ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ: ಪಾಟೀಲ

| Published : Jan 12 2025, 01:17 AM IST

ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ: ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಇನ್ನು ಮುಂದೆ ಕೂಡಾ ಜಕ್ಕಲಿ ಗ್ರಾಮಕ್ಕೆ ಸರ್ಕಾರದಿಂದ ಸೊರಕುವ ಕಾಮಗಾರಿ ಹೆಚ್ಚಿನ ಪ್ರಮಾಣದಲ್ಲಿ ತರಲು ಶತಾಯಗತಾಯ ಪ್ರಯತ್ನಿಸುತ್ತೇನೆ

ನರೇಗಲ್ಲ: ಸರ್ಕಾರದ ಅನುದಾನಕ್ಕೆ ಸಾರ್ಥಕತೆ ದೊರೆಯುವಂತೆ ಕಾಮಗಾರಿ ಗುಣಮಟ್ಟದಿಂದಿರುವಂತೆ ಕಾಯ್ದುಕೊಳ್ಳುವುದರ ಜತೆಗೆ ಸಮಯಾನುಸಾರ ಪೂರ್ಣಗೊಳಿಸಿ ಸಾರ್ವಜನಿಕರ ಮೆಚ್ಚುಗೆಗೆ ಗುತ್ತಿಗೆದಾರರು ಪಾತ್ರರಾಗಬೇಕು ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಸಮೀಪದ ಜಕ್ಕಲಿ ಗ್ರಾಮದಲ್ಲಿ ಸರ್ಕಾರದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ನಿರ್ಮಾಣಗೊಂಡ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.

ಇತ್ತೀಚೆಗೆ ಜಕ್ಕಲಿ ಗ್ರಾಮಕ್ಕೆ ನನ್ನ ಶಾಸಕತ್ವದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿ ತರುವುದರ ಜತೆಗೆ ಅವುಗಳು ಜನೋಪಯೋಗಿಯಾಗುವಂತೆ ಕಾರ್ಯ ಮಾಡಿದ್ದು, ಇದಕ್ಕೆ ಜಕ್ಕಲಿ ಗ್ರಾಮದ ಜನತೆಯ ಸಹಕಾರ ದೊಡ್ಡದಿದೆ. ಈ ನಿಟ್ಟಿನಲ್ಲಿ ಇನ್ನು ಮುಂದೆ ಕೂಡಾ ಜಕ್ಕಲಿ ಗ್ರಾಮಕ್ಕೆ ಸರ್ಕಾರದಿಂದ ಸೊರಕುವ ಕಾಮಗಾರಿ ಹೆಚ್ಚಿನ ಪ್ರಮಾಣದಲ್ಲಿ ತರಲು ಶತಾಯಗತಾಯ ಪ್ರಯತ್ನಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮುಖಂಡ ಮಿಥುನಗೌಡ ಪಾಟೀಲ, ಇಸೂಫ ಇಟಗಿ, ಶರಣಪ್ಪ ಬೆಟಗೇರಿ, ಬಸವರಾಜ ನವಲಗುಂದ, ಮಲ್ಲಿಕಾರ್ಜುನ ಮೇಟಿ, ಚನ್ನಬಸವರಾಜ ದೊಡ್ಡಮೇಟಿ, ಬಸವರಾಜ ಜೋಗಿ, ಸಂತೋಷ ಕೋರಿ, ಶಂಭು ಕೋರಿ, ರುದ್ರಪ್ಪ ದೊಡ್ಡಮೇಟಿ, ಪೀರಸಾಬ್‌ ಬಾಲೆಸಾಬ್‌, ಆರ್.ಬಿ. ವಾಲಿ, ಸುಭಾಸ ದೊಡ್ಡಮನಿಶೆಟ್ಟರ್‌, ಎಸ್.ಆರ್. ಶೆಟ್ಟರ, ವೀರಭದ್ರಪ್ಪ ಗಾಣಿಗೇರ, ಗುರುಲಿಂಗಮೂರ್ತಿ ಮಂಟಯ್ಯನಮಠ, ಶರಣಪ್ಪಮಾಸ್ತರ ಬೂದಿಹಾಳ, ಅಶೋಕ ಮಾದರ, ಬಸವರಾಜ ಮುಕ್ಕಣ್ಣವರ, ಗೂರಪ್ಪ ರೋಣದ, ವೀರಭದ್ರಪ್ಪ ಪಟ್ಟಣಶಟ್ಟಿ, ಅಂದಪ್ಪ ಹೂಗಾರ, ಗ್ರಾಪಂ ಅಧ್ಯಕ್ಷೆ ಗಂಗಮ್ಮ ಜಂಗಣ್ಣವರ, ಅನ್ನಪೂರ್ಣ ಮುಗಳಿ, ಬೀಬಿಜಾನ ಕದಡಿ, ನಿರ್ಮಲಾ ಆದಿ, ಸಂದೇಶ ದೊಡ್ಡಮೇಟಿ, ಮುತ್ತು ಮೇಟಿ, ರಾಜು ಮುಗಳಿ, ಶ್ರೀನಿವಾಸ ಹಾಗೂ ಮುಂತಾದವರು ಇದ್ದರು.