ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಪಬ್ಲಿಕ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಿಕೋತ್ಸವ ನಡೆಯಿತು.ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಪ್ರತಿಭಾ ಕಾರಂಜಿಗೆ ಡೇರಿ ಅಧ್ಯಕ್ಷ, ಗ್ರಾಪಂ ಸದಸ್ಯ ಸಿ.ಶಿವಕುಮಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್ ಚಾಲನೆ ನೀಡಿದರು.
ಪ್ರಾಥಮಿಕ ಶಾಲೆಗಳ ವಿಭಾಗದಲ್ಲಿ ಕನ್ನಡ, ಹಿಂದಿ, ಉರ್ದು ಹಾಗೂ ಇಂಗ್ಲಿಷ್ ಕಂಠಪಾಠ, ಸಂಸ್ಕೃತ ಹಾಗೂ ಅರೇಬಿಕ್ ಧಾರ್ಮಿಕ ಪಠಣ, ದೇಶಭಕ್ತಿಗೀತೆ, ಕಥೆಹೇಳುವುದಯ, ಅಭಿನಯಗೀತೆ, ಭಕ್ತಿಗೀತೆ, ಆಶುಭಾಷಣ, ಪದ್ಯ/ಕವನ ವಾಚನ, ಚಿತ್ರಕಲೆ, ಮಿಮಿಕ್ರಿ, ಪ್ರಬಂಧರಚನೆ, ಛದ್ಮ ವೇಷ, ಕ್ಲೇಮಾಡಲಿಂಗ್, ಪ್ರೌಢಶಾಲಾ ವಿಭಾಗದಲ್ಲಿ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷಣ, ಸಂಸ್ಕೃತ, ಅರೇಬಿಕ್ ಧಾರ್ಮಿಕ ಪಠಣ, ಕವನ/ಪದ್ಯವಾಚನ, ಆಶುಭಾಷಣ, ಪ್ರಬಂಧ ರಚನೆ ಸ್ಪರ್ಧೆಗಳು ನಡೆದವು.ಕವ್ಹಾಲಿ, ಗಝಲ್, ಚರ್ಚಾಸ್ಪರ್ಧೆ, ಕ್ವಿಜ್, ಜಾನಪದ ಗೀತೆ, ಭಾವಗೀತೆ, ಚಿತ್ರಕಲೆ, ಭರತನಾಟ್ಯ, ಜಾನಪದ ನೃತ್ಯ, ಮಿಮಿಕ್ರಿ, ರಂಗೋಲಿ ಸ್ಪರ್ಧೆಗಳಲ್ಲಿ ತಾಲೂಕಿನ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುಂಕಾತೊಣ್ಣೂರು ಸರ್ಕಾರಿ ಶಾಲೆ 1ನೇ ತರಗತಿ ವಿದ್ಯಾರ್ಥಿನಿ ಸರಿತ ಹೆಣ್ಣು ಭ್ರೂಣಹತ್ಯೆ ಕುರಿತು ಸೇವ್‌ಗರ್ಲ್ ಚೈಲ್ಡ್ ಶೀರ್ಷಿಕೆಯಡಿ ಪ್ರದರ್ಶಿಸಿದ ದೃಶ್ಯ ಎಲ್ಲರ ಗಮನ ಸೆಳೆಯಿತು. ಸರಸ್ವತಿ, ಲಕ್ಷ್ಮೀ, ಜಲದೇವತೆ, ಗಿಳಿ, ಬಾಹ್ಯಾಕಾಶ ವಿಜ್ಞಾನಿ, ನವಿಲು ಸೇರಿದಂತೆ ಇತರೆ ಸಮವಸ್ತ್ರದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಗಮನ ಸೆಳೆದರು.ಬಿಜಿಒ ರವಿಕುಮಾರ್ ಮಾತನಾಡಿ, ಎಸ್‌ಟಿಜಿ ಶಾಲೆಯೂ ಎಲ್ಲಾ ತರಹದ ಸಿದ್ಧತೆ, ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟು ಪ್ರತಿಭಾ ಕಾರಂಜಿ ಸ್ಪರ್ಧೆಗಳು ಯಶಸ್ವಿಯಾಗಿ ನಡೆಸಲು ಕಾರಣವಾಗಿದೆ ಎಂದರು.
ತೀರ್ಪುಗಾರರ ಆತ್ಮಸಾಕ್ಷಿಗೆ ಅನುಗುಣವಾಗಿಯಾವುದೇ ಗೊಂದಲ ಮಾಡಿಕೊಳ್ಳದೆ ತಾಳ್ಮೆಯಿಂದ ಯೋಚಿಸಿ ಪ್ರತಿಭಾವಂತ ಮಕ್ಕಳಿಗೆ ಅನ್ಯಾಯವಾಗದಂತೆ ತೀರ್ಪು ನೀಡಬೇಕು. ಯಾವುದೇ ಗೊಂದಲ ಸೃಷ್ಠಿಸಬಾರದು ಎಂದು ಮನವಿ ಮಾಡಿದರು.ಡೇರಿ ಅಧ್ಯಕ್ಷ ಸಿ.ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಹೊರಹಾಕಲು ಸೂಕ್ತ ವೇದಿಕೆಯಾಗಿದೆ. ಇಲ್ಲಿ ಗೆದ್ದು ಜಿಲ್ಲಾ, ರಾಜ್ಯಮಟ್ಟದಲ್ಲಿ ಸ್ಪರ್ಧಿಸಿ ಶಾಲೆಗಳಿಗೆ ಕೀರ್ತಿತರುವ ಕೆಲಸ ಮಾಡಬೇಕು ಎಂದರು.
ಮುಖ್ಯಶಿಕ್ಷಕ ಸಂಘದ ಅಧ್ಯಕ್ಷ ಎಂ.ರಮೇಶ್ ಮಾತನಾಡಿ, ಪ್ರಮಕ್ಕಳು ತಮ್ಮೊಳಗೆ ಅಡಗಿರುವ ಪ್ರತಿಭೆಯನ್ನು ಹೊರಹಾಕುವ ಮೂಲಕ ಜಿಲ್ಲಾ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾಗಬೇಕು ಎಂದರು.ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೇಶವಮೂರ್ತಿ, ಎಸ್‌ಟಿಜಿ ಶಾಲೆ ಮುಖ್ಯಶಿಕ್ಷಕಿ ಮಾಚಮ್ಮ, ಆಡಳಿತಾಧಿಕಾರಿ ನಿವೇದಿತ ನಾಗೇಶ್, ಗ್ರಾಪಂ ಅಧ್ಯಕ್ಷೆ ಗಾಯಿತ್ರಿಕುಮಾರ್ ಮಾತನಾಡಿದರು. ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಗಣ್ಯರಿಗೂ ಎಸ್‌ಟಿಜಿ ಶಿಕ್ಷಣ ಸಂಸ್ಥೆಯಿಂದ ಅಭಿನಂಧಿಸಲಾಯಿತು.
ಸಮಾರಂಭದಲ್ಲಿ ಉಪಾಧ್ಯಕ್ಷ ಶ್ರೀನಿವಾಸ್, ಡೇರಿ ಉಪಾಧ್ಯಕ್ಷ ಎಂ.ರಮೇಶ್, ವಿಎಸ್‌ಎಸ್‌ಎನ್‌ಬಿ ಅಧ್ಯಕ್ಷ ಮಂಜುನಾಥ್, ಬಿಆರ್‌ಸಿ ಪ್ರಕಾಶ್, ಸರಕಾರಿ ನೌಕರರ ಸಂಘದ ನಿರ್ದೇಶಕರಾದ ಕೆ.ಯುವರಾಜ್, ಕರುಣಾಕ್, ಮಾಣಿಕ್ಯನಹಳ್ಳಿ ಜಯರಾಮು, ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ಗಡ್ಡಚಂದ್ರಶೇಖರ್, ವಿಜಯ್‌ಕುಮಾರ್, ಸುರಂದ್ರ, ಗ್ರಾಪಂ ಮಾಜಿ ಸದಸ್ಯ ಸಿ.ಡಿ.ಮಹದೇವು, ಎಸ್‌ಟಿಜಿ ಶಿಕ್ಷಣ ಸಂಸ್ಥೆ ಪಿಆರ್‌ಓ ಗೋಪಾಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.