ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣ ಪುರಸಭೆ ವ್ಯಾಪ್ತಿ ನಗರ ಯೋಜನೆಯ ಮಾಸ್ಟರ್ ಪ್ಲಾನ್‌ಗೆ ಸಿದ್ಧತೆ ಸಂಬಂಧ ಶಾಸಕ ರಮೇಶ ಬಂಡಿಸಿದ್ದೇಗೌಡ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.ಪಟ್ಟಣದ ಪುರಸಭಾ ಕಚೇರಿ ಆವರಣದಲ್ಲಿ ಮಂಡ್ಯ ನಗರ ಪ್ರಾಧಿಕಾರ ಯೋಜನಾಧಿಕಾರಿ ಅನನ್ಯ ಹಾಗೂ ಇಂಜಿನಿಯರ್ ಯಮುನಾ, ಖಾಸಗಿ ಯೋಜನಾ ಏಜೆನ್ಸಿ ಸುನೀತಾ, ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ, ಮುಖ್ಯಾಧಿಕಾರಿ ಎಂ.ರಾಜಣ್ಣ ಸೇರಿದಂತೆ ಇತರೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಪಟ್ಟಣದ ವಿಲೇಜ್ ಮ್ಯಾಪ್, ಹೊಸ ಲೇಔಟ್‌ಗಳು, ಪಟ್ಟಣ ಸುತ್ತಲೂ ಇರುವ ನದಿ ದಡದ ಸರ್ವೆ ಜಮೀನುಗಳು, ಬಫರ್ ಜೋನ್, ನೀರಾವರಿ ಪ್ರದೇಶಗಳನ್ನೊಳಗೊಂಡು ಜಿಲ್ಲಾಧಿಕಾರಿಗಳಇಂದ ಅನ್ಯಕ್ರಾಂತವಾಗಿರುವ ಪ್ರದೇಶ ಹಾಗೂ ಸ್ಮಾರಕಗಳು ಪಾರಂಪರಿಕ ಕಟ್ಟಡಗಳ ಕುರಿತು ನಕ್ಷೆಯಲ್ಲಿ ಪರಿಶೀಲಿಸಲಾಯಿತು.ಹಳೆ ನಕ್ಷೆ ಹಾಗೂ ಈಗಿರುವ ನಕ್ಷೆ ಎರಡನ್ನು ಸರಿದೂಗಿಸಿ ವೆಲ್ಲೆಸ್ಲಿ ಸೇತುವೆ, ಕಿರಂಗೂರು ಸ್ಥಳ ಸೇರಿಸಿ ಹೊಸದಾಗಿ ಮಾಸ್ಟರ್ ಪ್ಲಾನ್ ಮಾಡಿ ಪಟ್ಟಣವನ್ನು ಮಹಾ ನಗರವನ್ನಾಗಿಸಲು, ಹೊಸ ಬಡಾವಣೆಗಳ ಜೊತೆ ಇತರೆ ಸರ್ವೆ ನಂ. ಇರುವ ಜಮೀನುಗಳ ಸೇರಿಸಿ ಪಟ್ಟಣವನ್ನು ವಿಸ್ತಾರ ಗೊಳಿಸುವ ಬಗ್ಗೆ ಚರ್ಚಿಸಲಾಯಿತು.
ಈ ವೇಳೆ ಪುರಸಭೆ ಉಪಾಧ್ಯಕ್ಷ ಎಂ.ಎಲ್ ದಿನೇಶ್, ಸದಸ್ಯ ದಯಾನಂದ ಸೇರಿದಂತೆ ಇತರ ಅಧಿಕಾರಿ ವರ್ಗದವರು ಹಾಜರಿದ್ದರು.ದೇಶದ ಅಭಿವೃದ್ಧಿಗೆ ಹೆಣ್ಣು ಮಕ್ಕಳ ಕೊಡುಗೆ ಅಪಾರ: ಎಚ್.ಟಿ.ಮಂಜು
ಕೆ.ಆರ್.ಪೇಟೆ:ಕುಟುಂಬದ ನಿರ್ವಹಣೆ ಹಾಗೂ ದೇಶದ ಅಭಿವೃದ್ಧಿಗೆ ಹೆಣ್ಣುಮಕ್ಕಳ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಹೆಚ್.ಟಿ.ಮಂಜು ಅಭಿಪ್ರಾಯಪಟ್ಟರು.
ಇತ್ತೀಚೆಗೆ ಪಟ್ಟಣದ ಗುರು ಭವನದಲ್ಲಿ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ತಾಲೂಕು ಆಡಳಿತವು ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಹೆಣ್ಣು ಮಕ್ಕಳು ತಮ್ಮಲ್ಲಿನ ಕೀಳರಿಮೆ ಅಳಿಸಿ ಹಾಕಿ ವೃತ್ತಿ ಕೌಶಲ್ಯವನ್ನು ಸದ್ಭಳಕೆ ಮಾಡಿಕೊಂಡು ಗುಡಿ ಕೈಗಾರಿಕೆಗಳ ಮೂಲಕ ಮಹಿಳಾ ಸಬಲೀಕರಣ ಸಾಧಿಸಬೇಕು ಎಂದು ಕರೆ ನೀಡಿದರು.
ಪುರಸಭೆ ಅಧ್ಯಕ್ಷೆ ಪಂಕಜಾ ಪ್ರಕಾಶ್, ತಾಪಂ ಇಒ ಸುಷ್ಮ, ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಮಾತನಾಡಿದರು. ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಬಿ.ಇ.ಓ.ತಿಮ್ಮೇಗೌಡ, ಸಿಡಿಪಿಓ ಅರುಣ್ ಕುಮಾರ್, ತಾಲೂಕು ಸಮಾಜ ಕಲ್ಯಾಣಧಿಕಾರಿ ಡಾ.ದಿವಾಕರ್, ವಲಯ ಅರಣ್ಯ ಅಧಿಕಾರಿ ಅನಿತಾ, ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರೇಖಾ, ಅಂಗನವಾಡಿ ಮೇಲ್ವಿಚಾರಕರಾದ ಪದ್ಮಮ್ಮ, ಶಾಂತವ್ವ.ಎಸ್.ಹಾವಣ್ಣನವರ್, ಶಿಕ್ಷಕಿ ಸಿ.ರಾಧಾ, ಕುಮಾರಿ ಪದ್ಮೇಶ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮಹಿಳಾ ಪ್ರತಿನಿಧಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.