ಐತಿಹಾಸಿಕ ಬಸವೇಶ್ವರ ಜಾತ್ರೆಗೆ ಭರದ ಸಿದ್ಧತೆ

| Published : Aug 04 2024, 01:16 AM IST

ಐತಿಹಾಸಿಕ ಬಸವೇಶ್ವರ ಜಾತ್ರೆಗೆ ಭರದ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ: ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ(ಬಸವೇಶ್ವರ)ನ ಐತಿಹಾಸಿಕ ಜಾತ್ರೆ ಹಾಗೂ ಶ್ರಾವಣ ಮಾಸದಂಗವಾಗಿ ಹಮ್ಮಿಕೊಂಡಿರುವ ಪ್ರವಚನದ ಉದ್ಘಾಟನೆ ಆ.೫ರ ಸಂಜೆ ೬ ಗಂಟೆಗೆ ಬಸವೇಶ್ವರ ದೇವಾಲಯ ಅಂತಾರಾಷ್ಟ್ರೀಯ ಶಾಲಾ ಆವರಣದಲ್ಲಿನ ನಂದೀಶ್ವರ ರಂಗಮಂದಿರದಲ್ಲಿ ನಡೆಯಲಿದೆ ಎಂದು ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸವೇಶ್ವರ ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಗುರುಲಿಂಗ ಬಸರಕೋಡ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ:ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ(ಬಸವೇಶ್ವರ)ನ ಐತಿಹಾಸಿಕ ಜಾತ್ರೆ ಹಾಗೂ ಶ್ರಾವಣ ಮಾಸದಂಗವಾಗಿ ಹಮ್ಮಿಕೊಂಡಿರುವ ಪ್ರವಚನದ ಉದ್ಘಾಟನೆ ಆ.೫ರ ಸಂಜೆ ೬ ಗಂಟೆಗೆ ಬಸವೇಶ್ವರ ದೇವಾಲಯ ಅಂತಾರಾಷ್ಟ್ರೀಯ ಶಾಲಾ ಆವರಣದಲ್ಲಿನ ನಂದೀಶ್ವರ ರಂಗಮಂದಿರದಲ್ಲಿ ನಡೆಯಲಿದೆ ಎಂದು ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸವೇಶ್ವರ ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಗುರುಲಿಂಗ ಬಸರಕೋಡ ಮಾಹಿತಿ ನೀಡಿದರು.ಪಟ್ಟಣದ ಬಸವೇಶ್ವರ ದೇವಾಲಯದ ಅಂತಾರಾಷ್ಟ್ರೀಯ ಶಾಲಾ ಆವರಣದ ನಂದೀಶ್ವರ ರಂಗಮಂದಿರದ ಮುಂಭಾಗ ಪ್ರವಚನಕ್ಕಾಗಿ ಹಾಕಿರುವ ಶಾಮಿಯಾನ, ಸಿದ್ಧತೆಯನ್ನು ಶನಿವಾರ ಸಂಜೆ ವೀಕ್ಷಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವರ್ಷ ಕೊಪ್ಪಳ ತಾಲೂಕಿನ ಬಳೂಟಗಿ ಶಿವಕುಮಾರ ಸ್ವಾಮೀಜಿ ಅವರು ಬಸವಾದಿ ಪ್ರಥಮರು ವಚನ-ಚಿಂತನ ಕುರಿತು ಪ್ರವಚನ ಹೇಳಲು ಆಗಮಿಸುತ್ತಿದ್ದಾರೆ. ಪ್ರವಚನ ಆ.೫ ರಿಂದ ಆರಂಭಗೊಂಡು ಪ್ರತಿನಿತ್ಯ ಸಂಜೆ ೬.೩೦ರಿಂದ ೮ರ ವರೆಗೆ ನಡೆಯಲಿದ್ದು, ಸೆ.೨ ರವರೆಗೆ ನಡೆಯಲಿದೆ. ಪ್ರವಚನದ ಸದುಪಯೋಗವನ್ನು ಸದ್ಭಕ್ತರು ಮಾಡಿಕೊಳ್ಳಬೇಕು ಎಂದರು.

ಇನ್ನು, ಆ.೫ ರಂದು ನಡೆಯಲಿರುವ ಪ್ರವಚನ ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ಸ್ಥಳೀಯ ಸಿದ್ದಲಿಂಗ ಸ್ವಾಮೀಜಿ, ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ನೇತೃತ್ವವನ್ನು ಶಿವಾನಂದ ಈರಕಾರ ವಹಿಸುವರು. ಸಚಿವ ಶಿವಾನಂದ ಪಾಟೀಲ ಪ್ರವಚನ ಉದ್ಘಾಟಿಸುವರು. ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಬಸಪ್ಪ ಪೂಜಾರಿ, ಬಸವೇಶ್ವರ ಸೇವಾ ಸಮಿತಿ ಉಪಾಧ್ಯಕ್ಷ ಬಸವರಾಜ ಹಾರಿವಾಳ, ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಬಸವರಾಜ ಗೊಳಸಂಗಿ, ಟಿಎಪಿಸಿಎಂಎಸ್ ಅಧ್ಯಕ್ಷ ಶೇಖರಗೌಡ ಪಾಟೀಲ, ಸಿಬಿಎಸ್‌ಇ ಶಾಲೆಯ ಸಮಿತಿ ಅಧ್ಯಕ್ಷ ಭರತ ಅಗರವಾಲ, ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಮುಖಂಡರಾದ ಸಂಗಣ್ಣ ಕಲ್ಲೂರ, ಸುರೇಶಗೌಡ ಪಾಟೀಲ, ಎಂ.ಜಿ.ಆದಿಗೊಂಡ, ಶೇಖರ ಗೊಳಸಂಗಿ, ಸಂಗಮೇಶ ಓಲೇಕಾರ, ಉಮೇಶ ಹಾರಿವಾಳ, ಸಂಕನಗೌಡ ಪಾಟೀಲ, ರವಿ ರಾಠೋಡ ಇತರರು ಆಗಮಿಸುವರು ಎಂದರು.ಭರತ್‌ ಅಗರವಾಲ ಅವರ ಏಳು ಎಕರೆ ಜಮೀನಿನಲ್ಲಿ ಜಾತ್ರೆಗೆ ಬರುವ ವಿವಿಧ ಸಾಮಾನುಗಳ ಮಾರಾಟದ ಅಂಗಡಿ ಸೇರಿದಂತೆ ವಿವಿಧ ತೂಗು ತೊಟ್ಟಿಲು, ವಿವಿಧ ಮನೋರಂಜನೆಗಳ ಆಟಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗುವುದು. ಈ ಜಾಗೆಗೆ ಜನರು ತೆರಳಲು ಅಗತ್ಯ ರಸ್ತೆ, ಬೀದಿ ದೀಪದ ವ್ಯವಸ್ಥೆ ಮಾಡಲಾಗುವುದು. ಜಾತ್ರೆಯ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕೆಂದರು.ಕಳೆದ ಜಾತ್ರಾಮಹೋತ್ಸವ ಅಧ್ಯಕ್ಷ ಎಂ.ಜಿ.ಆದಿಗೊಂಡ ಮಾತನಾಡಿ, ಈ ವರ್ಷದ ಜಾತ್ರೆಗೂ ಕಳೆದ ವರ್ಷದಂತೆ ಎಲ್ಲರೂ ಸಹಕಾರ ನೀಡುವ ಮೂಲಕ ಜಾತ್ರೆಯನ್ನು ಸಡಗರದಿಂದ ಆಚರಿಸಿ ಯಶಸ್ವಿಗೊಳಿಸುವಂತೆ ಕೋರಿದರು.ಸುದ್ದಿಗೋಷ್ಠಿಯಲ್ಲಿ ಜಾತ್ರಾಮಹೋತ್ಸವ ಸಮಿತಿ ಉಪಾಧ್ಯಕ್ಷರಾದ ಸಂಗಯ್ಯ ಒಡೆಯರ, ಬಸವರಾಜ ಅಳ್ಳಗಿ, ಪ್ರವೀಣ ಪೂಜಾರಿ, ಮುತ್ತು ಪತ್ತಾರ, ಖಜಾಂಚಿ ಎಂ.ಬಿ.ತೋಟದ, ಪ್ರಧಾನ ಕಾರ್ಯದರ್ಶಿ ಬಾಬು ನಿಡಗುಂದಿ, ಮುಖಂಡರಾದ ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಭರತ್‌ ಅಗರವಾಲ, ಬಸವರಾಜ ಹಾರಿವಾಳ, ಶೇಖರ ಗೊಳಸಂಗಿ, ಸಂಗಣ್ಣ ಕಲ್ಲೂರ, ಬಸವರಾಜ ಗೊಳಸಂಗಿ, ಸುರೇಶಗೌಡ ಪಾಟೀಲ, ಉಮೇಶ ಹಾರಿವಾಳ, ರವಿ ರಾಠೋಡ, ಸಂಕನಗೌಡ ಪಾಟೀಲ, ಚಂದ್ರಶೇಖರ ಪಾಟೀಲ ಇತರರು ಇದ್ದರು.

--------------------------------------------------

ಬಾಕ್ಸ್‌ಜಾತ್ರೆಯಲ್ಲಿ ಏನೇನು ವಿಶೇಷ?

ಈ ವರ್ಷ ಶ್ರಾವಣ ಮಾಸದಲ್ಲಿ ಐದು ಸೋಮವಾರ ಬರುವುದರಿಂದ ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ಜಾತ್ರೆಯು ನಾಲ್ಕನೇ ಸೋಮವಾರ ಆ.೨೬ ರಂದು ನಡೆಯಲಿದೆ. ಆ.೨೬ ರಿಂದ ೩೦ ರವರೆಗೆ ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲು ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಜಾತ್ರೆಯಲ್ಲಿ ಎರಡು ದಿನಗಳ ಕಾಲ ಕೃಷಿಮೇಳ ಆಯೋಜನೆ ಮಾಡುವ ಜೊತೆಗೆ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ, ವಿವಿಧ ಕಸರತ್ತಿನ ಸ್ಪರ್ಧೆಗಳು, ಜನಪದ ಕಲೆ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.