ಕೃಷಿ ಭೂಮಿಯಲ್ಲೇ ಸಾವಯವ ಗೊಬ್ಬರ ತಯಾರಿಕೆ

| Published : Oct 29 2024, 12:53 AM IST

ಸಾರಾಂಶ

ಈ ಯೋಜನೆಯು 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಚಿಕ್ಕಬಳ್ಳಾಪುರ ನಗರಕ್ಕೆ ಅನುಕೂಲಕರವಾಗಿದೆ. ಈ ಮಾದರಿಯನ್ನು ಕಡಿಮೆ ವೆಚ್ಚದಲ್ಲಿ ಪುನರಾವರ್ತಿಸಬಹುದು. ಘನ ತ್ಯಾಜ್ಯ ನಿರ್ವಹಣೆ ಮಾಡಲು ನಗರಭೆಯು ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. ಘನತ್ಯಾಜ್ಯ ನಿರ್ವಹಣೆ ಆರ್ಥಿಕವಾಗಿ ಲಾಭದಾಯಕವಲ್ಲ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಗರದಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ರೈತರ ಸಹಬಾಗಿತ್ವದೊಂದಿಗೆ ರೈತರ ಜಮೀನಿನಲ್ಲಿಯೇ ಸಾವಯುವ ಗೊಬ್ಬರವನ್ನಾಗಿ ಪರಿವರ್ತಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಎ.ಗಜೇಂದ್ರ ತಿಳಿಸಿದರು. ನಗರಸಭೆ, ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟ್ಟಲ್ ಮೆಂಟ್ಸ್ ಮತ್ತು ಗೋದ್ರೇಜ್ ಪ್ರಾಪರ್ಟಿಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಿರುವ ‘ಚಿಕ್ಕಬಳ್ಳಾಪುರ ನಗರಸಭೆ ಮತ್ತು ರೈತರ ಸಹಬಾಗಿತ್ವದಲ್ಲಿ ಘನತ್ಯಾಜ್ಯ ನಿರ್ವಹಣೆ’ ಯೋಜನೆ ಅನ್ವಯ ನಗರದ 7 ನೇ ವಾರ್ಡ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾರ್ಚ್‌ನಲ್ಲೇ ಯೋಜನೆ ಆರಂಭ

ನಗರದಲ್ಲಿ ಮಾರ್ಚ್ 2024 ರಲ್ಲಿ ಆರಂಭವಾದ ಈ ಯೋಜನೆಗೆ ಈಗಾಗಲೇ 230 ರೈತರು ಭಾಗಿದಾರ ರಾಗಿ ಕಳೆದ ಆರು ತಿಂಗಳಿನಲ್ಲಿ ಸುಮಾರು 1800 ಟನ್ ಕಸವನ್ನು ಗೊಬ್ಬರವಾಗಿ ಪರಿವರ್ತಿಸಿದ್ದಾರೆ. ಈ ಯೋಜನೆ ಯನ್ನು ಅನುಷ್ಠಾನಗೊಳಿಸುತ್ತಿರುವ ಐಐಹೆಚ್‌ಎಸ್ ಮತ್ತು ಸಾಮಾಜಿಕ ಹೊಣೆಗಾರಿಕೆಯ ಅಡಿಯಲ್ಲಿ ಸಹಕಾರ ನೀಡು ತ್ತಿರುವ ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್ , ಚಿಕ್ಕಬಳ್ಳಾಪುರ ನಗರ ಸಭೆ, ಸಾವಯುವ ಗೊಬ್ಬರ ಉತ್ಪಾದಿಸುತ್ತಿ ರುವ ರೈತರು ಕಾರ್ಯ ಶ್ಲಾಘನೀಯ ಎಂದರು.ಈ ಯೋಜನೆಯು 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಚಿಕ್ಕಬಳ್ಳಾಪುರ ನಗರಕ್ಕೆ ಅನುಕೂಲಕರವಾಗಿದೆ. ಈ ಮಾದರಿಯನ್ನು ಕಡಿಮೆ ವೆಚ್ಚದಲ್ಲಿ ಪುನರಾವರ್ತಿಸಬಹುದು. ಘನ ತ್ಯಾಜ್ಯ ನಿರ್ವಹಣೆ ಮಾಡಲು ನಗರಭೆಯು ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. ಘನತ್ಯಾಜ್ಯ ನಿರ್ವಹಣೆ ಆರ್ಥಿಕವಾಗಿ ಲಾಭದಾಯಕವಲ್ಲ. ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ಸಣ್ಣ ನಗರ ಗಳು ಘನತ್ಯಾಜ್ಯ ಸೇವೆಗಳನ್ನು ನೀಡಲು ಶ್ರಮಿಸುತ್ತಿವೆ ಎಂದರು.

ಆರ್ಥಿಕ ಹೊರೆ ಕಡಿಮೆ

ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್‌ನಿಂದ ಬೆಂಬಲಿತವಾಗಿರುವ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟಲ್‌ಮೆಂಟ್ಸ್ “ಚಿಕ್ಕಬಳ್ಳಾಪುರದಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ನಗರ-ರೈತ ಪಾಲುದಾರಿಕೆ ಎಸ್‌ಡಬ್ಲ್ಯುಎಂ ಎಂಬ ನವೀನ ಯೋಜನೆಯನ್ನು ಜಾರಿಗೊಳಿಸಿರುವುದು ಅಭಿನಂದನಾರ್ಹ. ಈ ಯೋಜನೆಯು ನಗರಸಭೆಗೆ ತ್ಯಾಜ್ಯ ನಿರ್ವಹಣೆಯ ಪ್ರಕ್ರಿಯೆ ಮತ್ತು ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ರೈತರಿಗೆ ತಮ್ಮ ಜಮೀನಿನಲ್ಲಿ ಯಾವುದೇ ವೆಚ್ಚವಿಲ್ಲದೆ ಸಾವಯವ ಗೊಬ್ಬರ ಸಿಗುವಂತಾಗುತ್ತದೆ ಎಂದು ತಿಳಿಸಿದರು.

ಸುಮಾರು 75000 ಜನಸಂಖ್ಯೆ ಹೊಂದಿರುವ ಚಿಕ್ಕಬಳ್ಳಾಪುರ ನಗರದಲ್ಲಿ ದಿನಕ್ಕೆ ಸುಮಾರು 25 ಟನ್ ಟಿಡಿಪಿ ಘನತ್ಯಾಜ್ಯ ಉತ್ಪತ್ತಿಯಾಗುತ್ತದೆ. ನಗರ ಸಭೆ ತ್ಯಾಜ್ಯವನ್ನು ಸಂಗ್ರಹಿಸಿ, ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡುವ ಬದಲು, ಅದನ್ನು ಕೃಷಿ ಭೂಮಿಯಲ್ಲಿ ಸ್ಥಾಪಿಸಲಾದ ಕಾಂಪೋಸ್ಟಿಂಗ್ ಪಿಟ್ ಗಳಿಗೆ ನೀಡಲಾಗುತ್ತದೆ. ಹಸಿ ಕಸವನ್ನು ಸ್ವೀಕರಿಸುವ ರೈತರು ಸುಮಾರು ‌20 ಚದರ ಮೀಟರ್ ಅಳತೆಯ ಕಾಂಪೋಸ್ಟಿಂಗ್ ಪಿಟ್ನಲ್ಲಿ ಗೊಬ್ಬರ ಉತ್ಪಾದಿಸಬಹುದು. ಐಐಎಹೆಚ್ ಎಸ್ ಸಂಸ್ಥೆ ರೈತರಿಗೆ ತರಬೇತಿ ಮತ್ತು ಕಾಂಪೋಸ್ಟಿಂಗ್ ಕಾರ್ಯಾಚರಣೆಗಳ ಮೇಲ್ವಿಚಾರಣೆಯನ್ನು ಉತ್ತಮವಾಗಿ ಮಾಡುತ್ತಿದೆ ಎಂದರು. ಪ್ರತಿದಿನ 6 ಟನ್‌ ತ್ಯಾಜ್ಯ ರೈತರಿಗೆ

ನಗರದಲ್ಲಿ ಉತ್ಪಾದನೆಯಾಗುತ್ತಿರುವ ತ್ಯಾಜ್ಯದಲ್ಲಿ ಪ್ರಸ್ತುತ 6 ಟನ್ ತ್ಯಾಜ್ಯವನ್ನು ರೈತರಿಗೆ ಪ್ರತಿದಿನ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಸುಮಾರು 12 ಟನ್ ಬೇರ್ಪಡಿಸಿದ ಹಸಿ ತ್ಯಾಜ್ಯವನ್ನು ನೀಡಿ ರೈತರ ಮುಖಾಂತರ ಮಣ್ಣಿನ ಗುಣಮಟ್ಟ ಉತ್ತಮ ಪಡಿಸ ಲಾಗುವುದು. ನಗರದ ಜನತೆ ಎಲ್ಲೆಂದರಲ್ಲಿ ಕಸ ಎಸೆಯದೆ ನಗರಸಭೆ ವಾಹನಕ್ಕೆ ನೀಡಿ, ಇನ್ನೂ ಹೆಚ್ಚು ಸಹಕರಿಸಿ ಮೂಲದಲ್ಲಿಯೇ ಕಸ ವಿಂಗಡಿಸಿದರೆ, ನಗರ ಸ್ವಚ್ಚವಾಗುವುದಲ್ಲದೇ, ನಗರವಾಸಿಗಳು ಬಳಸುವ ಆಹಾರ ಪದಾರ್ಥಗಳನ್ನು ರಾಸಾಯನಿಕ ಮುಕ್ತವಾಗುತ್ತವೆ ಎಂದು ತಿಳಿಸಿದರು.

ಈ ವೇಳೆ ನಗರಸಭೆ ಆರೋಗ್ಯ ಅಧಿಕಾರಿ ಮುರಳೀಧರ್, ಐಐಎಚ್ಎಸ್ ಸಂಸ್ಥೆಯ ಕಿರಣ್, ಅಂಬರೀಷ್, ಹೇಮಂತ್, ನಗರ ಸಭೆಯ ಸಿಬ್ಬಂಧಿ, ಮತ್ತಿತರರು ಇದ್ದರು.