ಶತ್ರು ರಾಷ್ಟ್ರಗಳ ಬೆವರಿಳಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತ: ನವೀನ್ ಗುಳಗಣ್ಣನವರ್

| Published : Feb 10 2024, 01:51 AM IST

ಸಾರಾಂಶ

ಪ್ರಧಾನಿಯಿಂದ ಬೇಟಿ ಬಚಾವೋ ಬೇಟಿ ಪಡಾವೋ, ಸ್ವಚ್ಛ ಭಾರತ್ ಯೋಜನೆ, ಕೊರೋನ ಲಸಿಕೆ, ರಾಷ್ಟ್ರೀಯ ರಕ್ಷಣಾ ಪಡೆಯ ಬಲಿಷ್ಠತೆ, ಪಿಎಂ ಕಿಸಾನ್, ವಿಮಾ ಯೋಜನೆ, ರೈಲ್ವೆ, ರಸ್ತೆ, ಬೆಂಬಲ ಬೆಲೆ, ₹29 ದರದಲ್ಲಿ ಅಕ್ಕಿ ವಿತರಣೆ, ಹೀಗೆ ಅನೇಕ ಯೋಜನೆಗಳು ಗ್ರಾಮೀಣ ಪ್ರದೇಶದಲ್ಲಿ ಜನರನ್ನು ತಲುಪಿವೆ.

ಕುಕನೂರು: ಕಾಂಗ್ರೆಸ್ ಅವಧಿಯಲ್ಲಿ ಭಾರತದ ಮೇಲೆ ಶತ್ರು ರಾಷ್ಟ್ರಗಳು ದಾಳಿಗೆ ಬರುತ್ತಿದ್ದವು. ಆದರೆ ಪ್ರಧಾನಿ ನರೇಂದ್ರ ಮೋದಿ ಆಡಳಿತದಿಂದ ಶತ್ರು ರಾಷ್ಟ್ರಗಳು ಬೇವರುತ್ತಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಹೇಳಿದರು.

ತಾಲೂಕಿನ ಚಂಡೂರು ಗ್ರಾಮದಲ್ಲಿ ಯಲಬುರ್ಗಾ ಬಿಜೆಪಿ ಮಂಡಲದಿಂದ ಜರುಗಿದ ಬಿಜೆಪಿ ಗ್ರಾಮ ಚಲೋ ಅಭಿಯಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಬೂತ್ ಮಟ್ಟದಲ್ಲಿ ಬಿಜೆಪಿಯ ಶಕ್ತಿ ಇದೆ. ಬೂತ್ ಮಟ್ಟದ ಸಂಘಟನೆ ಹೆಚ್ಚಿಸಬೇಕಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿ ಬಿಜೆಪಿ ತಳಮಟ್ಟದಿಂದ ಬಲಿಷ್ಠಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ 10 ವರ್ಷದಲ್ಲಿ ಭಾರತವನ್ನು ಸದೃಢಗೊಳಿಸಿದ್ದಾರೆ. ಗ್ರಾಮ ಚಲೋ ಅಭಿಯಾನ ಉದ್ದೇಶ ಗ್ರಾಮೀಣ ಮಟ್ಟದಲ್ಲಿ ಭಾರತವನ್ನು ಉಜ್ವಲತೆಯತ್ತ ಕೊಂಡೊಯ್ಯುವುದಾಗಿದೆ. ಪ್ರಧಾನಿಯಿಂದ ಬೇಟಿ ಬಚಾವೋ ಬೇಟಿ ಪಡಾವೋ, ಸ್ವಚ್ಛ ಭಾರತ್ ಯೋಜನೆ, ಕೊರೋನ ಲಸಿಕೆ, ರಾಷ್ಟ್ರೀಯ ರಕ್ಷಣಾ ಪಡೆಯ ಬಲಿಷ್ಠತೆ, ಪಿಎಂ ಕಿಸಾನ್, ವಿಮಾ ಯೋಜನೆ, ರೈಲ್ವೆ, ರಸ್ತೆ, ಬೆಂಬಲ ಬೆಲೆ, ₹29 ದರದಲ್ಲಿ ಅಕ್ಕಿ ವಿತರಣೆ, ಹೀಗೆ ಅನೇಕ ಯೋಜನೆಗಳು ಗ್ರಾಮೀಣ ಪ್ರದೇಶದಲ್ಲಿ ಜನರನ್ನು ತಲುಪಿವೆ. ಕಾಂಗ್ರೆಸ್ ಅವಧಿಯಲ್ಲಿ ಬರೀ ಹಗರಣಗಳಾಗಿವೆ. ವಿದೇಶಿ ಶತ್ರು ರಾಷ್ಟ್ರಗಳಿಂದ ದಾಳಿ ಆಗಿವೆ ಎಂದರು.2ಜಿ ಸ್ಪೆಕ್ಟ್ರಂ ಹಗರಣ, ಆದರ್ಶ ಸೊಸೈಟಿ ಹಗರಣ ಕಾಂಗ್ರೆಸ್ ಲೂಟಿ ಕೊಡುಗೆಗಳು ಎಂದರು.ಬಿಜೆಪಿ ಮುಖಂಡ ಬಸಲಿಂಗಪ್ಪ ಭೂತೆ ಮಾತನಾಡಿ, ಪ್ರಧಾನಿ ಮೋದಿಗೆ ವಿಶ್ವದ ಚುಕ್ಕಾಣಿ ಹಿಡಿಯಬೇಕೆಂದು ವಿದೇಶಗಳು ಅಭಿಲಾಷೆ ವ್ಯಕ್ತಪಡಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಜನ್ ಧನ್ ಯೋಜನೆ, ಉಜ್ವಲ ಗ್ಯಾಸ್ ಯೋಜನೆ, ರಾಷ್ಟ್ರೀಯ ಅಭಿವೃದ್ಧಿಗೆ ಪೂರಕವಾಗಿವೆ ಎಂದರು.ಬಿಜೆಪಿ ಮುಖಂಡ ಕೊಟ್ರಪ್ಪ ಮುತ್ತಾಳ ಮಾತನಾಡಿ, ಸಂಸದ ಸಂಗಣ್ಣ ಕರಡಿ ಮತ್ತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಜಯ ಸಾಧಿಸುತ್ತಾರೆ. ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಅವರಿಗೆ ರಾಜಕೀಯ ಗಟ್ಟಿತನ ಇದೆ. ಕಾಂಗ್ರೆಸ್ ಸರ್ಕಾರಕ್ಕೆ ಬುದ್ಧಿ ಕಲಿಸುವ ಕೆಲಸ ಆಗಬೇಕಿದೆ. ಈ ಗ್ರಾಮ ಚಲೋ ಅಭಿಯಾನ ಲೋಕಸಭೆಯ ರಾಜಕೀಯ ಕಹಳೆ ಆಗಿದೆ ಎಂದರು.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ತಾಳಕೇರಿ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಹಿರಿಯರು, ಕಾರ್ಯಕರ್ತರಿಂದ ಗ್ರಾಮ ವಾಸ್ತವ್ಯ ಜರುಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿ ಗಟ್ಟಿಗೊಳಿಸುವ ಕಾರ್ಯ ಜರುಗುತ್ತಿದೆ ಎಂದರು.ಯಲಬುರ್ಗಾ ಬಿಜೆಪಿ ಮಂಡಲದ ಯುವ ಮೋರ್ಚಾ ಅಧ್ಯಕ್ಷ ಪ್ರಭುಗೌಡ ಪಾಟೀಲ್ ಮಾತನಾಡಿದರು.ತಾಪಂ ಮಾಜಿ ಅಧ್ಯಕ್ಷ ಜಗನ್ನಾಥಗೌಡ ಪಾಟೀಲ್, ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಹುಲ್ಲೂರು, ಶಿವಶರಣಪ್ಪ ಗೌಡ ಪಾಟೀಲ್, ಗವಿಸಿದ್ದಪ್ಪ ಬ್ಯಾಳಿ, ದತ್ತನಗೌಡ ಮಾಪಾ, ಸುರೇಶ್ ಗೌಡ್ರು ಶಿವನಗೌಡ್ರು, ವೀರಣ್ಣ ಅಂಗಡಿ, ಮುತ್ತಣ್ಣ ಬ್ಯಾಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ತಾಳಕೇರಿ, ಗ್ರಾಪಂ ಅಧ್ಯಕ್ಷ ವಿರುಪಾಕ್ಷ ತಳಕಲ್, ಸೋಮನಗೌಡ, ರವಿಗೌಡ ಪಾಟೀಲ್, ಪ್ರಕಾಶ್ ಬೋರಣ್ಣನವರ್, ಶಿವಣ್ಣ ಅರಕೇರಿ, ಗ್ರಾಪಂ ಸದಸ್ಯ ವೀರಣ್ಣ ಮಾದಿನೂರು, ವೀರಪ್ಪ ಬಂಡಿ, ಮಜರಪ್ಪ ಗೊರವರ, ಶಿವಪ್ಪ ದೊಡ್ಮನಿ, ವಿರೇಶ ಸಬರದ, ಶಂಕ್ರಪ್ಪ ಜ್ಯೋತಿ, ಮೈಲಪ್ಪ ಗೊರವರ, ಜಗದೀಶ ಜವಳಿ ಇದ್ದರು.ಅದ್ಧೂರಿ ಮೆರವಣಿಗೆ:ಚಂಡೂರು ಗ್ರಾಮಕ್ಕೆ ಆಗಮಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಅವರನ್ನು ಗ್ರಾಮಸ್ಥರು ಬೈಕ್ ರ್‍ಯಾಲಿ ಮೂಲಕ ಪಟಾಕಿ ಸಿಡಿಸಿ ಸ್ವಾಗತಿಸಿದರು. ಗ್ರಾಮದಲ್ಲಿ ಎತ್ತಿನ ಬಂಡಿ ಮೂಲಕ ಮೆರವಣಿಗೆ ಜರುಗಿತು.ಗ್ರಾಮ ವಾಸ್ತವ್ಯ:ಗ್ರಾಮದ ಚಲೋ ಅಭಿಯಾನದಲ್ಲಿ 24 ಗಂಟೆ ಚಂಡೂರು ಗ್ರಾಮದಲ್ಲಿಯೇ ಇರಲಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ್ ಹಾಗೂ ಕಾರ್ಯಕರ್ತರು ಗ್ರಾಮದ ಚನ್ನಪ್ಪ ತಳವಾರ್ ಮನೆಯಲ್ಲಿ ರಾತ್ರಿ ವಸತಿ ಇದ್ದರು.