ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮುಂಬರುವ ವೈರಮುಡಿ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ಮಾಡಲಾಗುತ್ತಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋಧ್ಯಮ ಇಲಾಖಾ ಸಚಿವರೊಂದಿಗೆ ಸಭೆ ನಡೆಸಿ ಕಾರ್ಯಕ್ರಮಗಳನ್ನು ರೂಪಿಸಿ ವೈರಮುಡಿ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗುತ್ತದೆ ಎಂದರು.
ಅನ್ನದಾನವನ್ನು ನಿರಂತರವಾಗಿ ಮುಂದುವರೆಸಲು ಸಮಿತಿ ರಚನೆ ಮಾಡುವಂತೆ, ಅನ್ನದಾನ ನಿರ್ವಹಣೆಗಾಗಿ ಪ್ರತ್ಯೇಕ ಖಾತೆ ತೆರೆದು ದಾನಿಗಳಿಂದ ಬರುವ ಕಾಣಿಕೆಯನ್ನು ಸಮರ್ಪಕವಾಗಿ ಬಳಕೆ ಮಾಡಲು ದೇವಾಲಯದ ಆಡಳಿತಾಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.ನನ್ನ ಶ್ರೀಮತಿ ಧನಲಕ್ಷ್ಮಿಯವರು ವೈಯುಕ್ತಿಕ ಖಾತೆಯಿಂದ ಅನ್ನದಾನ ನಿರ್ವಹಣೆ ಖಾತೆಗೆ 1 ಲಕ್ಷ ರು. ದೇಣಿಗೆ ನೀಡಿದ್ದಾನೆ. ಅನ್ನದಾನ ನಿರ್ವಹಣೆಯಲ್ಲಿ ಯಾವುದೇ ಸಮಸ್ಯೆ ಎದುರಾದರೂ ಬಗೆಹರಿಸಲು ಸಿದ್ಧನಿದ್ದೇನೆ ಎಂದರು.
ಅನ್ನ ದಾಸೋಹ ಆರಂಭದ ಬಗ್ಗೆ ಅಧಿವೇಶನದಲ್ಲಿ ಶಾಸಕ ಮಧು ಚರ್ಚೆಮಂಡ್ಯ:
ಮೇಲುಕೋಟೆಯಲ್ಲಿ ಕೋಟ್ಯಂತರ ರು. ವೆಚ್ಚದಲ್ಲಿ ನಿರ್ಮಿಸಿರುವ ಅನ್ನದಾಸೋಹ ಭವನ ಉದ್ಘಾಟನೆಯಾಗಿದ್ದರೂ ಅನ್ನದಾಸೋಹ ಆರಂಭವಾಗಿಲ್ಲ. ಇದರಿಂದ ಭಕ್ತರಿಗೆ ಅನಾನುಕೂಲವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರು ಕಳೆದ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡಿದ್ದರು.ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮೇಲುಕೋಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಮೂಲ ಸೌಲಭ್ಯ, ವಸತಿ, ಅನ್ನದಾಸೋಹ ಆರಂಭ ಸೇರಿದಂತೆ ಅಗತ್ಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮುಜರಾಯಿ ಇಲಾಖೆ ಸಚಿವರಿಗೆ ಪ್ರಶ್ನೆ ಕೇಳಿದ್ದರು. ಈ ಬಗ್ಗೆ ಮುಜರಾಯಿ ಸಚಿವರು ಉತ್ತರಿಸಿ, ಡಿಸೆಂಬರ್ ತಿಂಗಳ ಅಂತ್ಯದೊಳಗೆ ಭಕ್ತರು, ಸಾರ್ವಜನಿಕರಿ ದಾಸೋಹ ಪ್ರಾರಂಭಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿರುವುದಾಗಿ ತಿಳಿಸಿದ್ದರು. ಅದರಂತೆ ಜನವರಿ 2ನೇ ವಾರದಲ್ಲಿ ಮೇಲುಕೋಟೆಯಲ್ಲಿ ಭಕ್ತರಿಗೆ ಅನ್ನದಾಸೋಹ ಆರಂಭವಾಗಿದೆ. ಮಧು ಜಿ.ಮಾದೇಗೌಡರು ಮಾಡಿದ್ದ ವಿಷಯದ ಚರ್ಚೆಗೆ ಗೌರವ ಸಿಕ್ಕಂತಾಗಿದೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))