ಸಾರಾಂಶ
ನರಗುಂದ: ಶಿಕ್ಷಣ ಬದುಕನ್ನು ಧನಾತ್ಮಕವಾಗಿ ಬದಲಾಯಿಸಲು ಮುಖ್ಯ ಅಸ್ತ್ರವಾಗಿದೆ. ಅದರಲ್ಲೂ ಪ್ರಾಥಮಿಕ ಶಿಕ್ಷಣ ಸಾಧನೆಗೆ ಬುನಾದಿಯಾಗಿದೆ ಎಂದು ಹಿರೇಕೆರೂರ ಎಎಸ್ಐ, ಶಾಲೆಯ ಹಳೆಯ ವಿದ್ಯಾರ್ಥಿನಿ ರೇಣುಕಾ ಅಸೂಟಿ ಹೇಳಿದರು.
ಅವರು ತಾಲೂಕಿನ ಸಮೀಪದ ಯಾವಗಲ್ ಗ್ರಾಮದಲ್ಲಿ ನಡೆದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಪ್ರಾಥಮಿಕ ಶಾಲೆಯಲ್ಲಿ ಪಾಲಕರು, ಶಿಕ್ಷಕರು ನೀಡಿದ ಸಂಸ್ಕಾರ, ಶಿಕ್ಷಣ, ಕಲಿಕೆಯ ಕ್ರಮಗಳು ಗುರಿ ಮುಟ್ಟಲು ಸಾಧ್ಯ. ನಮಗೆ ಬಾಲ್ಯದಲ್ಲಿ ಶಿಕ್ಷಕರು ನೀಡಿದ ಶಿಕ್ಷಣ, ಶಿಕ್ಷೆ ನಮ್ಮನ್ನು ಈ ಹಂತಕ್ಕೆ ತಲುಪಿಸಿದೆ. ಅಂದುಕೊಂಡ ಗುರಿ ಸಾಧಿಸಲು ಸಾಧ್ಯವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಮಕ್ಕಳು ವೇಗವಾಗಿ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಅದನ್ನು ಪುಸ್ತಕ ಹಾಗೂ ಓದಿನ ಕಡೆಗೆ ತಿರುಗಿಸಿ ಉಜ್ವಲ ಭವಿಷ್ಯಕ್ಕೆ ಎಲ್ಲರೂ ದಿಕ್ಸೂಚಿಯಾಗಬೇಕು ಎಂದು ಕರೆ ನೀಡಿದರು.
ನರಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಯಾವಗಲ್ಲ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಗುರ್ತಿಸುವ ಕೆಲಸ ನಡೆಯಬೇಕು. ಅವರ ಪ್ರತಿಭಾ ಪ್ರದರ್ಶನಕ್ಕೆ ಸ್ನೇಹ ಸಮ್ಮೇಳನ ಸಮಾರಂಭ ಉತ್ತಮ ವೇದಿಕೆಯಾಗಿದೆ.ಪ್ರಾಥಮಿಕ ಹಂತದಲ್ಲಿ ಗುಣಾತ್ಮಕ ಶಿಕ್ಷಣ ಹೊಂದಲು ಪಾಲಕರು ಶಿಕ್ಷಕರೊಂದಿಗೆ ಕೈ ಜೋಡಿಸಬೇಕು ಎಂದರು.ಸಾನ್ನಿಧ್ಯ ವಹಿಸಿದ್ದ ಸಿದ್ದಯ್ಯ ಹಿರೇಮಠ ಮಾತನಾಡಿ, ಯಾವಗಲ್ಲ ಗ್ರಾಮ ಎಲ್ಲ ಕ್ಷೇತ್ರದಲ್ಲಿ ಸಾಧಕರನ್ನು ಹೊಂದಿದೆ. ಆದರೆ ಐಎಎಸ್ ಅಧಿಕಾರಿಗಳು ಇಲ್ಲಿಂದ ಹೋಗಬೇಕಿದೆ. ಆದ್ದರಿಂದ ವಿದ್ಯಾರ್ಥಿಗಳು ಐಎಎಸ್‌ನಂತಹ ಉನ್ನತ ಪರೀಕ್ಷೆ ಪಾಸಾಗಿ ಜಿಲ್ಲಾಧಿಕಾರಿಯಾಗಬೇಕು ಎಂದರು.
1ರಿಂದ 7ನೇ ತರಗತಿಯಲ್ಲಿ ಶಾಲೆಗೆ ಪ್ರಥಮ ಬಂದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಗ್ರಾಪಂ ಅಧ್ಯಕ್ಷೆ ಶಂಶಾದ್ ಬೇಗಂ ಬಾಬಾನಗರ, ಗಂಗಾಧರ ಘಾಳಿ, ಬಸವರಾಜ ನರಸಣ್ಣವರ, ಬಿ.ಎಸ್.ಕಾರಡ್ಡಿ, ಸದಸ್ಯರಾದ ಎನ್.ವೈ.ಹಿರೇಕೊಪ್ಪ, ಕೆಂಚಪ್ಪ ಮಾದರ, ಲಲಿತಾ ರೋಣದ, ಎಸ್‌ಡಿಎಂಸಿ ಅಧ್ಯಕ್ಷ ನಾಗನಗೌಡ ಪಾಟೀಲ, ಚಂಬಣ್ಣ ಘಾಳಿ, ಮುತ್ತನಗೌಡ ಪಾಟೀಲ, ಡಾ. ಬಸವರಾಜ ಹಲಕುರ್ಕಿ, ಬಸಪ್ಪ ಅಗಸಿಮನಿ, ಮಲ್ಲಪ್ಪ ಗಾಣಿಗೇರ, ಕಡದಳ್ಳಿ, ಎಸ್‌ಡಿಎಂಸಿ ಸದಸ್ಯರು, ಮುಖ್ಯ ಶಿಕ್ಷಕ ಸಿ.ವಿ. ಜವಳಿ ಇದ್ದರು. ಎನ್.ಎಂ. ಬೆಳಕೊಪ್ಪದ ಸ್ವಾಗತಿಸಿದರು. ಶಿಕ್ಷಕ ಎಚ್.ಎಂ. ಕುರಿ ನಿರೂಪಿಸಿದರು. ಶಿಕ್ಷಕ ಎಸ್.ಬಿ. ಬ್ಯಾಟಿ ವಂದಿಸಿದರು.