ಉತ್ತಮ ಆರೋಗ್ಯ ಚಿಕಿತ್ಸೆಗೆ ಆದ್ಯತೆ: ಆನಂದ್‌

| Published : Sep 20 2024, 01:39 AM IST

ಸಾರಾಂಶ

ಕಡೂರು, ನನ್ನ ಕ್ಷೇತ್ರದ ಜನಸಾಮಾನ್ಯರಿಂದ ಹಿಡಿದು ಕಡು ಬಡವರಿಗೂ ಉತ್ತಮ ಆರೋಗ್ಯ ಚಿಕಿತ್ಸೆ ದೊರಕಿಸಲು ಆದ್ಯತೆ ನೀಡುತ್ತೇನೆ ಎಂದು ಶಾಸಕ ಕೆ.ಎಸ್ ಆನಂದ್ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 25 ಲಕ್ಷ ರು. ವೆಚ್ಚದ ಐಸೋಲೇಶನ್ ವಾರ್ಡ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕಡೂರು

ನನ್ನ ಕ್ಷೇತ್ರದ ಜನಸಾಮಾನ್ಯರಿಂದ ಹಿಡಿದು ಕಡು ಬಡವರಿಗೂ ಉತ್ತಮ ಆರೋಗ್ಯ ಚಿಕಿತ್ಸೆ ದೊರಕಿಸಲು ಆದ್ಯತೆ ನೀಡುತ್ತೇನೆ ಎಂದು ಶಾಸಕ ಕೆ.ಎಸ್ ಆನಂದ್ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 25 ಲಕ್ಷ ರು. ವೆಚ್ಚದ 12 ಬೆಡ್ ಗಳ ಐಸೋಲೇಶನ್ ವಾರ್ಡ ಉದ್ಘಾಟಿಸಿ ಮಾತನಾಡಿದರು. ನಮ್ಮ ಕಡೂರು ಆಸ್ಪತ್ರೆಯಲ್ಲಿ ಎಲ್ಲ ವಿಭಾಗಗಳಲ್ಲೂ ಅಗತ್ಯ ವೈದ್ಯರು ಮತ್ತು ಸಿಬ್ಬಂದಿ ಇರುವ ಕಾರಣ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರಕುತ್ತಿದೆ. ಆನಸ್ತೇಶಿಯಾ ಮತ್ತು ಇಬ್ಬರು ಡಿಜಿಒ ನೇಮಕವಾದರೆ ವೈದ್ಯರ ಕೊರತೆ ನೀಗುವ ಮೂಲಕ ಎಲ್ಲ ಕಾಯಿಲೆಗಳ ಚಿಕಿತ್ಸೆಗೆ ಅನುಕೂಲವಾಗಲಿದೆ ಎಂದರು.

ಇದೀಗ ಉಧ್ಘಾಟನೆಗೊಂಡ 12 ಹೆಚ್ಚುವರಿ ಐಸೋಲೇಶನ್ ವಾರ್ಡ್ ಗಳ ರೀತಿ ಹಂತ ಹಂತವಾಗಿ ಆಸ್ಪತ್ರೆ ಅಭಿವೃದ್ಧಿಗೆ ಅಗತ್ಯವಿರುವ ಸರ್ಕಾರಿ ಸವಲತ್ತನ್ನು ಮತ್ತು ತಾಲೂಕಿನ ಎಲ್ಲ ಪಿ ಎಚ್ ಸಿ ಮತ್ತು ಸಿ ಎಚ್ ಸಿ ಆಸ್ಪತ್ರೆಗಳಿಗೆ ಸವಲತ್ತು ಒದಗಿಸಿ ಕ್ಷೇತ್ರದ ಜನತೆಗೆ ಅನುಕೂಲ ಮಾಡಿ ಕೊಡುವ ಪ್ರಯತ್ನ ಮಾಡುತ್ತೇನೆ ಎಂದರು.

ಕಡೂರು ರೋಟರಿ ಸದಸ್ಯರು ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು ಅವರನ್ನೂ ಗೌರವಿಸುತ್ತೇನೆ. ನಾನು ಕೂಡ ಅವರ ಸಾಮಾಜಿಕ ಸೇವೆಗೆ ಕೈಜೋಡಿಸುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಉಮೇಶ್, ವೈದ್ಯರಾದ ಡಾ. ದೀಪಕ್, ರೋಟರಿ ಪದಾಧಿಕಾರಿಗಳಾದ ರಾಘವೇಂದ್ರ, ಟಿ.ಡಿ. ಸತ್ಯನ್, ಶಿವಕುಮಾರ್, ಪುರಸಭೆ ಸದಸ್ಯ ಈರಳ್ಳಿ ರಮೇಶ್, ನೌಕರ ಸಂಘದ ಅಧ್ಯಕ್ಷ ಸುರೇಶ್, ತಿಮ್ಮೇಗೌಡ್ರು ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ, ಮುಖಂಡರು ಹಾಜರಿದ್ದರು.

-- ಬಾಕ್ಸ್ ಸುದ್ದಿಗೆ-- ಕಡೂರು ಆಸ್ಪತ್ರೆಯಲ್ಲಿ ಡಾ. ಉಮೇಶ್, ಡಾ. ದೀಪಕ್ ಸೇರಿದಂತೆ ಉತ್ತಮ ವೈದ್ಯರ ತಂಡ ಹಾಗು ಸಿಬ್ಬಂದಿ ಇರುವ ಕಾರಣ ಸಾರ್ವಜನಿಕರಿಗೆ ಉತ್ತಮ ಸೇವೆ ಲಭ್ಯವಾಗುತ್ತಿದೆ. ಜೊತೆಯಲ್ಲಿ ಡೆಂಘೀ ಪ್ರಕರಣಗಳನ್ನು ಸಮರ್ಥವಾಗಿ ನಮ್ಮ ವೈದ್ಯರು ನಿಭಾಯಿಸಿದ್ದಾರೆ. ಜನರ ಪರವಾಗಿ ಅವರನ್ನು ಅಭಿನಂದಿಸುತ್ತೇನೆ. ಇದೇ ರೀತಿ ಆಸ್ಪತ್ರೆಯನ್ನು ಅಧಿಕಾರಿಗಳು ನಡೆಸಿಕೊಂಡು ಹೋಗಲಿ ಎಂದು ಆಶಿಸುತ್ತೇನೆ.

--- ಕೆ.ಎಸ್.ಆನಂದ್,ಶಾಸಕ.

.19ಕೆಕೆಡಿಯು1.ಕಡೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಚ್ಚುವರಿ ಬೆಡ್ ಗಳ ಐಸೋಲೇಶನ್ ವಾರ್ಡನ್ನು ಶಾಸಕ ಕೆ.ಎಸ್‌. ಆನಂದ್ ಉದ್ಘಾಟಿಸಿದರು.