ಯಲಬುರ್ಗಾ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಶಾಸಕ ಬಸವರಾಜ ರಾಯರಡ್ಡಿಗೆ ಮಂತ್ರಿ ಸ್ಥಾನ ಲಭಿಸಲೆಂದು ಪ್ರಾರ್ಥಿಸಿ ಪಟ್ಟಣದ ಶ್ರೀ ವಿಜಯ ದುರ್ಗಾದೇವಿ ದೇವಸ್ಥಾನದಲ್ಲಿ ಮಂಗಳವಾರ ಕ್ಷೇತ್ರದ ಜನತೆ ಪಕ್ಷಾತೀತವಾಗಿ ಕುಂಕುಮಾರ್ಚನೆ, ವಿಶೇಷ ಪೂಜೆ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ ಮಾತನಾಡಿ, ಶಾಸಕ ಬಸವರಾಜ ರಾಯರಡ್ಡಿ ಮುಖ್ಯಮಂತ್ರಿ ಸ್ಥಾನಕ್ಕೂ ಅರ್ಹ ವ್ಯಕ್ತಿತ್ವ ಹೊಂದಿದ್ದಾರೆ.ಇಂತಹ ಅಭಿವೃದ್ಧಿ ಚಿಂತನೆ, ದೂರದೃಷ್ಟಿ ಜನನಾಯಕ ರಾಯರಡ್ಡಿಗೆ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡಬೇಕು.ಹಲವು ದಶಕಗಳಿಂದ ನಿರಂತರ ಜನಸೇವೆ ಮೂಲಕ ಯಲಬುರ್ಗಾ ಕ್ಷೇತ್ರದಲ್ಲಿ ಬಹುದೊಡ್ಡ ಅಭಿವೃದ್ಧಿ ಕ್ರಾಂತಿ ಮಾಡಿದ್ದಾರೆ. ಹಿಂದೆ ವಸತಿ ಖಾತೆ, ಉನ್ನತ ಶಿಕ್ಷಣ ಸಚಿವರಾಗಿ ಕರ್ತವ್ಯ ನಿರ್ವಹಿಸಿದ ಆಡಳಿತ ಅನುಭವ ಹೊಂದಿದ್ದಾರೆ. ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ಶಾಸಕ ರಾಯರಡ್ಡಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಅಟಮಾಳಗಿ ಮಾತನಾಡಿ, ಶಾಸಕ ಬಸವರಾಜ ರಾಯರಡ್ಡಿಗೆ ಡಿಸಿಎಂ ಹುದ್ದೆ, ಹಣಕಾಸು ಮಂತ್ರಿ ನೀಡಬೇಕು. ಅವರು ಮಾಡಿರುವ ಅಭಿವೃದ್ಧಿ ಕೆಲಸ ಯಾವುದೇ ಕ್ಷೇತ್ರದಲ್ಲಿ ಆಗಿಲ್ಲ.ಸಾಕಷ್ಟು ಆಡಳಿತದ ಜ್ಞಾನ ಹೊಂದಿದ್ದಾರೆ. ಹಿರಿತನ, ಆಡಳಿತದ ಅನುಭವ, ದಕ್ಷತೆ ಗಮನಿಸಿ ಮಂತ್ರಿಯಾಗಿ ಮಾಡಬೇಕು ಎಂದರು.
ಮುಖಂಡರಾದ ರೇವಣಪ್ಪ ಸಂಗಟಿ, ಸಾವಿತ್ರಿ ಗೊಲ್ಲರ, ರೇವಣಪ್ಪ ಹಿರೇಕುರುಬರ, ಎಂ.ಎಫ್. ನದಾಫ್, ಹುಲಗಪ್ಪ ಬಂಡಿವಡ್ಡರ್, ಶಿವಾನಂದ ಬಣಕಾರ್, ರೆಹಮಾನ್ ನಾಯಕ ಮಾತನಾಡಿದರು.ಈ ಸಂದರ್ಭದಲ್ಲಿ ಶರಣಪ್ಪ ಗಾಂಜಿ, ಡಾ. ಶಿವನಗೌಡ ದಾನರಡ್ಡಿ, ಗಿರಿಜಾ ಸಂಗಟಿ, ಆನಂದ ಉಳ್ಳಾಗಡ್ಡಿ, ಸಂಗಣ್ಣ ತೆಂಗಿನಕಾಯಿ, ಡಾ. ನಂದಿತಾ ದಾನರಡ್ಡಿ, ಶರಣಪ್ಪ ಅರಕೇರಿ, ಹಂಪಯ್ಯಸ್ವಾಮಿ ಹಿರೇಮಠ, ಮಲ್ಲೇಶಗೌಡ ಮಾಲಿಪಾಟೀಲ್, ವಸಂತರಾವ್ ಕುಲಕರ್ಣಿ, ಛತ್ರಪ್ಪ ಛಲವಾದಿ, ಬಸವರಾಜ ಈಳಿಗೇರ್, ತಿರುಪತಿ ನಾಯಕ, ಶಿವಾನಂದಯ್ಯ ಹಿರೇಮಠ, ರಮೇಶ ಛಲವಾದಿ ಅಶೋಕ ಮಾಲಿಪಾಟೀಲ್, ಎಂ.ಎನ್. ಜನಾದ್ರಿ, ಶರಣಗೌಡ ಬಸಾಪೂರು, ಖಾಜಾವಲಿ ಗಡಾದ, ಪರಶುರಾಮ ಸಂಗನಾಳ, ಸಂಗಪ್ಪ ಕೊಪ್ಪಳ, ಶರಣಪ್ಪ, ಜಯಶ್ರೀ ಕಂದಕೂರು, ಪ್ರವೀಣಾ ವಣಗೇರಿ ಸೇರಿದಂತೆ ಮತ್ತಿತರರು ಇದ್ದರು.