ರಾಜಕಾರಣ ಸಚ್ಚಾರಿತ್ರ್ಯಕ್ಕೆ ಪ್ರಸಾದ್ ಮಾದರಿ: ಸಚಿವ ಮಹದೇವಪ್ಪ

| Published : May 22 2024, 12:57 AM IST

ರಾಜಕಾರಣ ಸಚ್ಚಾರಿತ್ರ್ಯಕ್ಕೆ ಪ್ರಸಾದ್ ಮಾದರಿ: ಸಚಿವ ಮಹದೇವಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದ ಶ್ರೀನಿವಾಸ್‌ ಪ್ರಸಾದ್‌ಗೆ ಸ್ವಾಭಿಮಾನಿಗೆ ಸಾವಿರದ ನುಡಿನಮನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಯಳಂದೂರು

ರಾಜಕಾರದಲ್ಲಿ ಸಚ್ಚರಿತ್ರ್ಯ ಹೊಂದಿರುವವರಿಗೆ ಮಾಜಿ ಸಚಿವ ಸಂಸದ ದಿವಂಗತ ಶ್ರೀನಿವಾಸ್ ಪ್ರಸಾದ್ ಮಾದರಿಯಾಗಿ ನಿಲ್ಲುವ ಅಪರೂಪದ ರಾಜಕಾರಣಿಯಾಗಿದ್ದರು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ತಿಳಿಸಿದರು.ಸೋಮವಾರ ಸಂಜೆ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪ್ರಸಾದ್ ಹಿತೈಷಿಗಳು ಹಾಗೂ ಅಭಿಮಾನಿ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಸ್ವಾಭಿಮಾನಿಗೆ ಸಾವಿರದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಒಬ್ಬ ರಾಜಕಾರಣಿ ಸಾಂಸ್ಕೃತಿಕ ನಾಯಕನಾಗಿರಬೇಕು, ಇದಕ್ಕೆ ಸಾಕ್ಷಿ ಪ್ರಸಾದ್ ಆಗಿದ್ದರು, ನೇರ ನಿಷ್ಠುರವಾದಿಯಾಗಿದ್ದ ಇವರು ತಮ್ಮ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಬದುಕಿದ್ದರು. ತಮ್ಮ ಟೀಕಾಕಾರರಿಗೆ ನಾನು ಪಕ್ಷಾಂತರಿ ಆಗಿರಬಹುದು ಆದರೆ ಎಂದಿಗೂ ತತ್ವಾಂತರಿ ಅಲ್ಲ ಎಂಬ ಗಟ್ಟಿ ಸಂದೇಶ ನೀಡಿದ್ದರು. ಮನುಷ್ಯ ಜೀವಿಯಾಗಿ ಹುಟ್ಟಿದ ಮೇಲೆ ಅವನು ಪ್ರಯಾಣಿಕರಾಗುತ್ತಾನೆ. ಆದರೆ ಆ ಪ್ರಯಾಣದಲ್ಲಿ ಜನಪರ ಕೆಲಸ ಮಾಡುವವನೆ ನಿಜವಾದ ನಾಯಕನಾಗುತ್ತಾನೆ. ಆ ನಿಟ್ಟಿನಲ್ಲಿ ಪ್ರಸಾದ್ ಸೇವೆ ಅನನ್ಯವಾಗಿದ್ದು ಇವರು ಮಾದರಿಯಾಗಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆಗಳು ಸಾಮಾನ್ಯವಾಗಿದ್ದು ಅವನ ಜನಪರ ಕೆಲಸಗಳು ಆ ವ್ಯಕ್ತಿಯ ಸಾಧನೆಯನ್ನು ಬಿಂಬಿಸುತ್ತದೆ ಈ ಪಟ್ಟಿಯಲ್ಲಿ ಪ್ರಸಾದ್ ಅಗ್ರಗಣ್ಯರಾಗಿದ್ದಾರೆ ಎಂದರು. ಪತ್ರಕರ್ತ ಸಿ. ಶಿವಕುಮಾರ ಮಾತನಾಡಿ, ಪ್ರಸಾದ್ ಧೈರ್ಯ ಹಾಗೂ ಶುದ್ಧ ಅಂತಃಕರಣದ ರಾಜಕಾರಣಿಯಾಗಿದ್ದರು. ಧೈರ್ಯವಂತ ದಲಿತ ನಾಯಕರಾಗಿದದರು. ಇವರ ದೂರದೃಷ್ಟಿ ಇಂದು ರಾಜ್ಯದಲ್ಲಿ ಅನೇಕ ಮೊದಲುಗಳಿಗೆ ಸಾಕ್ಷಿಯಾಗಿದೆ. ಇಂದು ಸಂವಿಧಾನದ ಸ್ವಸ್ಥ್ಯಕ್ಕೆ ಗಂಡಾಂತರವಿದ್ದು ಪ್ರಸಾದ್‌ರಂತರ ನಿಷ್ಠುರವಾದಿಗಳಿಂದ ಇದನ್ನು ತಪ್ಪಿಸಲು ಸಾಧ್ಯವಿದ್ದು ಇವರನ್ನು ಮಾದರಿಯಾಗಿ ತೆಗೆದುಕೊಳ್ಳುವ ಪ್ರಯತ್ನವನ್ನು ಎಲ್ಲರೂ ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ಶಾಸಕ ಎ.ಆರ್. ಕೃಷ್ಣಮೂರ್ತಿ, ಉಸ್ತುವಾರಿ ಸಚಿವ ವೆಂಕಟೇಶ್ ನಳಂದ ಬುದ್ಧವಿಹಾರದ ಬೋಧಿರತ್ನ ಬಂತೇಜಿ, ವಾಟಾಳು ಸೂರ್ಯಸಿಂಹಾಸನ ಮಠದ ಸಿದ್ದಲಿಂಗ ಶಿವಾಚಾರ್ಯಸ್ವಾಮಿಜಿ ಮಾತನಾಡಿದರು. ಉಗ್ರಾಣ ನಿಮಗದ ರಾಜ್ಯಾಧ್ಯಕ್ಷ ಎಸ್. ಜಯಣ್ಣ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಮಾಂಬಳ್ಳಿ ನಂಜುಂಡಸ್ವಾಮಿ, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಎಚ್.ವಿ. ಚಂದ್ರು, ವಡಗೆರೆದಾಸ್, ಚಕ್ರವರ್ತಿ, ನಿರಂಜನ್, ಜೆ. ಶ್ರೀನಿವಾಸ್ ಪಪಂ ಸದಸ್ಯರಾದ ಮಹೇಶ್, ಲಕ್ಷ್ಮಿ, ಸುಶೀಲಾ, ಶಾಂತಮ್ಮ, ಪಿ. ವೀರಭದ್ರಪ್ಪ ಸೇರಿದಂತೆ ಅನೇಕರು ಹಾಜರಿದ್ದರು.