ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರನಗರದಲ್ಲಿ ಸ್ವಚ್ಛತೆ ಸಂರಕ್ಷಣೆ ಮಾಡುವ ದೆಸೆಯಲ್ಲಿ ಮಾರ್ಷಲ್ ಮಾದರಿ ಸ್ವಚ್ಛತಾ ಕಾರ್ಯಪಡೆ ನಗರಸಭೆ ಆಡಳಿತ ಮಂಡಳಿಯ ಅನುಮೋದನೆ ಪಡೆದು ರಚಿಸಲು ನಿರ್ಧರಿಸಲಾಗಿದೆ. ಅವರಿಗೆ ತ್ಯಾಜ್ಯವನ್ನು ಎಲ್ಲೆಂದರೆ ಅಲ್ಲಿ ಸುರಿಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು, ದಂಡ ವಿಧಿಸುವಂತ ಅಧಿಕಾರ ಅಧಿಕೃತವಾಗಿ ನೀಡಲು ನಿರ್ಧರಿಸಿದೆ. ಇದಕ್ಕೆ ಜಿಲ್ಲಾಧಿಕಾರಿ ಸಹ ಸಮ್ಮತಿ ನೀಡಿದ್ದಾರೆ ಎಂದು ನಗರಸಭೆ ಪೌರಾಯುಕ್ತ ನವೀನ್ ಚಂದ್ರ ತಿಳಿಸಿದರು. ನಗರಸಭೆ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಗರದ ಉದ್ಯಾನವನಗಳನ್ನು ಸುಂದರಗೊಳಿಸಿ ಮಕ್ಕಳ ಆಟದ ಪರಿಕಾರಗಳನ್ನು ಅಳವಡಿಸಿ ಕಾರಂಜಿಗಳು ಹಾಳಾಗಿರುವ ಕಡೆ ದುರಸ್ತಿ ಹಾಗೂ ಹೊಸದಾಗಿ ಕಾರಂಜಿಗಳನ್ನು ಆಳವಡಿಸುವ ಮೂಲಕ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗುವುದು ಎಂದರು.
ಮಾದರಿ ನಗರವಾಗಿ ಕೋಲಾರಇದರ ಜೂತೆಗೆ ತೋಟಗಾರಿಕೆ ಇಲಾಖೆಯಿಂದ ಹೂವಿನ ಗಿಡಗಳನ್ನು ನೆಟ್ಟು ಹಸಿರೀಕರಣಗೊಳಿಸಿ ಕೋಲಾರವನ್ನು ಮಾದರಿಯ ನಗರವನ್ನಾಗಿ ಮಾಡಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿಗಳು ಇತ್ತೀಚೆಗೆ ನಗರ ಸಂಚಾರ ಕೈಗೊಂಡಾಗ ಮುಖ್ಯವಾಗಿ ಎಲ್ಲೆಡೆ ಕಸದ ಸಮಸ್ಯೆಯೇ ಪ್ರಮುಖವಾಗಿ ಕಂಡು ಬಂದಿದ್ದಾಗಿ ತಿಳಿಸಿದರು.
ತ್ಯಾಜ್ಯವು ನಗರದಲ್ಲಿ ಪ್ರತಿ ದಿನ ಸುಮಾರು ೧೫ ಟನ್‌ವರೆಗೆ ಸಂಗ್ರಹವಾಗುತ್ತಿದ್ದೆ. ಇದನ್ನು ನರಸಾಪುರ ಸಮೀಪದಲ್ಲಿ ೧೫ ಎಕರೆ ಜಾಗವನ್ನು ಪಡೆದಿದ್ದು, ತ್ಯಾಜ್ಯ ಘಟಕ ಮಾಡುವ ಪ್ರಯತ್ನವು ಮುಂದುವರೆದಿದೆ, ಇನ್ನು ೧೫ ದಿನಗಳ ಒಳಗೆ ಕಂದಾಯ ಇಲಾಖೆ ಈ ಜಾಗವನ್ನು ಮಂಜೂರು ಮಾಡಲಿದೆ ಎಂದು ಹೇಳಿದರು.ರಸ್ತೆಗೆ ಕಸ ಎಸೆಯಬೇಡಿ
ಪ್ರಸ್ತುತ ನಗರದಲ್ಲಿನ ೩೫ ವಾರ್ಡಗಳಲ್ಲಿ ಮನೆ ಮನೆ ಕಸ ಸಂಗ್ರಹದ ಕಾರ್ಯಕ್ರಮವು ಎರಡು ದಿನಕ್ಕೊಮ್ಮೆ ಸಂಗ್ರಹಿಸಲಾಗುತ್ತಿದೆ. ಅದರೂ ಬಹಳಷ್ಟು ಮಂದಿ ಕಸವನ್ನು ಎರಡು ದಿನ ಸಂಗ್ರಹಿಸಿ ಇಟ್ಟುಕೊಳ್ಳುವಷ್ಟು ತಾಳ್ಮೆ ಇಲ್ಲದೆ ರಸ್ತೆಗಳಲ್ಲಿ ಎಸೆಯುತ್ತಿದ್ದಾರೆ. ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯುಂಟಾಗಿದೆ. ಕೆಲವು ಸಾರ್ವಜನಿಕರು ರಾತ್ರಿ ವೇಳೆ ಅಥವಾ ಮುಂಜಾನೆ ವೇಳೆ ತಮ್ಮ ಮನೆಯಲ್ಲಿನ ಕಸವನ್ನು ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಚೀಲಗಳಲ್ಲಿ ತುಂಬಿಕೊಂಡು ತಮ್ಮ ಮನೆಯ ರಸ್ತೆ ಹೊರತುಪಡಿಸಿ ವಿವಿಧ ಕಡೆ ಸುರಿಯುತ್ತಿದ್ದಾರೆ ಎಂದರು. ರಸ್ತೆ ಬದಿ ಹೋಟೆಲ್‌ಗಳ ಹಾವಳಿಸಾರ್ವಜನಿಕರ ಮನೆಗಳ ಕಸ ಸಂಗ್ರಹಕ್ಕಿಂತ ಹೆಚ್ಚಾಗಿ ಮೊಬೈಲ್ ಕ್ಯಾಂಟಿನ್, ತಿಂಡಿ ತಿನಿಸು ಮಾರಾಟದ ತಳ್ಳುವ ಗಾಡಿಗಳು. ರಸ್ತೆ ಬದಿಯ ಮಿನಿ ಹೋಟೆಲ್‌ಗಳು, ಪಾನಿ ಪೂರಿ, ಜ್ಯೂಸ್ ಬೇಕರಿ, ಹಣ್ಣಿನ ಅಂಗಡಿಗಳವರು ಸೇರಿದಂತೆ ಮದುವೆ. ಮುಂಚಿ ಇತರೆ ಸಮಾರಂಭ ಕಾರ್ಯಕ್ರಮಗಳ ಸಂದರ್ಭಧಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಟ್ರಾಕ್ಟರ್‌ಗಳಲ್ಲಿ ತುಂಬಿಕೊಂಡು ನಗರ ಹೊರವಲಯದ ಕೆರೆಗಳಲ್ಲಿ ಸೇವಾ ರಸ್ತೆ ಬದಿಗಳಲ್ಲಿ ಸುರಿಯುತ್ತಿರುವುದು ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ಇದರ ಜೂತೆಗೆ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ನಗರ ಹೊರವಲಯದ ಕೋಡಿಕಣ್ಣೂರು, ಅಮ್ಮೇರಹಳ್ಳಿ ಕೆರೆ ಕಾಲುವೆಗಳಿಗೆ ಸುರಿಯುತ್ತಿರುವುದರಿಂದ ವಾಯು ಮಾಲಿನ್ಯ ಉಂಟಾಗುತ್ತಿದೆ ಎಂದರು.ನಗರಸಭೆಯಲ್ಲಿ ಪೌರಕಾರ್ಮಿಕ ಸಿಬ್ಬಂದಿಗಳ ಕೊರತೆ ಇರುವುದರಿಂದ ಸ್ವಚ್ಚತಾ ಸಂರಕ್ಷಣೆ ಪಡೆ ರಚಿಸಿ ನಿಯಂತ್ರಿಸುವ ಪ್ರಯತ್ನವಾಗಿದೆ. ರಾತ್ರಿ ಹಾಗೂ ಹಗಲು ಎರಡು ಹೊತ್ತು ಕಾರ್ಯಪಡೆಯು ಪೊಲೀಸ್ ಮಾದರಿಯಲ್ಲಿ ಗಸ್ತು ತಿರುಗುತ್ತಿರುತ್ತದೆ. ತ್ಯಾಜ್ಯ ಘಟಕಗಳು ಸ್ಥಾಪನೆಯಾದ ಮೇಲೆ ನಿಯಮಗಳು ರಚಿಸಲಾಗುತ್ತದೆ ಎಂದು ವಿವರಿಸಿದರು.ಸರ್ವಜ್ಞ ಪಾರ್ಕ್ ಬಳಿ ಫುಡ್ ಪಾರ್ಕ್
ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸರ್ವಜ್ಞ ಪಾರ್ಕ್ ಪಕ್ಕದ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿರುವ ಪುಡ್‌ಪಾರ್ಕ್‌ನಲ್ಲಿ ಯೂನಿಫಾರ್ಮಿಟಿ ಮಾದರಿಯಲ್ಲಿ ಕ್ಯಾಂಟಿನ್‌ಗಳನ್ನು ಮಾಡಲು ಯೋಜನೆ ಮಾಡಲಾಗಿದೆ. ಸಿಕ್ಕಿದವರಿಗೆಲ್ಲಾ ನೀಡಲಾಗುವುದಿಲ್ಲ ನಾವೇ ಕೋರ್ಟ್ ಒಳಗೆ ವಿನೂತವಾದ ವಿನ್ಯಾಸ ಮಾದರಿಯಲ್ಲಿ ಮಾಡಲಾಗುವುದು. ಪಾರ್ಕಿಂಗ್‌ಗಳಿಗೆ ಅವಕಾಶ ನೀಡಲಾಗುವುದಿಲ್ಲ ಅದಕ್ಕೆ ಬೇರೆ ಕಡೆ ವ್ಯವಸ್ಥೆ ಮಾಡಲಾಗುವುದು ಎಂದರು.