‘ಪ್ರಾಚೀನ ಕಾವ್ಯದಲ್ಲಿ ಜೈನ ಮಹಾಭಾರತ’ ವಿಷಯ ಕುರಿತು ಸಂಶೋಧನೆ ನಡೆಸಿ ಮಂಡಿಸಿ ಮಹಾಪ್ರಬಂಧವನ್ನು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪಿಎಚ್.ಡಿ ಪದವಿಗಾಗಿ ಅಂಗೀಕರಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮದ್ದೂರು ತಾಲೂಕು ವಳಗೆರೆದೊಡ್ಡಿ ಗ್ರಾಮದ ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರಾದ ಎಚ್.ಆರ್. ಶಿಲ್ಪ ಅವರು‌ ಡಾ.ಪಿ.ಮಣಿ ಅವರ ಮಾರ್ಗದರ್ಶನದಲ್ಲಿ ‘ಪ್ರಾಚೀನ ಕಾವ್ಯದಲ್ಲಿ ಜೈನ ಮಹಾಭಾರತ’ ವಿಷಯ ಕುರಿತು ಸಂಶೋಧನೆ ನಡೆಸಿ ಮಂಡಿಸಿ ಮಹಾಪ್ರಬಂಧವನ್ನು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪಿಎಚ್.ಡಿ ಪದವಿಗಾಗಿ ಅಂಗೀಕರಿಸಿದೆ.

ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 21ನೇ ಘಟಿಕೋತ್ಸವದಲ್ಲಿ ಶಿಲ್ಪ ಅವರಿಗೆ ಪಿಎಚ್‌.ಡಿ ಪದವಿ ಪ್ರದಾನ ಮಾಡಲಾಗಿದೆ.

ಚೆಲುವನಾರಾಯಣಸ್ವಾಮಿ ದೇಗುಲದ ವ್ಯವಸ್ಥಾಪನಾ ಸಮಿತಿ ನೇಮಿಸಿ ಆದೇಶ

ಮೇಲುಕೋಟೆ:

ಶ್ರೀಚೆಲುವನಾರಾಯಣಸ್ವಾಮಿ ಸಮೂಹ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ದೇವಾಲಯದ ಅಭಿವೃದ್ಧಿ ದೃಷ್ಟಿಯಿಂದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೋರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ಮೇರೆಗೆ ರಾಜ್ಯ ಧಾರ್ಮಿಕ ಪರಿಷತ್‌ನಲ್ಲಿ ವ್ಯವಸ್ಥಾಪನಾ ಸಮಿತಿಗೆ ಸದಸ್ಯತ್ವ ಕೋರಿ ಸಲ್ಲಿಕೆಯಾದ ಅರ್ಜಿ ಪರಿಶೀಲಿಸಿ ಅಂತಿಮವಾಗಿ ಆಯ್ಕೆ ಪ್ರಕ್ರಿಯೆ ತೀರ್ಮಾನ ನಡೆದ ನಂತರ ನೂತನವಾಗಿ ಎಂಟು ಜನರ ವ್ಯವಸ್ಥಾಪನಾ ಸಮಿತಿ ರಚಿಸಿ ಧಾರ್ಮಿಕದತ್ತಿ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ವಜ್ರಾಂಗಿ ಆಭರಣ ಅವ್ಯವಹಾರದ ಸಂಬಂಧ ವ್ಯವಸ್ಥಾಪನಾ ಸಮಿತಿ ವಜಾ ಆದ ಹತ್ತು ವರ್ಷಗಳ ನಂತರ ವ್ಯವಸ್ಥಾಪನಾ ಸಮಿತಿ ರಚನೆಯಾಗಿದೆ. ನೂತನ ಸದಸ್ಯರಾಗಿ ಬಳಿಘಟ್ಟ ಗ್ರಾಮದ ವೆಂಕಟೇಶ್, ಮೇಲುಕೋಟೆ ಹಾಲಿನ ಡೈರಿ ಅಧ್ಯಕ್ಷ ಕಾಡೇನಹಳ್ಳಿ ರಾಮಚಂದ್ರು ಅವರ ಪತ್ನಿ ಶೋಭಾ, ಮೈಸೂರಿನ ಡಾ.ಪ್ರೀತಿಮಹದೇವ್, ಪಾರ್ವಟೆ ಹೊಸಳ್ಳಿಯ ರಾಜ್ಯ ಪ್ರಶಸ್ತಿ ಪುರಸ್ಕೃತ, ನಿವೃತ್ತ ಮುಖ್ಯಶಿಕ್ಷಕ ಡಾ.ವಿ.ವೆಂಕಟರಾಮೇಗೌಡ, ಕಾಡೇನಹಳ್ಳಿಯ ವಕೀಲರಾದ ಸತೀಶ್, ಜಕ್ಕನಹಳ್ಳಿಯ ಕೆ.ಎಚ್‌.ಪುಟ್ಟಸ್ವಾಮಿ, ಕನಗೋನಹಳ್ಳಿಯ ಸಮಾಜ ಸೇವಕ ಪರಮೇಶ್‌ಗೌಡ, ಬ್ರಹ್ಮದೇವರಹಳ್ಳಿಯ ರಾಜು ಬಿವಿ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.

ನಾಮ ನಿರ್ದೇಶನವಾಗಿ ಪ್ರಧಾನ ಅರ್ಚಕ ಅಥವಾ ಅರ್ಚಕ ಹುದ್ದೆಯ ಸದಸ್ಯತ್ವಕ್ಕೆ ಯಾರೊಬ್ಬರನ್ನೂ ಆಯ್ಕೆ ಮಾಡದೆ ಹಾಗೇ ಬಿಡಲಾಗಿದೆ. ಕಾರ್ಯದರ್ಶಿಯನ್ನಾಗಿ ಇಒ ಶೀಲಾರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ನೀತಿ ನಿಯಮಾವಳಿಗಳು, ಕಾನೂನು ಪ್ರಕ್ರಿಯೆಯನ್ನು ಅನುಸರಿಸಿ ಅರ್ಹ ಅರ್ಚಕರನ್ನು ಸಮಿತಿಗೆ ನೇಮಿಸಲು ದೇವಾಲಯದ ಇಒ ವರದಿಯಾಧರಿಸಿ ನೇಮಕ ಮಾಡಬೇಕಾದ ಪ್ರಕ್ರಿಯೆ ಬಾಕಿ ಉಳಿದಿದೆ.

ಸರ್ಕಾರದ ಆದೇಶದಂತೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನು ಆಯ್ಕೆಮಾಡಬೇಕಿದೆ. ಮಾರ್ಚ 28 ರಂದು ನಡೆಯುವ ವಿಶ್ವವಿಖ್ಯಾತ ವೈರಮುಡಿ ಉತ್ಸವದ ವ್ಯವಸ್ಥೆಯ ಪ್ರಮುಖ ಜವಾಬ್ದಾರಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಜೊತೆಗೆ ವ್ಯವಸ್ಥಾಪನಾ ಸಮಿತಿಯದ್ದೂ ಆಗಿರುತ್ತದೆ.