ಸಾರಾಂಶ
ಹಿಂದು, ಮುಸ್ಲಿಂ, ಕ್ರಿಶ್ಚನ್ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕಾರ್ಯ ಸಿಎಂ ಮಾಡುತ್ತಿರುವುದು ಸರಿಯಲ್ಲ
ಕನ್ನಡಪ್ರಭ ವಾರ್ತೆ ರಾಯಬಾಗ
ಸಿಎಂ ಸಿದ್ದರಾಮಯ್ಯರು ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಂ ಮತ ಸೆಳೆಯಲು ಹಾಗೂ ರಾಜಕೀಯ ಲಾಭಕ್ಕಾಗಿ ಹಿಜಾಬ್ ನಿಷೇಧದ ಹೇಳಿಕೆ ನೀಡಿರುವುದು ಖಂಡನೀಯ. ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಆಗ್ರಹಿಸಿದರು. ಪಟ್ಟಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು, ಮುಸ್ಲಿಂ, ಕ್ರಿಶ್ಚನ್ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕಾರ್ಯ ಸಿಎಂ ಮಾಡುತ್ತಿರುವುದು ಸರಿಯಲ್ಲ. ವಿದ್ಯಾರ್ಥಿಗಳಲ್ಲಿ ಭೇದಭಾವ ಉಂಟು ಮಾಡುತ್ತಿರುವುದು ಮುಖ್ಯಮಂತ್ರಿಗಳಿಗೆ ಶೋಭೆ ತರುವುದಿಲ್ಲ. ಹಿಜಾಬ್‌ಗೆ ಮತ್ತೆ ಅವಕಾಶ ಕಲ್ಪಿಸಿದರೇ ಹಿಂದು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬರುತ್ತಾರೆ ಎಂದು ಎಚ್ಚರಿಸಿದರು.ರಾಜ್ಯದಲ್ಲಿನ ಶಾಂತಿ ಕದಡುವ ಕೆಲಸ ಮುಖ್ಯಮಂತ್ರಿಯವರು ಮಾಡಬಾರದು. ವಿದ್ಯಾರ್ಥಿಗಳಲ್ಲಿ ಸಮಾನತೆ ಮೂಡಿಸುವ ಕೆಲಸ ಮಾಡಬೇಕು. ಸಮವಸ್ತ್ರ ಎಲ್ಲ ವಿದ್ಯಾರ್ಥಿಗಳಲ್ಲಿ ಸಮಾನತೆ ಮೂಡಿಸುವಂತಿರಬೇಕು. ಈ ಬಗ್ಗೆ ಹೈಕೋರ್ಟ್ ತೀರ್ಪುನಂತೆ ಎಲ್ಲರೂ ನಡೆಯಬೇಕು ಎಂದರು.
ಗೋಷ್ಠಿಯಲ್ಲಿ ಶ್ರೀರಾಮಸೇನೆ ರಾಜ್ಯ ಪ್ರಮುಖ ಜಯದೀಪ ದೇಸಾಯಿ, ಬೆಳಗಾವಿ ವಿಭಾಗ ಪ್ರಧಾನ ಕಾರ್ಯದರ್ಶಿ ಶಿವರಾಜ ಅಂಬಾರಿ, ಚಿಕ್ಕೋಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವು ಬಂತೆ, ಮೇಘರಾಜ ಮಾಳಗಿ, ಚೇತನ ಕುರಿಹುಲಿ, ಅಮೀತ ಹೊಂಕಳೆ, ಸುನೀಲ ಕುಲಗುಡೆ, ಸಿದ್ದು ದೇಸಾಯಿ, ಅಮೀತ ಮಾಳಗಿ, ಸಂತೋಷ ಮೇತ್ರಿ, ಮಹಾಂತೇಶ ಲೋಹಾರ, ಶಿವಾನಂದ ಕಾಳಗೆ, ಸಚೀನ ಮಗದುಮ್ಮ, ಸದಾಶಿವ ಕೋಳಿ, ರಾಜೇಶ ಪೂಜಾರಿ ಇದ್ದರು.23 ರಾಯಬಾಗ 1ರಾಯಬಾಗ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಮೋದ ಮುತಾಲಿಕ ಮಾತನಾಡಿದರು. ಜಯದೀಪ ದೇಸಾಯಿ, ಶಿವು ಬಂತೆ, ಶಿವರಾಜ ಅಂಬಾರಿ ಇದ್ದರು.