ಅರಕಲಗೂಡು ವಿಧಾನ ಸಭಾ ಕ್ಷೇತ್ರವನ್ನು ನಾಲ್ಕು ಬಾರಿ ಶಾಸಕರಾಗಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಪ್ರತಿನಿಧಿಸಿ, ತಮ್ಮ ನೇರ ನಡೆನುಡಿ ಹಾಗೂ ಸರಳ ಸಜ್ಜನಿಕೆಯ ಜನಮನ ಗೆದ್ದ ಅಪರೂಪದ ಪ್ರಾಮಾಣಿಕ ರಾಜಕಾರಣಿ. ಬೆಂಗಳೂರು ನಗರ ಜಿಲ್ಲೆಯ ಭೂಕಬಳಿಕೆ ಪರಿಶೀಲನೆಗಾಗಿ ಸರ್ಕಾರ ರಚಿಸಿದ್ದ ಜಿಂಟಿ ಸದನ ಸಮಿತಿಯ ಅಧ್ಯಕ್ಷರಾಗಿ ವರದಿಯನ್ನು ಸಲ್ಲಿಸಿ, ಭೂ ಮಾಫಿಯಾ ವಿರುದ್ಧ ಅಹೋರಾತ್ರಿ ಹೋರಾಟ ನಡೆಸಿದ ಭ್ರಷ್ಟಾಚಾರ ವಿರೋಧಿ, ಪ್ರಸ್ತುತ ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ. ಎ.ಟಿ. ರಾಮಸ್ವಾಮಿ ಅವರ ಅಭಿನಂದನಾ ಗ್ರಂಥ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಮನಾಥಪುರಈ ಕ್ಷೇತ್ರದ 4 ಬಾರಿ ಶಾಸಕರಾಗಿ ಹಾಗೂ ಭೂಕಬಳಿಕೆ ಅಧ್ಯಕ್ಷರಾಗಿ ಯಾವುದೇ ಕಪ್ಪು ಚುಕ್ಕಿಇಲ್ಲದೇ ಪ್ರತಿನಿಧಿಸಿ, ತಮ್ಮ ನೇರನುಡಿ ಹಾಗೂ ಸರಳ ಸಜ್ಜನಿಕೆಯ ಜನಾನುರಾಗಿ ಪ್ರಾಮಾಣಿಕ ರಾಜಕಾರಣಿ ಡಾ. ಎ.ಟಿ. ರಾಮಸ್ವಾಮಿ ಅವರು ಎಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷರಾದ ಜಯಪ್ರಕಾಶಗೌಡ ತಿಳಿಸಿದರು. ಅರಕಲಗೂಡು ತಾಲ್ಲೂಕು ಅರಸೀಕಟ್ಟೆ ಅಮ್ಮ ದೇವಾಲಯದ ಅವರಣದಲ್ಲಿ ನಿಸ್ವಾರ್ಥ ಮನೋಭಾವ ಮತ್ತು ಸಾಧನೆಗಳನ್ನು ಪರಿಚಯಿಸಿ ಮುಂದಿನ ಜನಾಂಗಕ್ಕೆ ಮಾದರಿ ವ್ಯಕ್ತಿತ್ವವನ್ನು ಕಟ್ಟಿಕೊಂಡಿರುವ ನಿಟ್ಟಿನಲ್ಲಿ ಎ.ಟಿ. ರಾಮಸ್ವಾಮಿ ಕುರಿತು ಅಭಿನಂದನಾ ಗ್ರಂಥ ಬಿಡುಗಡೆ ಹೊರತರುವ ಪಕ್ಷಾತೀತ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ

ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ಅರಕಲಗೂಡು ವಿಧಾನ ಸಭಾ ಕ್ಷೇತ್ರವನ್ನು ನಾಲ್ಕು ಬಾರಿ ಶಾಸಕರಾಗಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಪ್ರತಿನಿಧಿಸಿ, ತಮ್ಮ ನೇರ ನಡೆನುಡಿ ಹಾಗೂ ಸರಳ ಸಜ್ಜನಿಕೆಯ ಜನಮನ ಗೆದ್ದ ಅಪರೂಪದ ಪ್ರಾಮಾಣಿಕ ರಾಜಕಾರಣಿ. ಬೆಂಗಳೂರು ನಗರ ಜಿಲ್ಲೆಯ ಭೂಕಬಳಿಕೆ ಪರಿಶೀಲನೆಗಾಗಿ ಸರ್ಕಾರ ರಚಿಸಿದ್ದ ಜಿಂಟಿ ಸದನ ಸಮಿತಿಯ ಅಧ್ಯಕ್ಷರಾಗಿ ವರದಿಯನ್ನು ಸಲ್ಲಿಸಿ, ಭೂ ಮಾಫಿಯಾ ವಿರುದ್ಧ ಅಹೋರಾತ್ರಿ ಹೋರಾಟ ನಡೆಸಿದ ಭ್ರಷ್ಟಾಚಾರ ವಿರೋಧಿ, ಪ್ರಸ್ತುತ ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ. ಎ.ಟಿ. ರಾಮಸ್ವಾಮಿ ಅವರ ಅಭಿನಂದನಾ ಗ್ರಂಥ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮೈಸೂರು (ನಿ) ಕುಲ ಸಚಿವರು ಡಾ. ಎ. ರಂಗಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧೇಶಕರು ಬಿ.ಕೆ. ಬಸವರಾಜು, ಪ್ರಾಧ್ಯಪಕರು ಡಾ. ಬಿ.ಈ. ಯೋಗೇಂದ್ರ, ಸಂಪಾದಕರಾದ ವೇಂಕಟೇಶ್. ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬಿ.ಕೆ. ಮಂಜುನಾಥ್‌, ಹಿರಿಯ ವಕೀಲರಾದ ಜನಾರ್ಧನಗುಪ್ತ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು ಕೇಶವಮೂರ್ತಿ ಹಾಗೂ ಮಾದೇಶ್, ಶ್ರೀ ಬೋರೇಗೌಡರು, ಹೇಮಂತ್ ಕುಮಾರ್, ಕೆ. ಮಂಜೇಗೌಡ, ಬಸವರಾಜು, ವಿರೂಪಾಕ್ಷ ಮುಂತಾದವರು ಭಾಗವಹಿಸಿದ್ದರು.