ಸಾರಾಂಶ
ದೇವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಯಸ್ಸು, ಆರೋಗ್ಯ ಕೊಟ್ಟು, ದೇಶದ ಏಳ್ಗೆ ಹಾಗೂ ಅಭಿವೃದ್ಧಿಗಾಗಿ ಶ್ರಮಿಸುವಂತೆ ದೀರ್ಘಾಯುಶ್ವ ನೀಡಿ ಕಾಪಾಡಲಿ. ನಾಡಿನ ಜನತೆಗೆ ಇನ್ನು ಒಳ್ಳೆ ಒಳ್ಳೆ ಯೋಜನೆಗಳನ್ನು ರೂಪಿಸಲಿ ಎಂದು ಹಾರೈಕೆ
ಕನ್ನಡಪ್ರಭ ವಾರ್ತೆ ಹಲಗೂರು
ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 74ನೇ ಹುಟ್ಟುಹಬ್ಬದ ಅಂಗವಾಗಿ ಸರ್ಕಾರಿ ಆಸ್ಪತ್ರೆಗೆ ಬಂದಿದ್ದ ರೋಗಿಗಳಿಗೆ ನರೇಂದ್ರ ಮೋದಿ ಅವರ ಕಟ್ಟಾ ಅಭಿಮಾನಿ ರವಿ ಮೋದಿ ಸಿಹಿ ಹಂಚಿ, ಊಟ ವಿತರಿಸಿ ಹಸಿವು ನೀಗಿಸಿದರು.ಹಲಗೂರು, ದಳವಾಯಿ ಕೋಡಹಳ್ಳಿ, ಎತ್ತಂಬಾಡಿ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಬಂದ ರೋಗಿಗಳಿಗೆ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಸಿಹಿ ಹಂಚಿ ಊಟವನ್ನು ನೀಡಿದರು.
ನಂತರ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ದೇಶದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಮೋದಿ ಮತ್ತೆ ಪ್ರಧಾನಿಯಾಗಿರುವುದು ನಮಗೆಲ್ಲ ಸಂತಸ ತಂದಿದೆ. ದೇಶದ ಅಭಿವೃದ್ಧಿ ಹಾಗೂ ಬಡವರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಎಂದರು.ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ. ವಿಶ್ವದಲ್ಲೇ ಅತ್ಯುತ್ತಮ ಪ್ರಧಾನಿಯಾಗಿ ಮೋದಿಯವರು ಹೆಸರುವಾಸಿಯಾಗಿದ್ದಾರೆ. ಅವರ ಜನ್ಮ ದಿನಾಚರಣೆ ಅಂಗವಾಗಿ ಮೂರು ಆಸ್ಪತ್ರೆಗಳಲ್ಲಿ ಹಸಿವು ನಿವಾರಣೆ ಕಾರ್ಯಕ್ರಮವನ್ನು ನಡೆಸಲಾಗಿದೆ ಎಂದರು.
ದೇವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಯಸ್ಸು, ಆರೋಗ್ಯ ಕೊಟ್ಟು, ದೇಶದ ಏಳ್ಗೆ ಹಾಗೂ ಅಭಿವೃದ್ಧಿಗಾಗಿ ಶ್ರಮಿಸುವಂತೆ ದೀರ್ಘಾಯುಶ್ವ ನೀಡಿ ಕಾಪಾಡಲಿ. ನಾಡಿನ ಜನತೆಗೆ ಇನ್ನು ಒಳ್ಳೆ ಒಳ್ಳೆ ಯೋಜನೆಗಳನ್ನು ರೂಪಿಸಲಿ ಎಂದು ಹಾರೈಸಿದರು.ಈ ವೇಳೆ ದಳವಾಯಿ ಕೋಡಿಹಳ್ಳಿ ವೈದ್ಯಾಧಿಕಾರಿಗಳಾದ ಉದಯ್, ವೀರಣ್ಣಗೌಡ, ವೆಂಕಟೇಶ್, ಲಿಂಗಪಟ್ಟಣ ಗಂಗಾಧರ್, ಕಿರಣ್. ಕನಕ ಹಾಜರಿದ್ದರು.
ಭಗತ್‌ಸಿಂಗ್ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಮಂಡ್ಯ:ಎಐಡಿಎಸ್‌ಓ ವತಿಯಿಂದ ಸೆ.೨೮ರಂದು ಸ್ವಾತಂತ್ರ್ಯ ಹೋರಾಟಗಾರ ಭಗತ್‌ಸಿಂಗ್ ಅವರ ೧೧೭ನೇ ಜನ್ಮ ದಿನದ ಅಂಗವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಗತ್‌ಸಿಂಗ್‌ರ ಪಾತ್ರ ವಿಷಯದ ಕುರಿತು ರಾಜ್ಯ ಮಟ್ಟದ ಸ್ಪರ್ಧೆ ನಡೆಯಲಿದೆ.
ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಾದ್ಯಂತ ಶಾಲಾ, ಕಾಲೇಜು ಮಟ್ಟದಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ ನಡೆಯುತ್ತಿದ್ದು, ಭಗತ್‌ಸಿಂಗ್‌ರ ಆದರ್ಶ, ಮೌಲ್ಯ ಹಾಗೂ ವಿಚಾರಗಳನ್ನು ಪಸರಿಸುವ ಸಲುವಾಗಿ ಈ ಸಾಂಸ್ಕೃತಿಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ವಾತಂತ್ರ್ಯ ಚಳವಳಿಯಲ್ಲಿ ಭಗತ್‌ಸಿಂಗ್‌ರ ಪಾತ್ರ ಕುರಿತು ಪ್ರಬಂಧ ಸ್ಪರ್ಧೆ ನಡೆಯಲಿದ್ದು, ಶಾಲೆ, ಕಾಲೇಜು, ಪದವಿ, ಇಂಜಿನಿಯರಿಂಗ್, ವೈದ್ಯಕೀಯ ಪದವಿಗಳಿಗೆ ಸ್ಪರ್ಧೆ ನಡೆಯಲಿದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ, ತೃತೀಯ ಮೂರು ಬಹುಮಾನ ವಿತರಣೆ ಇರುತ್ತದೆ. ಜಿಲ್ಲಾ ಮಟ್ಟದ ವಿಜೇತರ ಪ್ರಬಂಧಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ. ಆಸಕ್ತರು ಜಿಲ್ಲಾ ಸಹ ಸಂಚಾಲಕಿ ಚಂದ್ರಿಕ ಮೊ : ೭೭೯೫೩೫೭೪೫೭ನ್ನು ಸಂಪರ್ಕಿಸಲು ಕೋರಲಾಗಿದೆ.