ಸಾರಾಂಶ
ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ನೀರು ನಿಲ್ಲದಂತೆ ನೋಡಿಕೊಳ್ಳುವುದು ಹಾಗೂ ಸ್ವಚ್ಛತೆಯಿಂದ ಇರಲು ಗ್ರಾಮ ಪಂಚಾಯತಿ ಮಟ್ಟದಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಅರಿವು ಮೂಡಿಸಿದಾಗ ಮಾತ್ರ ಡೆಂಘೀ ಜ್ವರವನ್ನು ನಿಯಂತ್ರಿಸಲು ಸಾಧ್ಯ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ನೀರು ನಿಲ್ಲದಂತೆ ನೋಡಿಕೊಳ್ಳುವುದು ಹಾಗೂ ಸ್ವಚ್ಛತೆಯಿಂದ ಇರಲು ಗ್ರಾಮ ಪಂಚಾಯತಿ ಮಟ್ಟದಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಅರಿವು ಮೂಡಿಸಿದಾಗ ಮಾತ್ರ ಡೆಂಘೀ ಜ್ವರವನ್ನು ನಿಯಂತ್ರಿಸಲು ಸಾಧ್ಯ ಎಂದು ತಾಪಂ ಇಒ ಜಿ.ಕೆ.ಹೊನ್ನಯ್ಯ ಹೇಳಿದರು.ನಗರದ ತಾಲೂಕು ಪಂಚಾಯತಿ ಆವರಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ರಾಷ್ಟ್ರೀಯ ಡೆಂಘೀ ದಿನಾಚರಣೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
8 ಡೆಂಘೀ ಪ್ರಕರಣ ಪತ್ತೆನಮ್ಮ ತಾಲೂಕಿನಲ್ಲಿ ಈ ಹಿಂದೆ ಹರಡಿಕೊಂಡಿದ್ದ ಸ್ಥಳಗಳಲ್ಲಿ ಮತ್ತೆ ಕಾಣಿಸಿದೆ ಇಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಪ್ರಸ್ತುತ ತಾಲೂಕಿನಲ್ಲಿ ತೊಂಡೇಬಾವಿ, ಅಲ್ಲೀಪುರ, ಜಗರೆಡ್ಡಿಹಳ್ಳಿ, ನಾಮಗೊಂಡ್ಲು, ನಕ್ಕಲಹಳ್ಳಿ, ಮಂಚೇನಹಳ್ಳಿ ಸೇರಿ 8 ಕೇಸ್ ಪತ್ತೆಯಾಗಿರುವ ಕಾರಣ ನಾವು ಮೊದಲಿಗೆ ಶಾಲೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ, ಮನೆಯ ಸುತ್ತ ಮುತ್ತ ಸ್ವಚ್ಛತೆ ಕಾಪಾಡಲು ಮುಂದಾಗಬೇಕು ಎಂದರು.ಸ್ವಚ್ಛತೆಗೆ ಆದ್ಯತೆ ನೀಡಿ
ಆರೋಗ್ಯಾಧಿಕಾರಿ ಡಾ. ಚಂದ್ರಮೋಹನ್ ರೆಡ್ಡಿ ಮಾತನಾಡಿ, ನಗರ ಪ್ರದೇಶದಲ್ಲಿ ಯಾವುದೇ ರೀತಿಯ ಡೆಂಘೀ ಕೇಸ್ ಪತ್ತೆಯಾಗಿಲ್ಲ ಆದರೆ ಗ್ರಾಮಾಂತರದಲ್ಲಿ ಪತ್ತೆಯಾಗಿದ್ದು ಅದನ್ನು ನಿಯಂತ್ರಣದಲ್ಲಿಡಲು ಡೆಂಘೀ ಜ್ವರದ ಹರಡುವಿಕೆ, ಲಕ್ಷಣಗಳು, ಚಿಕಿತ್ಸೆ, ನಿಯಂತ್ರಣ ಕ್ರಮಗಳು ಸೇರಿದಂತೆ ಸ್ವಚ್ಛತೆಯ ಬಗ್ಗೆ ತಿಳಿಸಿದರು.ಕಾರ್ಯಕ್ರಮದಲ್ಲಿ ಡಾ.ಮುರುಳಿಧರ್, ಸಿಡಿಪಿಒ ಕಚೇರಿಯ ಮೂಕಾಂಬಿಕಾ, ಶಿಕ್ಷಣ ಇಲಾಖೆ ಹನುಮಂತರಾಯಪ್ಪ ಸೇರಿದಂತೆ ಪಿಡಿಒ ಅಧಿಕಾರಿಗಳು ಭಾಗವಹಿಸಿದ್ದರು.