- ಭಾರತ ಚುನಾವಣಾ ಆಯೋಗ ಈಗಾಗಲೇ ವೇಳಾ ಪಟ್ಟಿ ಸಿದ್ಧ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮತದಾರಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಶನಿವಾರದಿಂದ ಆರಂಭಗೊಳ್ಳಲಿದೆ. ಜೂ. 30 ರಿಂದ ಬೂತ್‌ ಮಟ್ಟದ ಅಧಿಕಾರಿಗಳು ಮನೆ- ಮನೆ ಭೇಟಿ ನೀಡಿ ಮತದಾರರಿಗೆ ಎನ್ಯೂಮರೇಶನ್ ಫಾರಂ ವಿತರಿಸಲಿದ್ದಾರೆ.

ಎಸ್‌ಐಆರ್‌ ನಡೆಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಭಾರತ ಚುನಾವಣಾ ಆಯೋಗ ಈಗಾಗಲೇ ವೇಳಾ ಪಟ್ಟಿ ಸಿದ್ಧಪಡಿಸಿ ನೀಡಲಾಗಿದೆ. ಈ ಪ್ರಕಾರ ಶನಿವಾರದಿಂದ ಜಿಲ್ಲೆಯಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಆರಂಭಗೊಳ್ಳಲಿದೆ. ಜೂನ್‌ 20ರ ಶನಿವಾರದಿಂದ ಜೂನ್‌ 29ರ ವರೆಗೆ ಎನ್ಯೂಮರೇಶನ್ ಫಾರಂ ಮುದ್ರಣ ಪ್ರಕ್ರಿಯೆ, ಪ್ರತಿ ವಿಧಾನಸಭಾ ಕ್ಷೇತ್ರ ತಲಾ 5 ಮಂದಿ ಮಾಸ್ಟರ್‌ ತರಬೇತಿದಾರರಿಗೆ ತರಬೇತಿ, ನಂತರ ವಿಧಾನಸಭಾ ಕ್ಷೇತ್ರವಾರು ಬಿಎಲ್‌ಒಗಳಿಗೆ ಮತ್ತು ಮೇಲ್ವಿಚಾರಕರಿಗೆ ತರಬೇತಿ ಕಾರ್ಯ ನಡೆಸಲಾಗುತ್ತದೆ.

ತರಬೇತಿ ವೇಳೆ ಮತದಾರರ ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಎನ್ಯೂಮರೇಶನ್ ಫಾರಂ ವಿತರಣೆ, ಭರ್ತಿ ಮಾಡಿದ ಎನ್ಯೂಮರೇಶನ್ ಫಾರಂ ವಾಪಾಸ್‌ ಪಡೆಯುವುದು ಹಾಗೂ ಎನ್ಯೂಮರೇಶನ್ ಫಾರಂ ಅಂಶಗಳನ್ನು ಭಾರತ ಚುನಾವಣಾ ಆಯೋಗದ ಆ್ಯಪ್‌ಗೆ ಭರ್ತಿ ಮಾಡುವುದು ಮತ್ತು ಜತೆಗೆ ಮತದಾರರು ಭರ್ತಿ ಮಾಡಿ ನೀಡಿದ ಫಾರಂ ಅನ್ನು ಸ್ಕ್ಯಾನ್‌ ಮಾಡಿ ಅಪ್‌ ಲೋಡ್‌ ಮಾಡುವುದು ಹೇಗೆ ಎಂಬುದರ ಬಗ್ಗೆ ತರಬೇತಿ ನೀಡಲಾಗುತ್ತದೆ.


ಜೂನ್‌ 30 ರಿಂದ ಜುಲೈ 29ರ ವರೆಗೆ ಮನೆ ಮನೆ ಭೇಟಿ ನೀಡಿ ಎನ್ಯೂಮರೇಶನ್ ಫಾರಂ ವಿತರಣೆ, ಭರ್ತಿಯಾದ ಫಾರಂ ವಾಪಾಸ್‌ ಪಡೆಯುವುದು ಸೇರಿದಂತೆ ಮೊದಲಾದ ಕಾರ್ಯವನ್ನು ಬಿಎಲ್‌ಒ ಮಾಡಲಿದ್ದಾರೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ 5 ವಿಧಾನಸಭಾ ಕ್ಷೇತ್ರದ 1,230 ಮತಗಟ್ಟೆಗೆ ತಲಾ ಒಬ್ಬರಂತೆ ಬೂತ್‌ ಮಟ್ಟದ ಅಧಿಕಾರಿಗಳಿಗೆ ಎಸ್‌ಐಆರ್‌ ಪ್ರಕ್ರಿಯೆಗೆ ನೇಮಕ ಮಾಡಿಕೊಳ್ಳಲಾಗಿದೆ. ಬಿಎಲ್‌ಒಗಳ ಮೇಲ್ವಿಚಾರಣೆಗೆ ತಲಾ 8 ರಿಂದ 10 ಬಿಎಲ್‌ಒಗೆ ಒಬ್ಬರಂತೆ ಮೇಲ್ವಿಚಾರಕರನ್ನು ನೇಮಿಸಿಕೊಳ್ಳಲಾಗಿದೆ.

ಮ್ಯಾಪಿಂಗ್‌ ಮುಂದುವರಿಕೆ

ಎಸ್‌ಐಆರ್‌ ಪೂರ್ವ ತಯಾರಿಗೆ ನಡೆಸಲಾಗುತ್ತಿರುವ ಮ್ಯಾಪಿಂಗ್‌ ಪ್ರಕ್ರಿಯೆ ಸಹ ಮುಂದುವರಿಯಲಿದೆ. ಮ್ಯಾಪಿಂಗ್‌ ಆಗಿರುವ ಮತದಾರರು ಯಾವುದೇ ದಾಖಲೆ ನೀಡುವಂತಿಲ್ಲ. ಮ್ಯಾಪಿಂಗ್‌ನಿಂದ ಹೊರಗಿರುವ ಮತದಾರರು ಕರಡು ಮತದಾರ ಪಟ್ಟಿ ಸಲ್ಲಿಕೆಯಾದ ಬಳಿಕ ಚುನಾವಣಾ ಆಯೋಗ ನೋಟಿಸ್‌ ನೀಡಲಿದೆ. ಆಗ ಚುನಾವಣಾ ಆಯೋಗ ಸೂಚಿಸಿದ 12 ದಾಖಲೆ ಗಳಲ್ಲಿ ಯಾವುದಾದರೂ ಒಂದು ದಾಖಲೆ ಸಲ್ಲಿಕೆ ಮಾಡಿ ಮತದಾರ ಪಟ್ಟಿಗೆ ಸೇರಿಕೊಳ್ಳಬಹುದು. ಇಲ್ಲವಾದರೆ, ಅಂತಿಮ ಮತದಾರ ಪಟ್ಟಿಯಿಂದ ಹೆಸರು ತೆಗೆದು ಹಾಕಲಾಗುತ್ತದೆ.

-- ಬಾಕ್ಸ್‌--

ಎನ್ಯೂಮರೇಶನ್ ಫಾರಂ ಕುಟುಂಬಸ್ಥರ ಸಹಿ ಕಡ್ಡಾಯ

ಜೂನ್‌ 30 ರಿಂದ ಬಿಎಲ್‌ಒ ಪ್ರತಿ ಮತದಾರರಿಗೆ ಎರಡು ಎನ್ಯೂಮರೇಶನ್ ಫಾರಂ ನೀಡಲಿದ್ದಾರೆ. ಎರಡೂ ಫಾರಂ ಭರ್ತಿ ಮಾಡಿ ಒಂದು ಫಾರಂ ಅನ್ನು ಬಿಎಲ್‌ಒಗೆ ವಾಪಾಸ್ ನೀಡಬೇಕಾಗಿದೆ. ಈ ವೇಳೆ ಮತದಾರರ ಕುಟುಂಬದ ಯಾವುದೇ ಸದಸ್ಯರು ಸಹಿ ಮಾಡಬಹುದು. ಮತ್ತೊಂದು ಫಾರಂಗೆ ಬಿಎಲ್‌ಒ ಅವರಿಂದ ಸಹಿ ಪಡೆಯಬೇಕಿದೆ.

-- ಬಾಕ್ಸ್‌ --ಶೇ.93 ರಷ್ಟು ಮ್ಯಾಪಿಂಗ್‌ ಪೂರ್ಣಚಿಕ್ಕಮಗಳೂರು ಜಿಲ್ಲೆಯಲ್ಲಿ ಶುಕ್ರವಾರದ ವರೆಗೆ ಶೇ.93 ರಷ್ಟು ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ. ಜಿಲ್ಲೆ ಯಲ್ಲಿ 2026ರ ಮತದಾರ ಪಟ್ಟಿಯಲ್ಲಿ ಒಟ್ಟು 9,60,231 ಮತದಾರಿದ್ದು, ಈ ಪೈಕಿ 9,01,516 ಮತದಾರರ ಮ್ಯಾಪಿಂಗ್‌ ಪೂರ್ಣಗೊಂಡಿದೆ. ಶೇ.93.89 ರಷ್ಟು ಮ್ಯಾಪಿಂಗ್‌ ಆಗಿದೆ.--- ಬಾಕ್ಸ್‌---

ವಿಧಾನಸಭಾ ಕ್ಷೇತ್ರವಾರು ಮ್ಯಾಪಿಂಗ್‌ ವಿವರವಿಧಾನಸಭಾ ಕ್ಷೇತ್ರ2026ರ ಮತದಾರರ ಸಂಖ್ಯೆಮ್ಯಾಪಿಂಗ್‌ ಮತದಾರರ ಸಂಖ್ಯೆಶೇಕಡವಾರು ಮ್ಯಾಪಿಂಗ್‌ ಶೃಂಗೇರಿ1,67,1711,61,49696.61ಮೂಡಿಗೆರೆ1,67,2991,58,52794.76ಚಿಕ್ಕಮಗಳೂರು2,26,9341,98,60187.51ತರೀಕೆರೆ1,92,0871,83,96395.77ಕಡೂರು2,06,7401,98,92996.22ಒಟ್ಟು9,60,2319,01,51693.89-- ಕೋಟ್‌---

ಎಸ್‌ಐಆರ್‌ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶನಿವಾರದಿಂದ ಜೂನ್‌ 29ರ ವರೆಗೆ ಎನ್ಯೂಮರೇಶನ್ ಫಾರಂ ಮುದ್ರಣ, ತರಬೇತಿ ಸೇರಿದಂತೆ ಮೊದಲಾದ ಕಾರ್ಯ ಆಗಲಿದೆ. ಜೂನ್‌ 30 ರಿಂದ ಬಿಎಲ್‌ಒ ಮನೆ ಮನೆಗೆ ಭೇಟಿ ನೀಡಿ ಎನ್ಯೂಮರೇಶನ್ ಫಾರಂ ವಿತರಣೆ ಮಾಡಲಿದ್ದಾರೆ.

- ನಂಜುಂಡೇಗೌಡ, ಎಡಿಸಿ, ಚಿಕ್ಕಮಗಳೂರು