ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ಅಗತ್ಯ: ವಾಣಿ ಶ್ರೀನಿವಾಸ್

| Published : Aug 30 2024, 01:02 AM IST

ಸಾರಾಂಶ

ತರೀಕೆರೆ, ಪ್ರತಿ ಮಹಿಳೆಯರು ಗರ್ಭಿಣಿಯರಾದಾಗ ಸೀಮಂತ ಮಾಡಿಸಿಕೊಳ್ಳಬೇಕೆಂಬ ಬಯಕೆ ಬರುವುದು ಸಹಜ. ಎಷ್ಟೋ ಜನ ಬಡ ಗರ್ಭಿಣಿಯರಿಗೆ ಸೀಮಂತ ಮಾಡಿಸಿಕೊಳ್ಳಲು ಆರ್ಥಿಕ ತೊಂದರೆ ಇರುವುದರಿಂದ ಸಾಧ್ಯವಾಗಿರುವುದಿಲ್ಲ ಅಂತವರಿಗೆ ನೆರವಾಗಲಿದೆ ಎಂದು ವಾಣಿ ಶ್ರೀನಿವಾಸ್ ಹೇಳಿದ್ದಾರೆ.

ಹುಣಸಘಟ್ಟದ ಹೊಸಳ್ಳಿ ತಾಂಡ ದಲ್ಲಿ ಜಿ.ಎಚ್. ಶ್ರೀನಿವಾಸ್ ಜನಹಿತ ಟ್ರಸ್ಟ್ ನಿಂದ ಏರ್ಪಡಿಸಿದ್ದ ಸಾಮೂಹಿಕ ಸೀಮಂತ

ಕನ್ನಡಪ್ರಭ ವಾರ್ತೆ, ತರೀಕೆರೆಪ್ರತಿ ಮಹಿಳೆಯರು ಗರ್ಭಿಣಿಯರಾದಾಗ ಸೀಮಂತ ಮಾಡಿಸಿಕೊಳ್ಳಬೇಕೆಂಬ ಬಯಕೆ ಬರುವುದು ಸಹಜ. ಎಷ್ಟೋ ಜನ ಬಡ ಗರ್ಭಿಣಿಯರಿಗೆ ಸೀಮಂತ ಮಾಡಿಸಿಕೊಳ್ಳಲು ಆರ್ಥಿಕ ತೊಂದರೆ ಇರುವುದರಿಂದ ಸಾಧ್ಯವಾಗಿರುವುದಿಲ್ಲ ಅಂತವರಿಗೆ ನೆರವಾಗಲಿದೆ ಎಂದು ವಾಣಿ ಶ್ರೀನಿವಾಸ್ ಹೇಳಿದ್ದಾರೆ.

ಹುಣಸಘಟ್ಟದ ಹೊಸಳ್ಳಿ ತಾಂಡ ದಲ್ಲಿ ಜಿ.ಎಚ್. ಶ್ರೀನಿವಾಸ್ ಜನಹಿತ ಟ್ರಸ್ಟ್ ನಿಂದ ಏರ್ಪಡಿಸಿದ್ದ ಸಾಮೂಹಿಕ ಸೀಮಂತ ಮತ್ತು ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಳೆದ 20 ವರ್ಷಗಳಿಂದ ಬಡ ಗರ್ಭಿಣಿಯರ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ, ಇದರಿಂದ ಸಾವಿರಾರು ಜನರಿಗೆ ಸಹಕಾರವಾಗಿದೆ ಎಂದರು.ಗರ್ಭಿಣಿಯರು ಆರೋಗ್ಯವಂತ ಮಕ್ಕಳನ್ನು ಪಡೆಯಲು ಪೌಷ್ಠಿಕ ಆಹಾರ ತೆಗೆದುಕೊಳ್ಳಬೇಕು. ಸೊಪ್ಪು ತರಕಾರಿ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಪೌಷ್ಠಿಕಾಂಶದ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಚನಾ ಶ್ರೀನಿವಾಸ್ ಮಾತನಾಡಿ ಉತ್ತಮ ಸಮಾಜಕ್ಕೆ ಉತ್ತಮ ಮಗುವನ್ನು ತಾಯಂದಿರು ಕೊಡಬೇಕು. ಅದಕ್ಕಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಪ್ರತಿಯೊಂದು ಸೌಲಭ್ಯಗಳನ್ನು ಉಪಯೋಗಿಸಿ ಕೊಳ್ಳಬೇಕು. ಪ್ರತಿ ತಿಂಗಳಿಗೊಮ್ಮೆ ತಪಾಸಣೆಗೆ ಒಳಗಾಗಿ, ಗರ್ಭದಲ್ಲಿರುವ ಮಗು ಆರೋಗ್ಯವಾಗಿರುವ ಬಗ್ಗೆ ಖಾತರಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ವರ್ಷ ವರ್ಷಕ್ಕೂ ಸಾಮೂಹಿಕ ಸೀಮಂತ ಕಾರ್ಯಕ್ರಮ ಹೆಚ್ಚುಹೆಚ್ಚು ನಡೆಸಲಾಗುತ್ತಿದ್ದು ಈ ಬಾರಿಯೂ ಸಹ ತಾಲೂಕಿನಾದ್ಯಂತ ಇರುವ ಗೊಲ್ಲರಹಟ್ಟಿಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಬೇಕಾದ ಅಗತ್ಯ ಮಾಹಿತಿ ತಜ್ಞ ವೈದ್ಯರಿಂದ ಪಡೆಯುವಂತೆ ಹೇಳಿದರು.ಅಜ್ಜಂಪುರ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವಿಜಯಕುಮಾರಿ ಮಾತನಾಡಿ ಅಜ್ಜಂಪುರದಲ್ಲಿ ಸಾಮೂಹಿಕ ಸೀಮಂತ ಕಾರ್ಯಕ್ರಮ ಮೊದಲ ಬಾರಿಗೆ ಪ್ರಾರಂಭಗೊಂಡು ಇಂದಿಗೂ ಈ ಕಾರ್ಯಕ್ರಮ ನಿರಂತರವಾಗಿ ಶಾಸಕರ ಕುಟುಂಬದಿಂದ ನಡೆದುಕೊಂಡು ಬರುತ್ತಿದೆ. ಇದು ಬಡ ಗರ್ಭಿಣಿಯರಿಗೆ ಸಂತೋಷ ಹಾಗೂ ಸಂಭ್ರಮ ತಂದಿದೆ ಎಂದು ಹೇಳಿದರುಉಪಾಧ್ಯಕ್ಷ ರಮೇಶನಾಯ್ಕ ಮಾತನಾಡಿ ನಮ್ಮ ತಾಂಡದಲ್ಲಿ ಈ ಒಂದು ಕಾರ್ಯಕ್ರಮ ಏರ್ಪಡಿಸಿ ತಾಂಡದ ಗರ್ಭಿಣಿ ಯರಿಗೆ ಸೀಮಂತ ಮಾಡಿರುವುದು ಹಬ್ಬದ ವಾತಾವರಣ ನಿರ್ಮಾಣಮಾಡಿದೆ. ರಾಧೆ ಕೃಷ್ಣ ವೇಶ ಧರಿಸಿದ್ದ ಪುಟಾಣಿ ಮಕ್ಕಳ ಸ್ಪರ್ಧೆ ತಾಂಡದಲ್ಲಿ ಸಂಭ್ರಮಾಚರಣೆ ಮಾಡಿದಂತಾಗಿದೆ ಎಂದರು.ಗ್ರಾ ಪಂ ಅಧ್ಯಕ್ಷ ವಿನೋಧ ಮಲ್ಲೇಶ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಚೇತನ್ ಕುಮಾರ್, ಮಾಜಿ ಅಧ್ಯಕ್ಷ ಮಂಜುನಾಥ, ಸದಸ್ಯರಾದ ಚೇತನ್ ಕುಮಾರ್, ಪ್ರಿಯಾಂಕ, ಬಂಜಾರ ಯುವ ಬಳಗದ ಅಧ್ಯಕ್ಷ ಯೋಗೇಶ ನಾಯ್ಕ, ಪತ್ರಕರ್ತ ಎಚ್.ಇ. ಪ್ರದೀಪ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಚರಣ್ ರಾಜ್ ವೇದಿಕೆಯಲ್ಲಿ ಹುಣಸಘಟ್ಟ ಸರ್ಕಾರಿ ಆಸ್ಪತ್ರೆ ವೈದ್ಯರು ಮತ್ತು ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.27ಕೆಟಿಆರ್.ಕೆ 6ಃತರೀಕೆರೆ ಸಮೀಪದ ಹುಣಸಘಟ್ಟದ ಹೊಸಳ್ಳಿ ತಾಂಡ ದಲ್ಲಿ ಜಿ.ಎಚ್. ಶ್ರೀನಿವಾಸ್ ಜನಹಿತ ಟ್ರಸ್ಟ್ ನಿಂದ ನಡೆದ ಸಾಮೂಹಿಕ ಸೀಮಂತ ಮತ್ತು ಶ್ರೀ ಕೃಷ್ಣಜನ್ಮಾಷ್ಠಮಿ ಕಾರ್ಯಕ್ರಮ ವಾಣಿ ಶ್ರೀನಿವಾಸ್ ಉದ್ಘಾಟಿಸಿದರು. ರಚನ ಶ್ರೀನಿವಾಸ್ ಮತ್ತಿತರರು ಇದ್ದರು.