ಆದಿಚುಂಚನಗಿರಿ ಮಹಾ ಸಂಸ್ಥಾನ ಮಠಕ್ಕೆ ಭೇಟಿ ಹಿನ್ನೆಲೆಯಲ್ಲಿ ಏ.15ರಂದು ಶಿಷ್ಟಾಚಾರದಂತೆ ಅಧಿಕಾರಿಗಳಿಗೆ ವಹಿಸಿರುವ ಕೆಲಸವನ್ನು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಣೆ ಮಾಡಬೇಕು. ಪ್ರಧಾನಿಗಳಿಗೆ ಹಾಗೂ ಅವರ ಭದ್ರತಾ ಸಿಬ್ಬಂದಿ ಆಗಮಿಸಲು 3 ಹೆಲಿಪ್ಯಾಡ್ ನಿರ್ಮಿಸಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠಕ್ಕೆ ಭೇಟಿ ಹಿನ್ನೆಲೆಯಲ್ಲಿ ಏ.15ರಂದು ಶಿಷ್ಟಾಚಾರದಂತೆ ಅಧಿಕಾರಿಗಳಿಗೆ ವಹಿಸಿರುವ ಕೆಲಸವನ್ನು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭದ್ರತೆ, ಶಿಷ್ಟಾಚಾರ ಮತ್ತು ಸಾರ್ವಜನಿಕ ವ್ಯವಸ್ಥೆಗಳ ಕುರಿತ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಠದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಗುರು ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಮಂದಿರದ (ಗದ್ದುಗೆ) ಲೋಕಾರ್ಪಣೆ ಮತ್ತು ವಿಗ್ರಹ ಪ್ರಾಣ ಪ್ರತಿಷ್ಠಾಪನೆಯನ್ನು ಪ್ರಧಾನಿ ನೆರವೇರಿಸಲಿದ್ದಾರೆ. ನಂತರ ಬಿಜಿಎಸ್ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.
ಪ್ರಧಾನಿಗಳಿಗೆ ಹಾಗೂ ಅವರ ಭದ್ರತಾ ಸಿಬ್ಬಂದಿ ಆಗಮಿಸಲು 3 ಹೆಲಿಪ್ಯಾಡ್ ನಿರ್ಮಿಸಬೇಕು. ಹೆಲಿಪ್ಯಾಡ್‌ನ ಪಕ್ಕದಲ್ಲಿ ಗ್ರೀನ್ ಹೌಸ್ ನಿರ್ಮಾಣ, ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವುದು, ಸೂಕ್ತ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಅಗತ್ಯ ಕ್ರಮವಹಿಸಬೇಕು ಎಂದರು.ಕಾರ್ಯಕ್ರಮ ಸ್ಧಳದಲ್ಲಿ ಹಾಗೂ ಗ್ರೀನ್ ರೂಂನಲ್ಲಿ ಬಿಎಸ್ಎನ್ಎಲ್‌ನಿಂದ ಅಗತ್ಯ ಇಂಟರ್ ನೆಟ್ ಹಾಗೂ ಟೆಲಿಫೋನ್ ಸಂಪರ್ಕ ನೀಡಲು ಅಗತ್ಯ ಕ್ರಮ ವಹಿಸಬೇಕು. ಪ್ರಧಾನಿಗಳ ಜೊತೆ ಆಗಮಿಸುವ ಅಧಿಕಾರಿಗಳ ಲಗೇಜ್ ನಿರ್ವಹಣೆ 5 ಜನರನ್ನು ನೇಮಿಸಿ, ಹೆಲಿಪ್ಯಾಡ್‌ನಿಂದ ಪ್ರಧಾನಿ ಕಾರ್ಯಕ್ರಮಕ್ಕೆ ಬರುವ ಹಾದಿಯನ್ನು ಸ್ವಚ್ಛವಾಗಿ ನಿರ್ವಹಣೆ ಮಾಡಬೇಕು ಎಂದರು.
ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್ ಹೆಲಿಪ್ಯಾಡ್ ಹತ್ತಿರ ಹಾಗೂ ಕಾರ್ಯಕ್ರಮದ ಹತ್ತಿರ ಇದ್ದು ಅಗತ್ಯ ಕ್ರಮ ವಹಿಸಬೇಕು ಎಂದರು.ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಎಸ್ಪಿ ಡಾ.ವಿ.ಜೆ.ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಏ.೧೩ರಂದು ಮಂಡ್ಯಕ್ಕೆ ಅದ್ವೈತ ಜಾಗೃತಿ ಜ್ಯೋತಿ ರಥಯಾತ್ರೆಕನ್ನಡಪ್ರಭ ವಾರ್ತೆ ಮಂಡ್ಯಸಹೇಲಿ ಸಂಸ್ಥೆಯ ಅಂಗ ಸಂಸ್ಥೆ ಪಾರಮಾರ್ಥ ಅದ್ವೈತ ಆಧ್ಯಾತ್ಮ ಸಿದ್ದಿ ಪೀಠದ ವತಿಯಿಂದ ಸಹೇಲಿ ಸಂಸ್ಥೆಯು ೩೦ ವರ್ಷ ಪೂರೈಸಿದ ಹಿನ್ನೆಲೆ ಅದ್ವೈತ ಜಾಗೃತಿ ಜ್ಯೋತಿ ರಥಯಾತ್ರೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಏ.೧೩ರಂದು ಹಮ್ಮಿಕೊಳ್ಳಲಾಗಿದೆ ಎಂದು ಪೀಠದ ಸ್ಥಾಪಕ ಅಧ್ಯಕ್ಷೆ ಕಿರಣ್ ತಿಳಿಸಿದರು.
ಅಂದು ಬೆಳಗ್ಗೆ ೮ ಗಂಟೆಗೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅದ್ವೈತ ಜಾಗೃತಿ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಾಗುವುದು. ಮಧ್ಯಾಹ್ನ ೩ ಗಂಟೆಗೆ ಮಂಡ್ಯ ನಗರ ತಲುಪಲಿದೆ. ಸಂಜೆ. ೬.೩೦ಕ್ಕೆ ನಗರದ ಕಲಾಮಂದಿರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.ಕಾರ್ಯಕ್ರಮದಲ್ಲಿ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿಯ ನಿರ್ದೇಶಕ ಡಾ.ಭಾನುಪ್ರಕಾಶ್ ಶರ್ಮಗೆ ಅದ್ವೈತ ಶಾಂತಿ ಮತ್ತು ಸೌಹಾರ್ದ ಪ್ರಶಸ್ತಿ, ಮಾಜಿ ಸಂಸದ ದಿವಂಗತ ಜಿ.ಮಾದೇಗೌಡ ಅವರ ಪರವಾಗಿ ಮಧು ಜಿ.ಮಾದೇಗೌರಿಗೆ ವಾರ್ಷಿಕ ವ್ಯಕ್ತಿ ಪ್ರಶಸ್ತಿ, ಪರಿಸರ ಮತ್ತು ಸಮಾಜ ಸೇವಕಿ ಡಾ.ಪದ್ಮ ಮೋಹನ್ಗೆ ಸಾಧಕ ರತ್ನ ಪ್ರಶಸ್ತಿ, ಕಲಾವಿದ ಕೆ.ಎಂ.ಕೃಷ್ಣೇಗೌಡ ಕೀಲಾರ ಅವರಿಗೆ ಕಲೆ ಮತ್ತು ಸಾಂಸ್ಕೃತಿಕ ಸೇವಾ ಪ್ರಶಸ್ತಿ, ಕನ್ನಿಕಾ ಶಿಲ್ಪ ನವೋದಯ ಎಜುಕೇಶನ್ ಟ್ರಸ್ಟ್‌ನ ಎಚ್.ಆರ್.ಕನ್ನಿಕ ಅವರಿಗೆ ವಾರ್ಷಿಕ ಮಹಿಳಾ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ವಿಶ್ವ ಧರ್ಮ ಪೀಠದ ಜಯ ಬಸವಾನಂದ ಸ್ವಾಮೀಜಿ, ರಾಮಕೃಷ್ಣ ಮಠದ ಬುದ್ದಿ ಯೋಗಾನಂದ ಸ್ವಾಮೀಜಿ, ಹಿಮಾಲಯದ ಮಹಾಕಾಲ ಸಚ್ಚಿದಾನಂದ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಶಾಸಕರಾದ ಪಿ.ರವಿಕುಮಾರ್ ಗೌಡ, ಕೆ.ಎಂ.ಉದಯ್, ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಸತ್ಯಾನಂದ ಭಾಗವಹಿಸುವರು ಎಂದು ವಿವರಿಸಿದರು.ಅದ್ವೈತ ಜಾಗೃತಿ ಜ್ಯೋತಿ ರಥಯಾತ್ರೆಯು ಏ.೧೪ರಂದು ಬೆಳಗ್ಗೆ ಬೆಂಗಳೂರು ಕಡೆಗೆ ಪಯಣ ಬೆಳೆಸಲಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ರುದ್ರೇಶ್, ಭರತ್, ಗಂಗಾಧರ್, ರಘು ಇದ್ದರು.