ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಈಗಿನಿಂದಲೇ ಪರೀಕ್ಷೆಗೆ ಸಿದ್ಧಗೊಳಿಸಬೇಕು. ಸಮರ್ಥವಾಗಿ ಎದುರಿಸುವಂತೆ ಅಣಿಗೊಳಿಸಿ, ಜಿಲ್ಲೆಗೆ ಉತ್ತಮ ಸ್ಥಾನ ಸಿಗುವಂತೆ ಮಾಡಬೇಕು ಎಂದು ಸಾರ್ವಜನಿಕ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಅಜಿತ್ ಮನ್ನಿಕೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಾದಗಿ

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಈಗಿನಿಂದಲೇ ಪರೀಕ್ಷೆಗೆ ಸಿದ್ಧಗೊಳಿಸಬೇಕು. ಸಮರ್ಥವಾಗಿ ಎದುರಿಸುವಂತೆ ಅಣಿಗೊಳಿಸಿ, ಜಿಲ್ಲೆಗೆ ಉತ್ತಮ ಸ್ಥಾನ ಸಿಗುವಂತೆ ಮಾಡಬೇಕು ಎಂದು ಸಾರ್ವಜನಿಕ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಅಜಿತ್ ಮನ್ನಿಕೇರಿ ಹೇಳಿದರು.

ಗ್ರಾಮದ ದಿ.ಕರ್ನಾಟಕ ಪ್ರೌಢಶಾಲೆಗೆ ಶನಿವಾರ ಭೇಟಿ ನೀಡಿ, ಎಸ್ಸೆಸ್ಸೆಲ್ಸಿ ತರಗತಿ ಕೊಠಡಿಗೆ ತೆರಳಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದರು. ಸರಿಯಾದ ಮಾರ್ಗದರ್ಶನ, ಗುಣಮಟ್ಟದ ಶಿಕ್ಷಣ, ವಿವಿಧ ರೀತಿಯ ಬೋಧನಾ ಕೌಶಲ್ಯ ಬಳಸಿಕೊಂಡರೆ ಉತ್ತಮ ಫಲಿತಾಂಶ ಗಳಿಸಲು ಸಾಧ್ಯವಾಗುತ್ತದೆ. ಶಿಕ್ಷಕರು ಮಕ್ಕಳನ್ನು ನಾಡಿನ ಆಸ್ತಿಯನ್ನಾಗಿ ರೂಪಿಸಿ ತಮ್ಮ ಸ್ಥಾನದ ಘನತೆ, ಗೌರವ ಎತ್ತಿ ಹಿಡಿಯಬೇಕು ಎಂದು ಹೇಳಿದರು.

ಬೆಂಗಳೂರಿನ ನಗು ಫೌಂಡೇಶನ್ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪಾಠ ಆಧಾರಿತ ಪ್ರಶ್ನೋತ್ತರಗಳ ಮಾಲಿಕೆ ಪುಸ್ತಕ ವಿತರಿಸಿದರು. ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಬಿ. ಸೌದಾಗರ ಶಾಲಾ ವತಿಯಿಂದ ಡಿಡಿಪಿಐ ಅವರನ್ನು ಸನ್ಮಾನಿಸಿದರು.

ಸಾರ್ವಜನಿಕ ಸಾಕ್ಷರತೆ ಇಲಾಖೆಯ ವಿಷಯ ಪರಿವೀಕ್ಷಕ ಎಸ್.ಎ. ಹಾಲವರ, ಶಿಕ್ಷಣ ಸಲಹಾ ಸಮಿತಿಯ ಸದಸ್ಯ ರಿಯಾಜ್ ಪೀರಜಾದೆ, ಇಬ್ರಾಹಿಂ ಸೋಲ್ಜರ್, ಶಾಲಾ ಮುಖ್ಯಶಿಕ್ಷಕರಾದ ಎಸ್.ಜಿ. ಖಾದಿಮ್, ಎಂ.ಎಂ. ಮುದ್ದಾಪುರ ಹಾಗೂ ಶಿಕ್ಷಕಿಯರು ಇದ್ದರು.