ಸಾರಾಂಶ
ಬಾಲಪ್ರತಿಭೆಗಳಾದ ಪಾದೆಕಲ್ಲು ವಿಭು ಭಟ್ (ಸಂಸ್ಕೃತ), ತನುಶ್ರೀ ಪಿತ್ರೋಡಿ (ಯೋಗ), ಪ್ರಚೇತ್ ರಾಮ್ ಕಜೆ (ಗಮಕ ವಾಚನ), ಪ್ರದ್ಯುಮ್ನ ಭಾಗವತ್ ಕೆ. (ಕೊಳಲು), ಗಾರ್ಗಿ ದೇವಿ (ಶಾಸ್ತ್ರೀಯ ನೃತ್ಯ) ಅವರಿಗೆ ಪ್ರಮಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಡಾ.ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ೧೦ನೇ ವರ್ಷದ ಪ್ರಮಾ ಪ್ರಶಸ್ತಿ-೨೦೨೪ ಪ್ರದಾನ ಸಮಾರಂಭ ಮಣಿಪಾಲ ಡಾಟ್ ಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.ಬಾಲಪ್ರತಿಭೆಗಳಾದ ಪಾದೆಕಲ್ಲು ವಿಭು ಭಟ್ (ಸಂಸ್ಕೃತ), ತನುಶ್ರೀ ಪಿತ್ರೋಡಿ (ಯೋಗ), ಪ್ರಚೇತ್ ರಾಮ್ ಕಜೆ (ಗಮಕ ವಾಚನ), ಪ್ರದ್ಯುಮ್ನ ಭಾಗವತ್ ಕೆ. (ಕೊಳಲು), ಗಾರ್ಗಿ ದೇವಿ (ಶಾಸ್ತ್ರೀಯ ನೃತ್ಯ) ಅವರಿಗೆ ಪ್ರಮಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆ (ಡಯಟ್) ಪ್ರಾಂಶುಪಾಲ ಡಾ.ಅಶೋಕ್ ಕಾಮತ್, ಸಮಾಜದಲ್ಲಿ ಬಾಲಪ್ರತಿಭೆಗಳ ಗುರುತಿಸುವಿಕೆ ಹಾಗೂ ಪೋಷಣೆಗಳ ಜವಾಬ್ದಾರಿಗಳ ಬಗ್ಗೆ ತಿಳಿ ಹೇಳಿದರು. ಸನ್ಮಾನಿಸಲ್ಪಟ್ಟ ಬಾಲಪ್ರತಿಭೆಗಳು ತಮ್ಮ ಕ್ಷೇತ್ರದ ಪರಿಣತಿಯ ಬಗ್ಗೆ ಪ್ರದರ್ಶನ ನೀಡಿದರು.ಟ್ರಸ್ಟ್‌ನ ಡಾ. ಅನಸೂಯ ದೇವಿ ಸ್ವಾಗತಿಸಿದರು. ಟ್ರಸ್ಟ್‌ನ ಅಧ್ಯಕ್ಷೆ ದೇವಕಿ ಕೆ. ಭಟ್, ಟ್ರಸ್ಟ್‌ನ ಪದಾಧಿಕಾರಿಗಳಾದ ಡಾ. ಬಾಲಚಂದ್ರ ಆಚಾರ್ ಹಾಗೂ ವಿದುಷಿ ಪವನ ಬಿ. ಆಚಾರ್ ಉಪಸ್ಥಿತರಿದ್ದರು. ಪಳ್ಳತ್ತಡ್ಕ ಕೇಶವ ಭಟ್ ಅವರ ಮೊಮ್ಮಗಳಾದ ಪ್ರಮಾಳ ಸಂಸ್ಮರಣೆ ಮಾಡಲಾಯಿತು. ನಮ್ರತಾ ರಾವ್ ಕಾರ್ಯಕ್ರಮ ನಿರ್ವಹಿಸಿದರು.