ಹಕ್ಕಿಜ್ವರ ತಡೆಗಟ್ಟಲು ಮುನ್ನೆಚ್ಚರಿಕೆ ಸಿದ್ಧತೆ: ಡಾ. ರಾಜು ದೇಶಮುಖ

| Published : Mar 07 2025, 12:48 AM IST

ಹಕ್ಕಿಜ್ವರ ತಡೆಗಟ್ಟಲು ಮುನ್ನೆಚ್ಚರಿಕೆ ಸಿದ್ಧತೆ: ಡಾ. ರಾಜು ದೇಶಮುಖ
Share this Article
  • FB
  • TW
  • Linkdin
  • Email

ಸಾರಾಂಶ

Precautionary measures to prevent bird flu: Dr. Raju Deshmukh

ಕನ್ನಡಪ್ರಭ ವಾರ್ತೆ ಯಾದಗಿರಿ

ಹಕ್ಕಿಜ್ವರವು ಸಾಂಕ್ರಾಮಿಕ ರೋಗವಾಗಿದ್ದು, ಎವಿಯನ್ ಇನ್ ಫ್ಯೂಎಂಜಾ ಎಂಬ ವೈರಾಣುವಿನಿಂದ ಬರುತ್ತದೆ, ಕೋಳಿ ಶೀತ ಜ್ವರ, ಹಕ್ಕಿಜ್ವರ ರೋಗೋದ್ರೇಕ ತಡೆಗಟ್ಟಲು ಮುನ್ನೆಚ್ಚರಿಕೆ ಸಿದ್ಧತೆ ಕ್ರಮಕ್ಕೆವಹಿಸಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕರು ಡಾ.ರಾಜು ದೇಶಮುಖ ತಿಳಿಸಿದ್ದಾರೆ.

ಸತ್ತ ಕೋಳಿಗಳು ಮೂಗು, ಬಾಯಿ ಮತ್ತು ಕಣ್ಣಿನಿಂದ ನೀರು ಸುರಿಯುವುದು, ಕೋಳಿಗಳ ಮೊಣಕಾಲು ಮತ್ತು ಪಾದಗಳು ನೀಲಿ ಬಣ್ಣಕ್ಕೆ ತಿರುಗುವುದು, ರೋಗ ಹರಡುವಿಕೆ ಸರಿಯಾಗಿ ಬೇಯಿಸದ ಕೋಳಿ ಮಾಂಸ ಮತ್ತು ಮೊಟ್ಟೆಗಳ ಸೇವನೆಯಿಂದ ಸೂಕ್ತ ಆರೋಗ್ಯ ರಕ್ಷಕ ಕವಚ ಧರಿಸದೆ ರೋಗಪೀಡಿತ ಕೋಳಿ ಮತ್ತು ಕಲುಷಿತ ಸಲಕರಣೆಗಳ ಸಂಪರ್ಕದಿಂದ. ಕಳೆದವಾರ ಪಕ್ಕದ ಕೇರಳ ರಾಜ್ಯದಲ್ಲಿ ಕೋಳಿ ಶೀತ ಜ್ವರದ ರೋಗೋದ್ರೇಕವಾಗಿರುತ್ತದೆ. ಮುಂಜಾಗ್ರತೆ ಕ್ರಮವಹಿಸಿ ಅವಶ್ಯಕತೆ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಯಾದಗಿರಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು (ಆಡಳಿತ) ಮೊ.ನಂ.9880492380, ಯಾದಗಿರಿ ಪಶುಪಾಲನಾ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕರು (ಆಡಳಿತ) ಮೊ.ನಂ.9448651212, ಗುರುಮಠಕಲ್ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕರು ಮೊ.ನಂ. 9611546399, ಸುರಪುರ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕರು, ಮೊ.ನಂ.9449998671, ಶಹಾಪೂರ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕರು ಮೊ.ನಂ.9448651169, ವಡಗೇರಾ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕರು ಮೊ.ನಂ.9972555636, ಹುಣಸಗಿ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕರು ಮೊ.ನಂ.7760305412ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.