ಸಾರಾಂಶ
ಪ್ರಯಾಗರಾಜ್‌ನ ಮಹಾಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಬೆಳಗಾವಿಯ ಯಾತ್ರಾರ್ಥಿಯೊಬ್ಬರು ಮರಳಿ ಬರುವಾಗ ಹೃದಯಾಘಾತವಾಗಿ ರೈಲಿನಲ್ಲಿಯೇ ಸಾವಿಗೀಡಾದ ಘಟನೆ ಬುಧವಾರ ರಾತ್ರಿ ಮಹಾರಾಷ್ಟ್ರದ ಪುಣೆಯಲ್ಲಿ ಜರುಗಿದೆ.
ಬೆಳಗಾವಿ : ಪ್ರಯಾಗರಾಜ್‌ನ ಮಹಾಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಬೆಳಗಾವಿಯ ಯಾತ್ರಾರ್ಥಿಯೊಬ್ಬರು ಮರಳಿ ಬರುವಾಗ ಹೃದಯಾಘಾತವಾಗಿ ರೈಲಿನಲ್ಲಿಯೇ ಸಾವಿಗೀಡಾದ ಘಟನೆ ಬುಧವಾರ ರಾತ್ರಿ ಮಹಾರಾಷ್ಟ್ರದ ಪುಣೆಯಲ್ಲಿ ಜರುಗಿದೆ. ಬೆಳಗಾವಿಯ ದೇಶಪಾಂಡೆ ಗಲ್ಲಿಯ ರವೀಂದ್ರ ಜಠಾರ (60) ಮೃತಪಟ್ಟವರು. ಮೂರು ದಿನಗಳ ಹಿಂದೆ ರೈಲಿನಲ್ಲಿ ಸ್ನೇಹಿತರ ಜತೆಗೆ ಪ್ರಯಾಗರಾಜ್‌ಗೆ ತೆರಳಿದ್ದರು.
ಕುಂಭಮೇಳದಲ್ಲಿ ಸ್ನಾನ ಮಾಡಿ ಮುಗಿಸಿ, ರೈಲಿನ ಮೂಲಕ ಬೆಳಗಾವಿಗೆ ಬರುವಾಗ ಪುಣೆ ಬಳಿ ತೀವ್ರ ಹೃದಯಾಘಾತವಾಗಿ ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪುಣೆಯಲ್ಲಿಯೇ ಸ್ನೇಹಿತರು, ಸಂಬಂಧಿಕರು ಮರಣೋತ್ತರ ಪರೀಕ್ಷೆ ನಡೆಸಿದ್ದು, ಶುಕ್ರವಾರ ಮೃತದೇಹ ಬೆಳಗಾವಿಗೆ ಬರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.