ರಂಗಭೂಮಿ ಕಲೆ ಉಳಿಸಿ ಬೆಳೆಸಿ

| Published : May 31 2024, 02:15 AM IST

ಸಾರಾಂಶ

ಊರಿನಲ್ಲಿರುವ ಜಾತ್ರೆ, ಹಬ್ಬಗಳಲ್ಲಿ ವರ್ಷಕ್ಕೊಮ್ಮೆ ಗ್ರಾಮದಲ್ಲಿನ ಕಲಾಸಕ್ತರು ತಮ್ಮಲ್ಲಿರುವ ರಂಗ ಪ್ರತಿಭೆ ತೋರ್ಪಡಿಸುವ ಕಲಾ ಪ್ರತಿಭೆಗಳ ಒಂದಡೆಯಾದರೇ, ಬದುಕಿನೂದ್ದಕ್ಕೂ ರಂಗಭೂಮಿಯನ್ನೆ ಆಸರೆಯಾಗಿಸಿಕೊಂಡು ಬದುಕುವ. ಅದೆಷ್ಟೋ ವೃತ್ತಿ ರಂಗಭೂಮಿ ಕಲಾವಿದರು ನಮ್ಮ ಮಧ್ಯ ಇದ್ದಾರೆ.

ರೋಣ: ರಂಗಭೂಮಿ ಕಲೆ ನವರಸಗಳ ಆಗರ, ಗಟ್ಟಿತನದಿಂದ ಕೂಡಿದ ನೈಜ ಕಲೆಯಾಗಿದ್ದು, ಈ ಕಲೆ ಉಳಿಸಿ ಬೆಳೆಸುವಲ್ಲಿ ರಂಗಕಲೆ ಮತ್ತು ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ಸಿಗುವಂತಾಗಬೇಕು ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ, ಬಿಜೆಪಿ ಎಸ್.ಟಿ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಬಸವಂತಪ್ಪ ತಳವಾರ ಹೇಳಿದರು.

ಅವರು ತಾಲೂಕಿನ ಮುದೇನಗುಡಿ ಗ್ರಾಮದ ಬಸವೇಶ್ವರ ದೇವಸ್ಥಾನದ ಬಯಲು ಜಾಗೆಯಲ್ಲಿ ಬಸವೇಶ್ವರ ತರುಣ ನಾಟ್ಯ ಸಂಘ ಆಶ್ರಯದಲ್ಲಿ ಜರುಗಿದ ಉತ್ತಮರ ಮನೆತನ ಸಾಮಾಜಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ರಂಗಭೂಮಿ ಕಲೆಯು ಅತ್ಯಂತ ಪುರಾತನ ಕಾಲದ್ದಾಗಿದೆ. ಕಲಾವಿದನಲ್ಲಿನ ಕಲಾತ್ಮಕತೆ ಅರಳುವಲ್ಲಿ ರಂಗ ಸಜ್ಜಿಕೆ ಉತ್ತಮ ವೇದಿಕೆಯಾಗಿದೆ. ಆದರೆ ಇಂದಿನ ದಿನಗಳಲ್ಲಿ ರಂಗ ಕಲೆ ಮತ್ತು ಕಲಾವಿದರಿಗೆ ಸರಿಯಾದ ಉತ್ತೇಜನ ಸಿಗುತ್ತಿಲ್ಲ. ಹವ್ಯಾಸ ರಂಗಭೂಮಿ ಮತ್ತು ವೃತ್ತಿ ರಂಗಭೂಮಿಗಳಿದ್ದು, ಊರಿನಲ್ಲಿರುವ ಜಾತ್ರೆ, ಹಬ್ಬಗಳಲ್ಲಿ ವರ್ಷಕ್ಕೊಮ್ಮೆ ಗ್ರಾಮದಲ್ಲಿನ ಕಲಾಸಕ್ತರು ತಮ್ಮಲ್ಲಿರುವ ರಂಗ ಪ್ರತಿಭೆ ತೋರ್ಪಡಿಸುವ ಕಲಾ ಪ್ರತಿಭೆಗಳ ಒಂದಡೆಯಾದರೇ, ಬದುಕಿನೂದ್ದಕ್ಕೂ ರಂಗಭೂಮಿಯನ್ನೆ ಆಸರೆಯಾಗಿಸಿಕೊಂಡು ಬದುಕುವ. ಅದೆಷ್ಟೋ ವೃತ್ತಿ ರಂಗಭೂಮಿ ಕಲಾವಿದರು ನಮ್ಮ ಮಧ್ಯ ಇದ್ದಾರೆ.‌ ಅದರಲ್ಲೂ ಗ್ರಾಮೀಣ ಪ್ರದೇಶದ ಹವ್ಯಾಸಿ ಕಲಾವಿದರು ವೃತ್ತಿ ರಂಗಭೂಮಿ ಕಲಾವಿದರನ್ನು ಮೀರಿಸುವಂತೆ ಮನೋಜ್ಞವಾಗಿ ಕಲಾ ಪ್ರತಿಭೆ ಅಭಿವ್ಯಕ್ತಗೊಳಿಸುತ್ತಾರೆ ಎಂದರು.

ಇತ್ತೀಚಿನ ದಿನಗಳಲ್ಲಿ ಸಿನೇಮಾ, ಟಿವಿ, ಮೋಬೈಲ್ ಅಬ್ಬರದಿಂದ ವೃತ್ತಿ ರಂಗಭೂಮಿ ಕಲಾವಿದರ ಬದುಕು ದುಸ್ಥರವಾಗಿದೆ. ಹವ್ಯಾಸಿ ಕಲಾವಿದರೂ ಮರೆಯಾಗುತ್ತಿದ್ದಾರೆ. ರಂಗಭೂಮಿಗೆ ಸಮರ್ಪಕ ಪ್ರೋತ್ಸಾಹ ಸಿಗದಿದ್ದರಿಂದ ಬೆಳವಣಿಗೆ ಹೊಂದದೆ ಅವನತಿ ಹಾದಿ ಹಿಡಿದಿದ್ದು ನೋವಿನ ಸಂಗತಿಯಾಗಿದೆ. ಆದ್ದರಿಂದ ರಂಗಭೂಮಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುವಂತಾಗಬೇಕು. ಮರೆಯಾಗುತ್ತಿರುವ ರಂಗ ಕಲಾವಿದರಿಗೆ ಮತ್ತು ಕಲೆ ಉಳಿಯಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಶಂಕ್ರಯ್ಯ ಹಿರೇಮಠ ಮಾತನಾಡಿ, ಹಾಸ್ಯ, ಭಯಾನಕ, ಬಿಭತ್ಸು, ಕರುಣೆ, ರೌದ್ರ, ವಿಡಂಭನೆ, ಆಶ್ಚರ್ಯ ಹೀಗೇ ನವರಸಗಳನ್ನು ತನ್ನಲ್ಲಿನ ಕಲಾತ್ಮಕ ನಟನೆ, ಅಭಿನಯದ ಮೂಲಕ ಅಭಿವ್ಯಕ್ತ ಪಡಿಸಿ, ಜನತೆಗೆ ಮನರಂಜನೆ ನೀಡುವದರ ಜತೆಗೆ, ಉತ್ತಮ ಸಂದೇಶ ಮತ್ತು ಸುಂದರ ಸಮಾಜ ಪರಿವರ್ತನೆಯಲ್ಲಿ ರಂಗಭೂಮಿ ಕೊಡುಗೆ ಅಪಾರ ಎಂದರು.

ಅಧ್ಯಕ್ಷತೆಯನ್ನು ಶ್ರೀಶೈಲಪ್ಪ ಹಡಗಲಿ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಾಂತಯ್ಯ ಮಸಗಿಮಠ, ಗ್ರಾಪಂ ಮಾಜಿ ಅಧ್ಯಕ್ಷ ಬಸನಗೌಡ ಕ್ಯಾತನಗೌಡ್ರ, ಬಿ.ಎಲ್. ಕ್ಯಾತನಗೌಡರ, ಹೇಮಂತಗೌಡ ಕ್ಯಾತನಗೌಡ್ರ, ಬಸವರಾಜ ವಡ್ಡಟ್ಟಿ, ಉಮೇಶ ಪಾಟೀಲ, ರಾಜು ವಡ್ಡಟ್ಟಿ, ಬಸವ್ವ ಹಿರೇಗೌಡ್ರ, ಶ.ಫಕ್ಕೀರವ್ವ ಹುಬ್ಬಳ್ಳಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.