ಸಾಹಿತ್ಯಕ್ಕೆ ಪ್ರಸನ್ನ ವೆಂಕಟದಾಸರ ಕೊಡುಗೆ ಅಪಾರ

| Published : Sep 18 2024, 02:02 AM IST

ಸಾಹಿತ್ಯಕ್ಕೆ ಪ್ರಸನ್ನ ವೆಂಕಟದಾಸರ ಕೊಡುಗೆ ಅಪಾರ
Share this Article
  • FB
  • TW
  • Linkdin
  • Email

ಸಾರಾಂಶ

ಸಾಹಿತ್ಯಕ್ಕೆ ಪ್ರಸನ್ನ ವೆಂಕಟದಾಸರ ಕೊಡುಗೆ ಅಪಾರವಾಗಿದೆ. ಸರಳ ಭಾಷೆಯಲ್ಲಿ ದಾಸರ ಚಿಂತನೆಗಳನ್ನು ತಲುಪಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಮಂತ್ರಾಲಯದ ಶ್ರೀಗುರು ಸಾರ್ವಭೌಮ ಹರಿದಾಸ ಸಾಹಿತ್ಯ ಯೋಜನೆಯ ಗೌರವ ನಿರ್ದೇಶಕ ಕೆ.ಅಪ್ಪಣಾಚಾರ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಾಹಿತ್ಯಕ್ಕೆ ಪ್ರಸನ್ನ ವೆಂಕಟದಾಸರ ಕೊಡುಗೆ ಅಪಾರವಾಗಿದೆ. ಸರಳ ಭಾಷೆಯಲ್ಲಿ ದಾಸರ ಚಿಂತನೆಗಳನ್ನು ತಲುಪಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಮಂತ್ರಾಲಯದ ಶ್ರೀಗುರು ಸಾರ್ವಭೌಮ ಹರಿದಾಸ ಸಾಹಿತ್ಯ ಯೋಜನೆಯ ಗೌರವ ನಿರ್ದೇಶಕ ಕೆ.ಅಪ್ಪಣಾಚಾರ್ಯ ಹೇಳಿದರು.

ಪ್ರಸನ್ನ ವೆಂಕಟ ಸಾಂಸ್ಕೃತಿಕ ಮತ್ತು ಚಾರಿಟಬಲ್ ಟ್ರಸ್ಟ್ ಹಾಗೂ ಸಂಶೋಧನಾ ಟ್ರಸ್ಟ್‌ಗಳಿಂದ ನವನಗರ ಸೆಕ್ಟರ್ ನಂ.03ರಲ್ಲಿ ನಿರ್ಮಿಸಿರುವ ಶ್ರೀಪ್ರಸನ್ನವೆಂಕಟ ದಾಸರ ಸ್ಮಾರಕ ಭವನ ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಸುಭಾಸ ಕಾಖಂಡಕಿ ಹಾಗೂ ಡಾ.ರೇಖಾ ಕಾಖಂಡಕಿ ಅವರು ಮುಂದಾಳತ್ವ ವಹಿಸಿಕೊಂಡಿದ್ದರು. ಪಂ.ರಘೋತ್ತಮಾಚಾರ್ಯ ನಾಗಸಂಪಿಗೆ ಅವರು ಮಾತನಾಡಿದರು. ಬವಿವ ಸಂಘದ ತಾಂತ್ರಿಕ ಸಂಸ್ಥೆಗಳ ನಿರ್ದೇಶಕ ಆರ್.ಎನ್.ಹೆರಕಲ್, ಪತ್ರಕರ್ತರಾದ ಸುಶಿಲೇಂದ್ರ ಕುಂದರಗಿ, ದ.ರಾ.ಪುರೋಹಿತ ಅವರು ಮಾತನಾಡಿದರು. ಡಾ.ಸುಭಾಸ್ ಕಾಖಂಡಕಿ, ಡಾ. ಬಿಂದುಮಾಧವಾಚಾರ್ಯ ನಾಗಸಂಪಿಗೆ, ವಿಠ್ಠಲಾಚಾರ್ಯ ಕಾಖಂಡಕಿ, ರವೀಂದ್ರ ಕುಲಕರ್ಣಿ, ಗುರುರಾಜ ಕುಲಕರ್ಣಿ, ಪ್ರೊ. ಬಿ.ಎಸ್.ಹರವಿ, ಗಾಯಕ ಪಂ. ಅನಂತ ಕುಲಕರ್ಣಿ ಮತ್ತಿತರರು ವೇದಿಕೆಯಲ್ಲಿದ್ದರು.

---