ಸಾರಾಂಶ
ಕುಶಾಲನಗರ ತಾಲೂಕಿನ ಸುಂದರ ನಗರದ ನಿವಾಸಿಗಳಾದ ಮಹೇಂದ್ರ-ಜಯಲಕ್ಷ್ಮೀ ದಂಪತಿಗೆ ಮಂಗಳವಾರ ಗಂಡು ಮಗು ಜನಿಸಿದೆ. ಎರಡು ದಿನಗಳ ಹಿಂದೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ಜಯಲಕ್ಷ್ಮೀ ದಾಖಲಾಗಿದ್ದು, ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಆಸ್ಪತೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ದಂಪತಿ ಮಗುವಿಗೆ ನರೇಂದ್ರ ಮೋದಿ ಎಂದು ಹೆಸರು ಇಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಪ್ರಧಾನಿ ನರೇಂದ್ರ ಮೋದಿ ಜನ್ಮದಿನವಾದ ಮಂಗಳವಾರ (ಸೆ.17) ಮಡಿಕೇರಿಯಲ್ಲಿ ಜನಿಸಿದ ಗಂಡು ಮಗುವಿಗೆ ಹೆತ್ತವರು ‘ನರೇಂದ್ರ ಮೋದಿ’ ಎಂದು ನಾಮಕರಣ ಮಾಡಿದ್ದಾರೆ.ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಸುಂದರ ನಗರದ ನಿವಾಸಿಗಳಾದ ಮಹೇಂದ್ರ-ಜಯಲಕ್ಷ್ಮೀ ದಂಪತಿಗೆ ಮಂಗಳವಾರ ಗಂಡು ಮಗು ಜನಿಸಿದೆ. ಎರಡು ದಿನಗಳ ಹಿಂದೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ಜಯಲಕ್ಷ್ಮೀ ದಾಖಲಾಗಿದ್ದು, ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಆಸ್ಪತೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ದಂಪತಿ ಮಗುವಿಗೆ ನರೇಂದ್ರ ಮೋದಿ ಎಂದು ಹೆಸರು ಇಟ್ಟಿದ್ದಾರೆ.
ಮಗುವಿನ ತಂದೆ ಮಹೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ ಪ್ರಧಾನಿಯಂತೆ ನಮ್ಮ ಮಗು ಬೆಳೆದು ನಾಡಿಗೆ ಒಳಿತು ಮಾಡಲಿ. ಮಗು ಉನ್ನತ ಮಟ್ಟದ ಸಾಧನೆ ಮಾಡಲಿ ಎನ್ನುವುದು ನಮ್ಮ ಆಶಯ ಎಂದರು. ಜಿಲ್ಲಾ ಬಿಜೆಪಿ ಕಾರ್ಯಕರ್ತರು ಶುಭ ಕೋರಿ ಮಗುವಿಗೆ ಒಂದು ಗ್ರಾಂ ಚಿನ್ನದ ಉಂಗುರ ತೊಡಿಸಿ ಆಸ್ಪತ್ರೆ ಆವರಣದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.ವಿಧಾನಸಭೆ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಮಾತನಾಡಿ, ಮೋದಿ ಜನ್ಮದಿನದಂದು ಜನಿಸಿದ ಪುತ್ರನಿಗೆ ‘ನರೇಂದ್ರ ಮೋದಿ’ ಎಂದು ಹೆಸರು ಇಟ್ಟ ದಂಪತಿ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಜನ್ಮದಿನದಂದು ಕರುಳಬಳ್ಳಿಗೆ ‘ನರೇಂದ್ರ ಮೋದಿ’ ಎಂದು ನಾಮಕರಣ ಮಾಡಿರುವುದು ದೇಶದ ಜನ ನರೇಂದ್ರ ಮೋದಿ ಅವರ ಮೇಲೆ ಇಟ್ಟಿರುವ ಪ್ರೀತಿ, ಅಭಿಮಾನಕ್ಕೆ ಸಾಕ್ಷಿಯಾಗಿದೆ. ಈ ಮಗು ಮೋದಿ ಅವರ ಹಾಗೆ ಉನ್ನತ ಶಿಖರಕ್ಕೆ ಏರಲಿ. ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳಲಿ ಎಂದು ಆಶೀರ್ವದಿಸಿದರು.