ ವ್ಯಾಪಾರೋದ್ಯಮದ ಜೊತೆಗೆ ಅರ್ಥಿಕ ಚೇತನವನ್ನು ಪಡೆಯುವಂತೆ ಸಲಹೆ ನೀಡಿದರು. ಅಲ್ಲದೇ ಹಲವಾರು ವ್ಯಾಪಾರಿಗಳು ಇತ್ತೀಚಿಗೆ ಬ್ಯಾಂಕ್‌ನವರು ಕೊಟ್ಟ ಕ್ಯೂಆರ್ ಕೋಡ್ ವ್ಯವಸ್ಥೆಯ ಸ್ವೀಕೃತಿಯನ್ನು ಕಡ್ಡಾಯ ಬಳಸಿ, ತೆರಿಗೆ ಸಂಬಂಧಿಸಿದವರು ಯಾರೋ ನೋಟಿಸ್ ನೀಡುವುದಿಲ್ಲ. ಅಂತಹ ಆತಂಕಬೇಡ, ಇದರಿಂದಾಗಿ ಬ್ಯಾಂಕ್ ಹಣಕಾಸು ವ್ಯವಹಾರ ಸುಲಭವಾಗುತ್ತದೆ. ನಿಮ್ಮ ಖಾತೆಯ ಪೋನ್ ನಂಬರ್ ಸರಿಯಾಗಿರಿಸಿ. ಅನಾವಶ್ಯಕ ಆ್ಯಪ್ ಡೌನ್‌ಲೋಡ್‌ ಮಾಡುವಲ್ಲಿ ಎಚ್ಚರವಿರಿ. ಬ್ಯಾಂಕಿನವರು ಎಂದು ಖಾತೆ ಮಾಹಿತಿ ನೀಡಬೇಡಿ, ಯಾರಿಗೂ ಓಟಿಪಿ ಬಗ್ಗೆ ಹಂಚಿಕೆ ನೀಡಬೇಡಿ ಎಂದು ಸಲಹೆ ನೀಡಿದರು.ಕೆನರಾ ಬ್ಯಾಂಕ್ ವ್ಯವಸ್ಥಾಪಕ ವಿಶ್ವಜೀತ್ ಮಾತನಾಡಿ, ಎಲ್ಲಾ ರಾಷ್ಟ್ರೀಕೃತ ಬ್ಯಾಂಕಿನಲ್ಲೂ ಸಾಮಾಜಿಕ ಭದ್ರತಾ ಯೋಜನೆಯಡಿ ಸರ್ಕಾರ ಸಾಕಷ್ಟು ಅರ್ಥಿಕ ಅವಕಾಶ ಮಾಡಿಕೊಟ್ಟಿದೆ. ನಿಮ್ಮ ಬ್ಯಾಂಕ್ ವ್ಯವಹಾರ ಸರಳೀಕರಣವಿರಲಿ. ಬ್ಯಾಂಕ್ ಒಡನಾಟ ಅಲ್ಪಾವಧಿ, ದೀರ್ಘಾವಧಿ. ಗೃಹ ಸಾಲಸೌಲಭ್ಯತೆ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅವಶ್ಯಕ ಸಾಲ ಯೋಜನೆಗಳು ಲಭ್ಯತೆಯಿದೆ. ಸಾಲ ನೀಡುವಾಗ ಬ್ಯಾಂಕ್ ಮಾನದಂಡ ರೂಪಿಸಿದೆ. ನಿಮ್ಮ ವ್ಯವಹಾರದ ಉಳಿತಾಯವನ್ನು ನಿಮ್ಮ ಖಾತೆಯ ಕ್ಯೂ-ಆರ್ ಕೋಡ್ ಬಳಸಿ ವ್ಯವಹರಿಸಿ, ಇದರಿಂದ ದಿನದ ಸಣ್ಣ ಉಳಿತಾಯ ವಾರ್ಷಿಕ ದೊಡ್ಡಮೊತ್ತವಾಗುವುದು. ಇದರಿಂದ ನಿಮ್ಮ ಜೀವನೋಪಾಯ ಬೆಳೆಯುತ್ತದೆ. ಉದ್ಯಮಶೀಲತೆ ವ್ಯಾಪ್ತಿ ವಿಸ್ಥರಿಸುತ್ತದೆ. ವ್ಯವಹಾರ ಕೌಶಲ್ಯತೆಗಳು ಬ್ಯಾಂಕ್ ಮೂಲಕ ಬೆಳೆಯುತ್ತವೆ ಎಂದರು.ಕಾರ್ಯಕ್ರಮದಲ್ಲಿ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಸ್.ವಿ. ಚಿಕ್ಕಮಠ ಅಧ್ಯಕ್ಷತೆವಹಿಸಿದ್ದರು. ಕೆವಿಜಿ ಬ್ಯಾಂಕ್ ವ್ಯವಸ್ಥಾಪಕ ಶ್ರೀಧರ, ಆರೋಗ್ಯ ಇಲಾಖೆಯ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಬಸನಗೌಡಾ ಭರಮಗೌಡ್ರ. ಲಕ್ಷ್ಮಣ ಲಕ್ಷ್ಮೇಶ್ವರ, ಪುರಸಭೆಯ ವ್ಯವಸ್ಥಾಪಕಿ ಮಂಗಳಗೌರಿ ಪಾಟೀಲ, ಜಮಾಧ್ದೂನ್ ಕೂಸನೂರು, ಹುಸೇನ್‌ಸಾಬ ಕರೀಂನವರ, ಲಲಿತಾ ಬಡಿಗೇರ, ಫಕ್ಕೀರಪ್ಪ ಕಾಂಬಳೆ ವೇದಿಕೆಯಲ್ಲಿದ್ದರು. ರಾಜು ಕೆಂಬಾವಿ ಕಾರ್ಯಕ್ರಮ ನಿರೂಪಿಸಿದರು.