ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಆಚರಣೆ

| Published : Sep 18 2024, 01:51 AM IST

ಸಾರಾಂಶ

ಹೊಳೆನರಸೀಪುರ ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಪ್ರಧಾನಿ ಮೋದಿಜೀಯವರ ಜನ್ಮದಿನ ಪ್ರಯುಕ್ತ ಮಹಾತ್ಮಗಾಂಧಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪ್ರಧಾನಿ ಮೋದಿಜೀಯವರ ಭಾವಚಿತ್ರಕ್ಕೆ ಅಭಿಮಾನಿಗಳು ಕ್ಷೀರಾಭಿಷೇಕ ನೆರವೇರಿಸಿ, ಸಿಹಿ ಹಂಚಿದ ನಂತರ ಮಾತನಾಡಿದರು. ಪ್ರಧಾನಿಯವರ ಜನ್ಮದಿನ ಪ್ರಯುಕ್ತ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಬ್ರೆಡ್, ಹಣ್ಣು ಹಂಪಲು ವಿತರಿಸುತ್ತೇವೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಪ್ರಧಾನಿ ಮೋದಿಜೀಯವರು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದು, ಮಂಡಲ ವ್ಯಾಪ್ತಿಯಲ್ಲಿ ಇಂದಿನಿಂದ ಸದಸ್ಯತ್ವ ಅಭಿಯಾನವನ್ನೂ ಪ್ರಾರಂಭಿಸುತ್ತೇವೆ ಎಂದು ಮಳಲಿ ನಾರಾಯಣ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ನಮ್ಮ ದೇಶವನ್ನು ವಿಶ್ವಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡುವ ಜತೆಗೆ ಭಾರತೀಯರು ಹೆಮ್ಮೆ ಪಡುವಂತೆ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ೭೪ ವರ್ಷದ ಜನ್ಮದಿನ ಆಚರಣೆಯ ಸುಸಂದರ್ಭದಲ್ಲಿ ಬಿಜೆಪಿ ಪಕ್ಷದ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಡಿಯಲ್ಲಿ ಶಾಲಾ, ದೇವಾಲಯಗಳ ಆವರಣಗಳ ಸ್ವಚ್ಛತೆ ಹಾಗೂ ಗಿಡ ನೆಡುವ ಮೂಲಕ ಪರಿಸರ ಕಾಳಜಿಯ ಕಾರ್ಯಕ್ರಮಗಳನ್ನು ಅಕ್ಟೋಬರ್ ೨ರವರೆಗೆ ನಡೆಸುತ್ತೇವೆ ಎಂದು ತಾಲೂಕು ಬಿಜೆಪಿ ನಿಕಟಪೂರ್ವ ಮಂಡಲ ಅಧ್ಯಕ್ಷ ಮಳಲಿ ನಾರಾಯಣ್ ತಿಳಿಸಿದರು.

ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಪ್ರಧಾನಿ ಮೋದಿಜೀಯವರ ಜನ್ಮದಿನ ಪ್ರಯುಕ್ತ ಮಹಾತ್ಮಗಾಂಧಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪ್ರಧಾನಿ ಮೋದಿಜೀಯವರ ಭಾವಚಿತ್ರಕ್ಕೆ ಅಭಿಮಾನಿಗಳು ಕ್ಷೀರಾಭಿಷೇಕ ನೆರವೇರಿಸಿ, ಸಿಹಿ ಹಂಚಿದ ನಂತರ ಮಾತನಾಡಿದರು. ಪ್ರಧಾನಿಯವರ ಜನ್ಮದಿನ ಪ್ರಯುಕ್ತ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಬ್ರೆಡ್, ಹಣ್ಣು ಹಂಪಲು ವಿತರಿಸುತ್ತೇವೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಪ್ರಧಾನಿ ಮೋದಿಜೀಯವರು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದು, ಮಂಡಲ ವ್ಯಾಪ್ತಿಯಲ್ಲಿ ಇಂದಿನಿಂದ ಸದಸ್ಯತ್ವ ಅಭಿಯಾನವನ್ನೂ ಪ್ರಾರಂಭಿಸುತ್ತೇವೆ ಎಂದರು.

ಮಂಡಲ ಅಧ್ಯಕ್ಷ ಕೆ.ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ಎ.ವಿ. ಹಾಗೂ ವಿದ್ಯಾಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ಮುಖಂಡರಾದ ಮೈಲಾರಯ್ಯ, ಅಮಿತ್, ಎಂ.ಎನ್.ರಾಜು, ಕೀರ್ತನ್, ಇಂದಿರಾ ನಾಗರಾಜು ಇತರರು ಇದ್ದರು.