ಕನ್ನಡಪ್ರಭ ವಾರ್ತೆ ಹಾಸನ
ಸಾಹಿತ್ಯದಲ್ಲಿ ಕಾವ್ಯಕ್ಕೆ ಪ್ರಮುಖ ಸ್ಥಾನವಿದೆ. ಕಾವ್ಯವು ಭಾವನೆಗಳನ್ನು ಒಳಗೊಂಡಿದ್ದು ಅದರದೇ ಆದ ಆಲೋಚನೆಗಳನ್ನು ಸೂಚಿಸುವ ಮತ್ತು ಅನುಭವಗಳನ್ನು ಲಯಬದ್ಧತೆಯಿಂದ ಕಲಾತ್ಮಕ ಮತ್ತು ಅರ್ಥಗರ್ಭಿತ ಭಾಷೆಯ ಮೂಲಕ ವ್ಯಕ್ತಪಡಿಸುವ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರವಾಗಿದೆ. ಇದನ್ನು ಅರಿತು ಕಲಿತು ಕಲಿಸುವ ಮಟ್ಟಕ್ಕೆ ಕೊಂಡೊಯ್ಯುವ ಶಕ್ತಿ ಇದೆ ಎಂದು ಸಾಹಿತಿ ಹಾಗೂ ಶಿಕ್ಷಕಿ ಎಚ್. ಎಸ್. ಪ್ರತಿಮಾ ಹಾಸನ್ ಅಭಿಪ್ರಾಯಪಟ್ಟರು.ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು, ತಾಲೂಕು ಘಟಕ ಹಾಸನ ಹಾಗೂ ಭಾರತ್ ಸ್ಕೌಟ್ಸ್, ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ವತಿಯಿಂದ ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದಲ್ಲಿ ಮಕ್ಕಳಲ್ಲಿ ಕಾವ್ಯ ಪ್ರಭೆ ಕುರಿತು ಮಾತನಾಡಿದರು. ಕಾವ್ಯ ಪ್ರಕಾರ ಮಕ್ಕಳ ಕಲಿಕೆಯಲ್ಲಿ ಸರಳತೆಯಿಂದ ತಿಳಿದು ನಂತರ ಅದರಲ್ಲಿ ಪ್ರಬುದ್ಧತೆಯೂ ತಮಗೆ ತಾವೇ ತಿಳಿದ ನಂತರ ಅದರಲ್ಲಿ ಪಕ್ವತೆಯನ್ನು ಪಡೆಯುವುದಾಗಿದೆ. ಅದಕ್ಕೆ ಮುಖ್ಯವಾಗಿ ಆಸಕ್ತಿ ಮುಖ್ಯ. ಕಾವ್ಯದ ಪ್ರಕಾರವೂ ಕೇವಲ ಪದಗಳನ್ನ ರಚನೆ ಮಾಡುವುದಲ್ಲ. ಅದು ಸ್ವಲ್ಪ ಪದದಲ್ಲಿ ಅಪಾರ ವಿಚಾರಗಳನ್ನು ಮೂಡಿಸುವಂತಹ ಓದುಗರ ಭಾವನೆಗಳನ್ನು ಪ್ರತಿಕ್ರಿಯಿಸಿ ಅವರನ್ನು ಆಸಕ್ತಿಯುತರಾಗಿ ಮಾಡುವುದರಲ್ಲಿ ಕಾವ್ಯ ಪ್ರಕಾರಕ್ಕೆ ಬಹಳಷ್ಟು ಶಕ್ತಿ ಇದೆ. ಕಾವ್ಯವು ಸಂಗೀತದ ಗುಣವನ್ನು ಹೊಂದಿದ್ದು, ಲಯಬದ್ಧವಾಗಿ ಇರುತ್ತದೆ. ಒಟ್ಟಾರೆ ಕಾವ್ಯದ ಅರ್ಥ ಪ್ರಕಾರಗಳನ್ನು ಹಾಗೂ ಮಕ್ಕಳಿಂದಲೇ ಕಾವ್ಯ ರಚಿಸಿ ಹಾಡಿಸಲಾಯಿತು. ಮಹಾಕಾವ್ಯ (ದೀರ್ಘ ಕಥನ), ಲಘುಕಾವ್ಯ/ಗೀತಕಾವ್ಯ (ಭಾವಗೀತೆ), ಸಾನೆಟ್ (೧೪ ಸಾಲುಗಳ ಪದ್ಯ), ಹೈಕು (ಸಣ್ಣ ಜಪಾನೀಸ್ ಶೈಲಿ), ಬಲ್ಲಾಡ್ (ಜನಪದ ಕಥನ) ಮತ್ತು ಮುಕ್ತ ಛಂದಸ್ಸು (ಲಯಬದ್ಧ ಆದರೆ ಪ್ರಾಸರಹಿತ) ಎಂದು ವರ್ಗೀಕರಿಸಲಾಗಿದೆ. ಎಂದು ತಿಳಿಸಿ ಲಘು ಕಾವ್ಯ ಹಾಗೂ ಗೀತ ಕಾವ್ಯದ ಬಗ್ಗೆ ತಿಳಿಸಿ ಮಕ್ಕಳೇ ರಚಿಸಿ ಹಾಡಿನ ರೂಪದಲ್ಲಿ ಮಕ್ಕಳು ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಲೇಡಿ ಸ್ಕೌಟ್ ಮಾಸ್ಟರ್ ರೇಣುಕಾ ಭೈರಾಪುರ ಮಾತನಾಡಿ, ಭಾರತ್ ಸ್ಕೌಟ್ಸ್ ಗೈಡ್ಸ್ ಮಕ್ಕಳಲ್ಲಿ ಕೌಟುಂಬಿಕ ಮೌಲ್ಯಗಳು, ಸಾಮಾಜಿಕ ಮೌಲ್ಯಗಳು, ಸಾಂಸ್ಕೃತಿಕ ಮೌಲ್ಯಗಳು, ನೈತಿಕ ಮೌಲ್ಯಗಳನ್ನು ಬಿತ್ತುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದರು.ವೇದಿಕೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಸಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ತಾಲೂಕು ಅಧ್ಯಕ್ಷೆ ಕೆ. ಸಿ. ಗೀತಾ, ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್. ಎಂ. ಪ್ರಿಯಾಂಕ, ಪ್ರತಿಮಾ ಸಾಂಸ್ಕೃತಿಕ ಹಾಗೂ ಸಾಮಾಜಿಕ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷೆ ಎಚ್.ಎಸ್. ಪ್ರತಿಮಾ, ಯೋಗಶಿಕ್ಷಕಿ ಗಿರಿಜಾ ನಿರ್ವಾಣಿ, ಗೈಡ್ ಕ್ಯಾಪ್ಟನ್ ಅಶ್ವಿನಿ ಭೈರಾಪುರ, ಗೈಡ್ ಕ್ಯಾಪ್ಟನ್ ಶ್ರೀ, ಲೇಡಿ ಸ್ಕೌಟ್ ಮಾಸ್ಟರ್ ರೇಣುಕಾ ಭೈರಾಪುರ, ಜಿಲ್ಲಾ ಖಜಾಂಚಿ ಆರ್. ಎಸ್. ರಮೇಶ್ ಸೇರಿದಂತೆ ೫೦ಕ್ಕೂ ಹೆಚ್ಚು ಶಿಬಿರಾರ್ಥಿಗಳು ಹಾಜರಿದ್ದರು.ಸಾಹಿತ್ಯದಲ್ಲಿ ಕಾವ್ಯಕ್ಕೆ ಪ್ರಮುಖ ಸ್ಥಾನವಿದೆ ಎಂದ ಪ್ರತಿಮಾ ಹಾಸನ್
ಸಾಹಿತ್ಯದಲ್ಲಿ ಕಾವ್ಯಕ್ಕೆ ಪ್ರಮುಖ ಸ್ಥಾನವಿದೆ. ಕಾವ್ಯವು ಭಾವನೆಗಳನ್ನು ಒಳಗೊಂಡಿದ್ದು ಅದರದೇ ಆದ ಆಲೋಚನೆಗಳನ್ನು ಸೂಚಿಸುವ ಮತ್ತು ಅನುಭವಗಳನ್ನು ಲಯಬದ್ಧತೆಯಿಂದ ಕಲಾತ್ಮಕ ಮತ್ತು ಅರ್ಥಗರ್ಭಿತ ಭಾಷೆಯ ಮೂಲಕ ವ್ಯಕ್ತಪಡಿಸುವ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರವಾಗಿದೆ. ಇದನ್ನು ಅರಿತು ಕಲಿತು ಕಲಿಸುವ ಮಟ್ಟಕ್ಕೆ ಕೊಂಡೊಯ್ಯುವ ಶಕ್ತಿ ಇದೆ ಎಂದು ಸಾಹಿತಿ ಹಾಗೂ ಶಿಕ್ಷಕಿ ಎಚ್. ಎಸ್. ಪ್ರತಿಮಾ ಹಾಸನ್ ಅಭಿಪ್ರಾಯಪಟ್ಟರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.