ಅಹಿಂದ ಮುಖಂಡರಿಂದ ಹೋರಾಟಕ್ಕೆ ಸಜ್ಜು

| Published : Aug 05 2024, 12:36 AM IST

ಸಾರಾಂಶ

ವಿಜಯಪುರ: ನಿಷ್ಕಳಂಕ ಸಿದ್ಧರಾಮಯ್ಯನವರಿಗೆ ಮಸಿ ಬಳೆಯಲು ವ್ಯರ್ಥ ಪ್ರಯತ್ನ ಮಾಡುತ್ತಿರುವ ಬಿಜೆಪಿ ಹಾಗೂ ಜೆಡಿಎಸ್‌ ವಿರುದ್ಧ ಹೋರಾಟ ನಡೆಸಲು ನಗರದಲ್ಲಿ ಜಿಲ್ಲಾ ಅಹಿಂದ ವರ್ಗಗಳ ಮುಖಂಡರು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿಯ ಮೇಲೆ ಬಿಜೆಪಿ ಹೊರೆಸುತ್ತಿರುವ ಮುಡಾ ಹಗರಣ ಆರೋಪವನ್ನು ಖಂಡಿಸಿ ಆ.6ರಂದು ಬೃಹತ್ ಪ್ರತಿಭಟನೆ ರ‍್ಯಾಲಿಯನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು ಜಿಲ್ಲೆಯ ಅಹಿಂದ ಮುಖಂಡರು ಒಮ್ಮತದ ತೀರ್ಮಾನ ಮಾಡಲಾಯಿತು.

ಸಭೆಯಲ್ಲಿ ಮುಖಂಡರಾದ ಅಬ್ದುಲರಜಾಕ ಹೊರ್ತಿ, ಎಂ.ಸಿ.ಮುಲ್ಲಾ, ಸೋಮನಾಥ ಕಳ್ಳಿಮನಿ, ನಾಗರಾಜು ಲಂಬು, ಗಜಾನಂದ ಚೌಧರಿ, ಮಲ್ಲು ಬಿದರಿ, ಸತೀಶ ಅಡವಿ, ಅಡಿವೆಪ್ಪ ಸಾಲಗಲ್, ಬಿ.ಎಸ್.ಗಸ್ತಿ, ಜಕ್ಕಪ್ಪ ಯಡವೆ, ಪ್ರಭುಗೌಡ ಪಾಟೀಲ, ಮಹಾದೇವ ರೇವಜಿ, ಫಯಾಜ ಕಲಾದಗಿ, ಸಂಜು ಕಂಬಾಗಿ, ಎಂ.ಎಸ್.ನಾಯಕ, ಮಲ್ಲು ಕಾಮನಕೇರಿ, ರಾಜು ಕಗ್ಗೋಡ, ಮಾಳಪ್ಪ ಗುಗದಡ್ಡಿ, ಮೋಹನ ದಳವಾಯಿ, ರವಿ ಕಿತ್ತೂರ ಮುಂತಾದವರು ಪಾಲ್ಗೊಂಡಿದ್ದರು.