ಬಾಟಂ....ಮದಕರಿ ಥೀಮ್‌ ಪಾರ್ಕ್‌ ನಿರ್ಮಾಣಕ್ಕೆ ಕೇಂದ್ರ ಮುಂದಾಗಬೇಕು

| Published : Jul 02 2024, 01:40 AM IST

ಸಾರಾಂಶ

Prasannanad force for Madakari theem park in chitrdurga

ಸ್ಮಾಲ್‌ ಕಿಕ್ಕರ್‌-

-ಮದಕರಿನಾಯಕ ಪಟ್ಟಾಭಿಷೇಕ ಸ್ಮರಣೆ

-ಚಿತ್ರದುರ್ಗ ತರಾಸು ರಂಗ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ । ನಾಯಕ ಸಮಾಜದ ಶ್ರೀ ಪ್ರಸನ್ನಾನಂದ ಶ್ರೀಗಳು

------

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕೇಂದ್ರ ಸರ್ಕಾರ ೨೦೧೯ರ ಚುನಾವಣೆಯಲ್ಲಿ ನೀಡಿದ ಮಾತಿನಂತೆ ಚಿತ್ರದುರ್ಗದಲ್ಲಿ ಮದಕರಿ ಥೀಮ್ ಪಾರ್ಕ ನಿರ್ಮಾಣ ಮಾಡಬೇಕು. ರಾಜ್ಯ ಸರ್ಕಾರ ಪಠ್ಯದಲ್ಲಿ ಮದಕರಿ ನಾಯಕ ಮತ್ತು ಗಂಡೋಬಳವ್ವನಾಗತಿಯ ಜೀವನ ಚರಿತೆಯನ್ನು ಸೇರಿಸಬೇಕು, ರಾಜಾವೀರ ಮದಕರಿ ನಾಯಕನ ಜಯಂತಿಯನ್ನು ಸರ್ಕಾರವೇ ಆಚರಿಸಬೇಕೆಂದು ನಾಯಕ ಸಮಾಜದ ಶ್ರೀ ಪ್ರಸನ್ನಾಂದ ಶ್ರೀಗಳು ಆಗ್ರಹಿಸಿದ್ದಾರೆ.

ನಾಡದೊರೆ ರಾಜವೀರ ಮದಕರಿನಾಯಕ ಪಟ್ಟಾಭಿಷೇಕ ಅಲಂಕರಿಸಿದ ದಿನ ಜು.೧ ನ್ನು ತರಾಸು ರಂಗ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಚಿತ್ರದುರ್ಗವನ್ನು ಆಳಿದ ನಾಯಕರಲ್ಲಿ ಮದಕರಿ ನಾಯಕ ಪ್ರಮುಖನಾಗಿದ್ದಾನೆ. ಈತನ ಆಳ್ವಿಕೆಯಲ್ಲಿ ಚಿತ್ರದುರ್ಗ ಸುಭೀಕ್ಷವಾಗಿತ್ತು, ಹೂರಗಿನಿಂದ ಬೇರೆಯವರು ದಂಡೆತ್ತಿ ಬಂದರೂ ಅವರನ್ನು ಹೊಡೆದೂಡಿಸಿ ತನ್ನ ರಾಜ್ಯವನ್ನು ಉಳಿಸಿಕೊಂಡಿದ್ಧಾನೆ, ತಾಯಿ ಗಂಡೋಬಳವ್ವನಾಗತಿ ಆತ ಪ್ರಾಭಲ್ಯಕ್ಕೆ ಬರುವವರೆಗೂ ಆಧಿಕಾರವನ್ನು ನಡೆಸಿ, ಆತನನ್ನು ಉತ್ತಮ ರಾಜನನ್ನಾಗಿ ಮಾಡುವ ಮೂಲಕ ಈ ಭಾಗಕ್ಕೆ ಉತ್ತಮ ರಾಜನನ್ನು ಕೊಡುಗೆಯಾಗಿ ನೀಡಿದ್ದಾಳೆ ಎಂದರು.

ಹನ್ನೆರಡು ವರ್ಷದ ಬಾಲಕ ರಾಜವೀರ ಮದಕರಿನಾಯಕನಿಗೆ ಪಟ್ಟ ಕಟ್ಟಿದಾಗ ಎರಡು ವರ್ಷಗಳ ಕಾಲ ತರಬೇತಿ ನೀಡಿ ನಂತರ ಅಸುನೀಗಿದ ಗಂಡೋಬಳವ್ವ ನಾಗತಿಯ ಶೌರ್ಯ, ಪರಾಕ್ರಮ ನೆನಪಿಸಿಕೊಳ್ಳಬೇಕು ಎಂದು ಹೇಳಿದ ಸ್ವಾಮೀಜಿ, ಚಿತ್ರದುರ್ಗದಲ್ಲಿ ಮದಕರಿನಾಯಕ ಥೀಂ ಪಾರ್ಕ್ ಆಗಬೇಕು. ನಗರದಲ್ಲಿ ಹದಿಮೂರು ಪಾಳೆಯಗಾರರ ಸರ್ಕಲ್ ನಿರ್ಮಿಸಬೇಕಿದೆ. ಐತಿಹಾಸಿಕ ಚಿತ್ರದುರ್ಗವನ್ನಾಳಿದ ರಾಜವೀರ ಮದಕರಿನಾಯಕನ ಇತಿಹಾಸ ಪಠ್ಯದಲ್ಲಿ ಸೇರ್ಪಡೆಯಾಗಬೇಕು. ಇಲ್ಲದಿದ್ದಲ್ಲಿ ಮುಂದಿನ ಪೀಳಿಗೆಗೆ ಇತಿಹಾಸವನ್ನು ಮರೆ ಮಾಚಿದಂತಾಗುತ್ತದೆ. ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಸ್ವಾಮೀಜಿ ಆಗ್ರಹಿಸಿದರು.

ಶಾಸಕ ಟಿ.ರಘುಮೂರ್ತಿ ಮಾತನಾಡಿ, ಮದಕರಿನಾಯಕನ ಥೀಂ ಪಾರ್ಕ್ ಆಗಬೇಕು. ಯಾವುದೇ ರಾಜಕೀಯ ಬೆರೆಸದೆ ಎಲ್ಲಾ ಪಕ್ಷಗಳವರು ಇದಕ್ಕೆ ಒತ್ತು ಕೊಡಬೇಕು. ರಾಜಾವೀರ ಮದಕರಿ ನಾಯಕನಲ್ಲಿ ಸಾಹಸ, ಶೌರ್ಯವನ್ನು ತುಂಬಿದ ಗಂಡೋಬಳವ್ವ ನಾಗತಿಯನ್ನು ಸ್ಮರಿಸುವುದು ಅಷ್ಟೆ ಮುಖ್ಯ ಎಂದರು.

ಕೆ.ಡಿ.ಪಿ. ಸದಸ್ಯ ಕೆ.ಸಿ.ನಾಗರಾಜ್ ಮಾತನಾಡಿ, ಮುಂದಿನ ವರ್ಷ ೨೭೧ನೇ ಪಟ್ಟಾಭಿಷೇಕ ವಾಲ್ಮೀಕಿ ಭವನದಲ್ಲಿ ನಡೆಯಬೇಕು. ಅದಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಚಿತ್ರದುರ್ಗದ ಕೋಟೆಗೆ ಪ್ರವೇಶಿಸಲು ನೇರವಾದ ದಾರಿ ಆಗಬೇಕು. ರಾಜಾವೀರ ಮದಕರಿನಾಯಕನ ಇತಿಹಾಸ ಪಠ್ಯದಲ್ಲಿ ಸೇರಬೇಕೆಂಬ ನಾಯಕ ಸಮಾಜದ ಬೇಡಿಕೆಯನ್ನು ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಸಂಸದ ಗೋವಿಂದ ಕಾರಜೋಳರ ಪುತ್ರ ಉಮೇಶ್ ಕಾರಜೋಳ ಮಾತನಾಡಿ, ಚಿತ್ರದುರ್ಗದ ಕೋಟೆ ಆಳಿದ ರಾಜಾವೀರ ಮದಕರಿ ನಾಯಕನ ಇತಿಹಾಸ ಪಠ್ಯದಲ್ಲಿ ಸೇರಬೇಕೆಂಬ ನಿಮ್ಮ ಬೇಡಿಕೆ ಈಡೇರಿಕೆಗೆ ದೆಹಲಿಗೆ ನಿಯೋಗ ಹೊರಡೋಣ ಎನ್ನುವ ಸಲಹೆ ನೀಡಿದರು.

ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಚಿತ್ರದುರ್ಗದ ಕೋಟೆ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಬೇಕು, ಮದಕರಿನಾಯಕ ಥೀಂ ಪಾರ್ಕ್ ನಿರ್ಮಾಣಕ್ಕೆ ಬಿಜೆಪಿ. ಹಿರಿಯರೊಬ್ಬರು ಆಶ್ವಾಸನೆ ನೀಡಿದ್ದರು. ಇದುವರೆವಿಗೂ ಆಗಿಲ್ಲ. ಕೋಟೆಗೆ ನೇರ ದಾರಿಯಾದರೆ ಚಿತ್ರದುರ್ಗ ಕೂಡ ಹಂಪಿ ಮಾದರಿಯಲ್ಲಿ ಅಭಿವೃದ್ಧಿಯಾಗಲಿದೆ. ರಾಜಕಾರಣಿಗಳು ಪಕ್ಷ ಬೇಧ ಮರೆತು ಶ್ರಮಿಸಬೇಕೆಂದರು.

ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ಮದಕರಿನಾಯಕ ವಿದ್ಯಾಸಂಸ್ಥೆಯ ಸಂದೀಪ್, ನಗರಸಭೆ ಸದಸ್ಯರಾದ ದೀಪು, ಭಾಸ್ಕರ್, ನಸ್ರುಲ್ಲಾ, ಹರೀಶ್, ಮಾಜಿ ಸದಸ್ಯರಾದ ರಾಘವೇಂದ್ರ, ಫಕೃದ್ದಿನ್, ಶಬ್ಬೀರ್‌ಭಾಷ, ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥಗೊಪ್ಪೆ, ಗೋನೂರು ಗ್ರಾ.ಪಂ. ಅಧ್ಯಕ್ಷೆ ಗುಂಡಮ್ಮ, ಸೂರಣ್ಣ, ಜಾನ್ಹವಿ ನಾಗರಾಜ್, ಕೆ.ಎಸ್.ಆರ್.ಟಿ.ಸಿ ಡಿಸಿ ಶ್ರೀನಿವಾಸ್, ರತ್ನಮ್ಮ ಸೈಟ್‌ ಬಾಬಣ್ಣ, ತಿಪ್ಪೇಸ್ವಾಮಿ ಕಲ್ಲವ್ವ ನಾಗತಿಹಳ್ಳಿ, ಕವನ ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು. ಇತಿಹಾಸ ಸಂಶೋಧಕ ಡಾ.ಎನ್.ಎಸ್.ಮಹಂತೇಶ್ ಮದಕರಿಯ ಬಗ್ಗೆ ಉಪನ್ಯಾಸ ನೀಡಿದರು.

ಗಂಗಾಧರ್ ಮತ್ತು ತಂಡದವರು ಪ್ರಾರ್ಥಿಸಿದರು. ಡಿ.ಗೋಪಾಲಸ್ವಾಮಿ ನಾಯಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

-------

ಚಿತ್ರ: ಚಿತ್ರದುರ್ಗದಲ್ಲಿ ನಾಡ ದೊರೆ ರಾಜವೀರ ಮದಕರಿನಾಯಕ ಪಟ್ಟಾಭಿಷೇಕ ಅಲಂಕರಿಸಿದ ದಿನವನ್ನು ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಆಚರಿಸಲಾಯಿತು.