ಟ್ಯೂಷನ್ ಮತ್ತು ಮೊಬೈಲ್‌ನಿಂದಾಗಿ ಮಕ್ಕಳು ಬಾಲ್ಯದ ಆನಂದದಿಂದ ವಂಚಿತರಾಗುತ್ತಿದ್ದು, ಪಾಲಕರು ಮಕ್ಕಳನ್ನು ಮಾನಸಿಕ ಒತ್ತಡದಿಂದ ಮುಕ್ತಗೊಳಿಸಬೇಕು

ಗದಗ: ಕನ್ನಡ ಭಾಷೆಗೆ ದೀರ್ಘ ಇತಿಹಾಸವಿದೆ. ಬಸವಾದಿ ಶರಣರು 12ನೇ ಶತಮಾನದಲ್ಲಿ ಜನರಾಡುವ ಭಾಷೆಯಲ್ಲಿ ವಚನಗಳನ್ನು ರಚಿಸಿ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡಿಗರು ಭಾಷೆಯ ಬಗ್ಗೆ ಅಭಿಮಾನ ತಾಳಿ, ಉಳಿಸಿ ಬೆಳೆಸಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಡೋಜ ಅನ್ನದಾನೀಶ್ವರ ಶಿವಯೋಗಿಗಳು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಪಂ. ಬಸವರಾಜಶಾಸ್ತ್ರಿಗಳು ಮ. ಕೋಡಿಕೊಪ್ಪಮಠ ಹಾಗೂ ಅನ್ನಪೂರ್ಣಾದೇವಿ, ಸಿದ್ಧಲಿಂಗಯ್ಯ ವಸ್ತ್ರದ ದಂಪತಿ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಟ್ಯೂಷನ್ ಮತ್ತು ಮೊಬೈಲ್‌ನಿಂದಾಗಿ ಮಕ್ಕಳು ಬಾಲ್ಯದ ಆನಂದದಿಂದ ವಂಚಿತರಾಗುತ್ತಿದ್ದು, ಪಾಲಕರು ಮಕ್ಕಳನ್ನು ಮಾನಸಿಕ ಒತ್ತಡದಿಂದ ಮುಕ್ತಗೊಳಿಸಬೇಕು ಎಂದರು.

ಮನೋರೋಗ ತಜ್ಞ ಡಾ. ಜಿತೇಂದ್ರ ಮುಗಳಿ ಮಕ್ಕಳ ಮಾನಸಿಕ ಸಮಸ್ಯೆಗಳ ನಿರ್ವಹಣೆ ಕುರಿತು ಉಪನ್ಯಾಸ ನೀಡಿ, ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ದತ್ತಿದಾನಿಗಳ ಕುರಿತು ಡಾ. ರಾಜೇಂದ್ರ ಗಡಾದ ಮಾತನಾಡಿದರು.

ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಂಡಪ್ಪ ಲಮಾಣಿ, ರಾಷ್ಟ್ರಮಟ್ಟದ ವಿಜ್ಞಾನ ಪ್ರದರ್ಶನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ದಾವಲಸಾಬ ಒಂಟಿ, ಆಕಾಶ ಪಾಟೀಲ ಹಾಗೂ ಮಾರ್ಗದರ್ಶಿ ಶಿಕ್ಷಕ ಮಂಜುನಾಥ ಹುಯಿಲಗೋಳ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪ್ರೊ. ಚಂದ್ರಶೇಖರ ವಸ್ತ್ರದ, ಪ್ರವೀಣ ಯಳಮಲಿ ಉಪಸ್ಥಿತರಿದ್ದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು, ಬಸವರಾಜ ನೆಲಜೇರಿ ಕಾರ್ಯಕ್ರಮ ನಿರೂಪಿಸಿದರು, ಡಿ.ಎಸ್. ಬಾಪುರಿ ವಂದಿಸಿದರು.

ಕಾರ್ಯಕ್ರಮದಲ್ಲಿ ಜಗದೀಶ ಕೋಡಿಕೊಪ್ಪಮಠ, ಯು.ವಿ. ಪುರದ, ಕ್ಷಮಾ ವಸ್ತ್ರದ, ಚಿನ್ನಮ್ಮ ವಸ್ತ್ರದ, ಕೆ.ಎಚ್. ಬೇಲೂರ, ಜಿ.ಬಿ. ಪಾಟೀಲ, ಮಂಜುಳಾ ವೆಂಕಟೇಶಯ್ಯ, ಅನಸೂಯಾ ಮಿಟ್ಟಿ, ಉಮಾ ಕಣವಿ, ಶೈಲಜಾ ಗಿಡ್ನಂದಿ, ಬಸವರಾಜ ಗಿರಿತಿಮ್ಮಣ್ಣವರ, ಸಿ.ಕೆ.ಎಚ್. ಕಡಣಿ ಶಾಸ್ತ್ರಿ, ಸೋಮು ಲಮಾಣಿ, ಬಿ.ಎಲ್. ಚವ್ಹಾಣ, ಸುರೇಶ ಕುಂಬಾರ, ಅಶೋಕ ಸತ್ಯರಡ್ಡಿ, ಎಂ.ಎಫ್. ಡೋಣಿ, ಜಯನಗೌಡ ಪಾಟೀಲ, ರಾಹುಲ ಗಿಡ್ನಂದಿ, ಸತೀಶಕುಮಾರ ಚನ್ನಪ್ಪಗೌಡರ, ಎಸ್.ಎ. ಮತ್ತೂರ, ನೀಲಮ್ಮ ಅಂಗಡಿ, ರಾಜೇಶ್ವರಿ ಬಡ್ನಿ, ರವಿ ದೇವರಡ್ಡಿ, ಸಾಕ್ಷಿ ದೇವರಡ್ಡಿ, ವಿ.ಎಸ್. ದಿಂಡೂರ, ಅಶೋಕ ಅಂಗಡಿ, ತನ್ಮಯ, ಯಲ್ಲಪ್ಪ ಹಂದಾಳ, ಎಂ.ಎಸ್. ಹಾಲಶೆಟ್ಟಿ, ರೇಣಕವ್ವ ವರವಿ, ಸತೀಶ ಕುಲಕರ್ಣಿ, ಎಸ್.ವಿ. ಸಂಕನೂರ, ಕೆ.ಎಸ್. ಜಯದೇವಭಟ್, ಆರ್.ಡಿ. ಜೋಶಿ, ಅಮರೇಶ ರಾಂಪುರ, ಅರುಣ ರಾಜಪುರೋಹಿತ, ಕಿರಣ ಗುಗ್ಗರಿ, ಬಿ.ಎಸ್. ಬಣಕಾರ, ಸುಮನ ಪಾಟೀಲ, ರಮ್ಯಾ ಪೂಜಾರ, ಎಂ.ಕೆ. ಹುಯಿಲಗೋಳ, ಪಿ.ವಿ. ಇನಾಮದಾರ ಉಪಸ್ಥಿತರಿದ್ದರು.

ಮನೆ, ಶಾಲೆ ಮತ್ತು ಸಮುದಾಯದಲ್ಲಿ ಮಕ್ಕಳು ಎದುರಿಸುವ ಮಾನಸಿಕ ಸಮಸ್ಯೆಗಳ ನಿರ್ವಹಣೆ ಕುರಿತು ಪೋಷಕರಿಗೆ ಶಿಕ್ಷಣ ಅಗತ್ಯವಿದೆ. ಮಕ್ಕಳನ್ನು ಮನೋರೋಗ ತಜ್ಞರ ಬಳಿ ಕರೆದೊಯ್ಯುವಲ್ಲಿ ಇರುವ ಅಪರಾಧಿ ಪ್ರಜ್ಞೆಯಿಂದ ಪಾಲಕರು ಹೊರಬರಲು ಸಮುದಾಯದಲ್ಲಿ ಜಾಗೃತಿ ಮೂಡಬೇಕು ಎಂದು ಮನೋರೋಗ ತಜ್ಞ ಡಾ. ಜಿತೇಂದ್ರ ಮುಗಳಿ ತಿಳಿಸಿದ್ದಾರೆ.