ಸಾರಾಂಶ
ಬೆಂಗಳೂರು ನಗರ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಎಚ್. ಜಯರಾಜ್ ಅವರಿಗೆ ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪದಕ ನೀಡಿ ಗೌರವಿಸಿದೆ.
ದಾವಣಗೆರೆ: ಬೆಂಗಳೂರು ನಗರ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಎಚ್. ಜಯರಾಜ್ ಅವರಿಗೆ ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪದಕ ನೀಡಿ ಗೌರವಿಸಿದೆ. ತಾಲೂಕಿನ ಆಲೂರುಹಟ್ಟಿ ಗ್ರಾಮದ ನಿವಾಸಿ ದಿ।। ಸಕ್ರೀಬಾಯಿ, ಹೇಮನಾಯ್ಕ ದಂಪತಿ ಪುತ್ರರಾದ ಜಯರಾಜ್ ಚನ್ನಗಿರಿ ತಾ. ತ್ಯಾವಣಿಗೆ ತಾಂಡದ ಮಿಯಾಪುರದಲ್ಲಿ ಹುಟ್ಟಿ, ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಪಡೆದು, ನಂತರ ದಾವಣಗೆರೆ ನಗರದ ಎಂ.ಎಸ್.ಬಿ. ಕಾಲೇಜಿನಲ್ಲಿ ಬಿ.ಎ ಪದವಿ ಹಾಗೂ ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ. ಪದವಿ ಪಡೆದಿದ್ದರು. ಪ್ರಸ್ತುತ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಈ ವರ್ಷದ 2025 ಸಾಲಿನ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಪಡೆದಿದ್ದಾರೆ.
- - - -28ಕೆಡಿವಿಜಿ39: ಎಚ್.ಜಯರಾಜ್