ಯದುವೀರ್ ಒಡೆಯರ್, ಎಚ್.ಡಿ.ಕುಮಾರಸ್ವಾಮಿ ಗೆಲುವಿಗಾಗಿ ಪ್ರಾರ್ಥನೆ

| Published : Apr 25 2024, 01:08 AM IST

ಯದುವೀರ್ ಒಡೆಯರ್, ಎಚ್.ಡಿ.ಕುಮಾರಸ್ವಾಮಿ ಗೆಲುವಿಗಾಗಿ ಪ್ರಾರ್ಥನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಒಡೆಯರ್ ವಂಶದ ಕುಡಿ ಯದುವೀರ್ ಸ್ಪರ್ಧಿಸಿದ್ದು ಅವರಿಗೆ ಜನರ ಆಶೀರ್ವಾದ ದೊರಕಲಿ. ಅದೇ ರೀತಿ ಕಾವೇರಿ ನದಿ ರಕ್ಷಣೆಗೆ ನಿಂತಿರುವ ಎಚ್.ಡಿ.ಕುಮಾರಸ್ವಾಮಿ ನಮ್ಮ ಜಿಲ್ಲೆಯಿಂದ ಸ್ವರ್ಧಿಸಿದ್ದು, ಕಾವೇರಿ ತಾಯಿ ಗೆಲುವಿನ ಶೀರಕ್ಷೆ ನೀಡವಂತೆ ಪ್ರಾರ್ಥಿಸಿರುವುದಾಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನದಿ ಹರಿಯಲು ಕಾರಣರಾದ ರಾಜವಂಶಸ್ಥರ ಕುಟುಂಬದ ಕುಡಿ ಯದುವೀರ್ ಹಾಗೂ ಕಾವೇರಿ ನದಿ ರಕ್ಷಣೆಗೆ ನಿಂತಿರುವ ಮೈತ್ರಿ ಅಭ್ಯರ್ಥಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗೆಲುವಿಗಾಗಿ ರೈತರು, ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಪಟ್ಟಣದ ಕಾವೇರಿ ನದಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಪಟ್ಟಣದ ಸ್ನಾನಘಟ್ಟದ ಬಳಿ ಕಾವೇರಿ ನದಿಗೆ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಹಾಗೂ ರೈತರ ನೇತೃತ್ವದಲ್ಲಿ ವಿಶೇಷ ನಡೆಸಲಾಯಿತು.

ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಹರಿದು ಹೋಗುತ್ತಿರುವ ಕಾವೇರಿ ಮಾತೆಗೆ ಕನ್ನಂಬಾಡಿಗೆ ಅಣೆಕಟ್ಟೆ ಕಟ್ಟಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟ ಒಡೆಯರ್ ಕುಟುಂಬ ಇಡೀ ಸಮಾಜಕ್ಕೆ ಅನುಕೂಲ ಮಾಡಿಕೊಟ್ಟಿದೆ ಎಂದರು.

ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಒಡೆಯರ್ ವಂಶದ ಕುಡಿ ಯದುವೀರ್ ಸ್ಪರ್ಧಿಸಿದ್ದು ಅವರಿಗೆ ಜನರ ಆಶೀರ್ವಾದ ದೊರಕಲಿ. ಅದೇ ರೀತಿ ಕಾವೇರಿ ನದಿ ರಕ್ಷಣೆಗೆ ನಿಂತಿರುವ ಎಚ್.ಡಿ.ಕುಮಾರಸ್ವಾಮಿ ನಮ್ಮ ಜಿಲ್ಲೆಯಿಂದ ಸ್ವರ್ಧಿಸಿದ್ದು, ಕಾವೇರಿ ತಾಯಿ ಗೆಲುವಿನ ಶೀರಕ್ಷೆ ನೀಡವಂತೆ ಪ್ರಾರ್ಥಿಸಿರುವುದಾಗಿ ಹೇಳಿದರು.

ನಮ್ಮ ಪೂರ್ವಿಕರ ಕಾಲದಿಂದಲೂ ಕಾವೇರಿ ತಾಯಿ ಎಂದಿಗೂ ರೈತರಿಗೆ ತೊಂದರೆ ಕೊಟ್ಟಿರಲಿಲ್ಲ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ಬೇಕಾಬಿಟ್ಟಿ ನೀರು ಹರಿಸುವ ಮೂಲಕ ನಮ್ಮ ಭಾಗಕ್ಕೆ ಸಾಕಷ್ಟು ತೊಂದರೆಕೊಟ್ಟಿದ್ದಾರೆ ಎಂದು ದೂರಿದರು.

ಸರ್ಕಾರದ ಧೋರಣೆ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬರಗಾಲ ಆವರಿಸಿದೆ. ನಮ್ಮ ಕಾವೇರಿ ತಾಯಿ ನಮ್ಮ ಕೈಹಿಡಿದು ಉತ್ತಮ ಮಳೆಯಾಗಲಿ ಎಲ್ಲರೂ ಸಂಮೃದ್ದಿ ಜೀವನ ನಡೆಸುವಂತಾಗಲಿ ಎಂದು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿರುವುದಾಗಿ ಹೇಳಿದರು.

ನಂತರ ಬೀದಿಬದಿ ವ್ಯಾಪಾರಿಗಳು, ತಾಲೂಕು ಕಚೇರಿ ಸೇರಿದಂತೆ ಇತರೆಡೆಗಳಲ್ಲಿ ಬಿಜೆಪಿ-ಮೈತ್ರಿ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿಗೆ ಮತ ನೀಡುವಂತೆ ಪ್ರಚಾರ ನಡೆಸಿ ಎಚ್ಡಿಕೆ ಗೆಲ್ಲಿಸುವಂತೆ ಮನವಿ ಮಾಡಿದರು.

ಈ ವೇಳೆ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ, ಮಹದೇವಪುರ ಕೃಷ್ಣ, ಮೇಳಾಪುರ ಜಯರಾಂ, ರವಿಲಕ್ಷ್ಮಣ, ಮಹೇಶ್, ರಾಮಣ್ಣ ಸೇರಿದಂತೆ ನೂರಾರು ಮಂದಿ ರೈತರು ಇದ್ದರು.