ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ: ಶಾಸಕ ಟಿ. ರಘುಮೂರ್ತಿ

| Published : Oct 25 2025, 01:00 AM IST

ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ: ಶಾಸಕ ಟಿ. ರಘುಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಭಾಗದ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕರಾದ ಟಿ ರಘುಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಪರಶುರಾಂಪುರ

ಈ ಭಾಗದ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕರಾದ ಟಿ ರಘುಮೂರ್ತಿ ಹೇಳಿದರು.

ಪರಶುರಾಂಪುರದ ಮುಖ್ಯವೃತ್ತದಿಂದ ಸರ್ಕಾರಿ ಆಸ್ಪತ್ರೆವರೆಗೂ ರಸ್ತೆ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಿ ಸುಮಾರು 1 ಕಿ.ಮೀ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ರಸ್ತೆ ಅಗಲೀಕರಣಕ್ಕೆ ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಿ ಮತ್ತು ಗ್ರಾಮಸ್ಥರು ಸ್ಥಳೀಯವಾಗಿ ಕಾಮಗಾರಿ ಗುಣಮಟ್ಟದಿಂದ ಸಾಗುತ್ತಿದೆಯೋ ಇಲ್ಲವೋ ಎಂಬುದು ಪರಿಶೀಲಿಸಿ ನಮ್ಮ ಗಮನಕ್ಕೆ ತನ್ನಿ ಎಂದು ತಿಳಿಸಿದರು.

ಪರಶುರಾಂಪುರದ ಮುಖ್ಯ ವೃತ್ತದಿಂದ ಚೌಳೂರು ಗೇಟ್‌ವರೆಗೂ ಸುಮಾರು 2 ಕಿ.ಮೀ. ಕಾಮಗಾರಿಗೆ ಆದ್ಯತೆ ನೀಡಲಾಗಿದೆ. ಸದ್ಯದಲ್ಲೇ ಹಂತ ಹಂತವಾಗಿ ಕಾಮಗಾರಿ ಪೂರೈಸಿ ಗಡಿಭಾಗದ ಪರಶುರಾಂಪುರವನ್ನು ಉನ್ನತೀಕರಿಸಿ ತಾಲೂಕು ಕೇಂದ್ರವಾಗಿಸುವುದೇ ನನ್ನ ಮುಖ್ಯ ಧ್ಯೇಯವಾಗಿದೆ ಇದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೇಶವಣ್ಣ, ಗ್ರಾಪಂ ಅಧ್ಯಕ್ಷ ಎಂ ಆರ್ ರುದ್ರೇಶ್, ಪ್ರಸನ್ನಕುಮಾರ್, ನಾಗಭೂಷಣ, ಮುಖಂಡರಾದ ಶಶಿಧರ, ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.