ನಟ ಶಿವರಾಜ್ ಕುಮಾರ್ ಗೆ ಚಿಕಿತ್ಸೆ ಯಶಸ್ವಿಯಾಗಲು ಪ್ರಾರ್ಥಿಸಿ ವಿಶೇಷ ಪೂಜೆ

| Published : Dec 25 2024, 12:47 AM IST

ನಟ ಶಿವರಾಜ್ ಕುಮಾರ್ ಗೆ ಚಿಕಿತ್ಸೆ ಯಶಸ್ವಿಯಾಗಲು ಪ್ರಾರ್ಥಿಸಿ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರನಟ ಶಿವಣ್ಣನವರಿಗೆ ಅಮೆರಿಕಾದ ಮಿಮೊರಿ ಆಸ್ಪತ್ರೆಯಲ್ಲಿ ನಡೆಯುವ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಅವರು ಬೇಗ ಗುಣಮುಖರಾಗಿ ಮುಂದಿನ ದಿನಗಳಲ್ಲಿ ಉತ್ತಮ ಜೀವನ ನಡೆಸಿ ನೂರಾರು ಕಾಲ ಬಾಳಲಿ ಎಂದು ಆಶಿಸುತ್ತೇನೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಚಿತ್ರನಟ ಡಾ.ಶಿವರಾಜಕುಮಾರ್ ಅವರಿಗೆ ಚಿಕಿತ್ಸೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿ ಪಟ್ಟಣದ ಹೊರ ವಲಯದಲ್ಲಿ ನೆಲೆಸಿರುವ ದಂಡಿನ ಮಾರಮ್ಮ ದೇವಸ್ಥಾನದಲ್ಲಿ ಡಾ.ರಾಜ್ ವಂಶದ ಅಭಿಮಾನಿ ದೇವರುಗಳ ಸೇನಾ ಸಮಿತಿಯಿಂದ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.

ಸಮಿತಿ ಅಧ್ಯಕ್ಷ ಅಧ್ಯಕ್ಷ ನಾಗರಾಜು ಮಾತನಾಡಿ, ಇಂದು ಶಿವಣ್ಣನವರಿಗೆ ಅಮೆರಿಕಾದ ಮಿಮೊರಿ ಆಸ್ಪತ್ರೆಯಲ್ಲಿ ನಡೆಯುವ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಅವರು ಬೇಗ ಗುಣಮುಖರಾಗಿ ಮುಂದಿನ ದಿನಗಳಲ್ಲಿ ಉತ್ತಮ ಜೀವನ ನಡೆಸಿ ನೂರಾರು ಕಾಲ ಬಾಳಲಿ ಎಂದು ಆಶಿಸುತ್ತೇನೆ ಎಂದರು.

ನಂತರ ಖಜಾಂಚಿ ಸಿದ್ದೇಶ್ ಮಾತನಾಡಿ, ನಟ ಡಾ.ಶಿವರಾಜ್​ಕುಮಾರ್ ಅವರು ಚಿಕಿತ್ಸೆಗೆಂದು ಅಮೆರಿಕಾಗೆ ತೆರಳಿದ್ದು ಇಂದು ಶಸ್ತ್ರಚಿಕಿತ್ಸೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶಿವಣ್ಣ ಶೀಘ್ರ ಗುಣಮುಖರಾಗಿ ತವರಿಗೆ ಮರಳಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದರು.

ಇದೇ ವೇಳೆ ಕಾರ್ಯದರ್ಶಿ ಮೈಲಾರಿ ಮಂಜು, ರವಿ ರಾಣಾ, ರಾಜಣ್ಣ, ಚಿನ್ನಸ್ವಾಮಿ, ರಾಜಣ್ಣ, ಪುಟ್ಟಸ್ವಾಮಿ, ಬಳ್ಳಾರಿ ನಾಗ, ಗೋಪಿ, ನಾಗರಾಜು, ನಿತಿನ್ ರಾಜ,. ಬಸವರಾಜು ಹಲವರು ಇದ್ದರು.

ನರಸರಾಜಭಟ್ಟರಿಗೆ ರಾಜ್ಯ ಮಟ್ಟದ ಜ್ಞಾನನಿಧಿ ಪ್ರಶಸ್ತಿ ನೀಡಿಕೆಗೆ ಬ್ರೇಕ್

ಮೇಲುಕೋಟೆ:

ಚೆಲುವನಾರಾಯಣಸ್ವಾಮಿ ವಜ್ರಾಂಗಿ ಆಭರಣದ ಅವ್ಯಹಾರ ಪ್ರಕರಣದಲ್ಲಿ ಆರೋಪ ಸಾಬೀತಾಗಿ ಅಮಾನತ್ತಾಗಿರುವ ಅರ್ಚಕ ನರಸರಾಜಭಟ್ಟರಿಗೆ ರಾಜ್ಯ ಮಟ್ಟದ ಜ್ಞಾನನಿಧಿ ಪ್ರಶಸ್ತಿ ನೀಡುವುದಕ್ಕೆ ಧಾರ್ಮಿಕದತ್ತಿ ಇಲಾಖೆ ಬ್ರೇಕ್ ಹಾಕಿದೆ.

ಸರ್ಕಾರದಿಂದಲೇ ಅನುದಾನ ಪಡೆಯುವ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನನಾ ಸಂಸತ್‌ನ ಪ್ರಶಸ್ತಿ ಆಯ್ಕೆ ಸಮಿತಿ ನರಸರಾಜ ಭಟ್‌ರನ್ನು ಜ್ಞಾನನಿಧಿ ಪ್ರಶಸ್ತಿಗೆ ಆಯ್ಕೆ ಮಾಡಿ ಸಂಸ್ಕೃತ ವಿವಿ ಸಹಯೋಗದಲ್ಲಿ ಡಿ.27ರಂದು ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಧಾರ್ಮಿಕ ದತ್ತಿ ಆಯುಕ್ತರಿಂದಲೇ ಪ್ರಶಸ್ತಿ ಪ್ರದಾನ ಮಾಡಿಸುತ್ತಿರುವುದಾಗಿ ಆಹ್ವಾನ ಪತ್ರಿಕೆ ಮುದ್ರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.

ಸಾರ್ವಜನಿಕರಿಂದ ದೂರುಗಳು ಬಂದಾಗ ದಾಖಲೆಗಳು ಹಾಗೂ ನ್ಯಾಯಾಲಯದ ಆದೇಶಗಳನ್ನು ಪರಿಶೀಲಿಸಿದ ಧಾರ್ಮಿಕ ದತ್ತಿ ಆಯುಕ್ತ ಡಾ.ಎಂ.ವಿ ವೆಂಕಟೇಶ್ ಸಂಸ್ಕೃತ ವಿವಿ ಕುಲಪತಿ ಡಾ.ಎಸ್.ಅಹಲ್ಯರೊಂದಿಗೆ ಚರ್ಚಿಸಿ ವಿವಾದಿತ ಅರ್ಚಕನಿಗೆ ಜ್ಞಾನನಿಧಿ ಪ್ರಶಸ್ತಿ ನೀಡುವುದನ್ನು ಕೈಬಿಟ್ಟು ವಿದ್ಯಾರ್ಥಿಗಳಿಗೆ ದತ್ತಿಸ್ಮಾರಕ ಸ್ಪರ್ಧೆಗಳು, ಕೈಂಕರ್ಯ ಪರರಿಗೆ ವಿದ್ವತ್ ಸನ್ಮಾನ, ಗ್ರಂಥ ಲೋಕಾರ್ಪಣೆ ಕಾರ್ಯಕ್ರಮಗಳನ್ನು ಮಾತ್ರ ನಡೆಸುವಂತೆ ಖಡಕ್ ಸೂಚನೆ ನೀಡಿದ್ದಾರೆ.