ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ

| Published : Apr 28 2025, 12:51 AM IST

ಸಾರಾಂಶ

ಮಕ್ಕಳ ಮುಂದಿನ ವಿದ್ಯಾಭ್ಯಾಸ ಕುರಿತು ಶಿಕ್ಷಕರಾದ ಅಕ್ಕಿ ಬಸವರಾಜ, ವಿಭೂತಿಮಠದ ಗವಿಸಿದ್ದೇಶ ಮಾರ್ಗದರ್ಶನ

ಹಗರಿಬೊಮ್ಮನಹಳ್ಳಿ: ಪಟ್ಟಣದ ರೇಣುಕಾ ಮತ್ತು ಶ್ರೀನಂದಿ ಪಿಯು ಕಾಲೇಜು ಹಬೊಹಳ್ಳಿ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪರೀಕ್ಷೆ ರೇಣುಕಾ ವಿದ್ಯಾಲಯದಲ್ಲಿ ನಡೆಯಿತು.

ಒಟ್ಟು ೧೨೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಮಕ್ಕಳ ಮುಂದಿನ ವಿದ್ಯಾಭ್ಯಾಸ ಕುರಿತು ಶಿಕ್ಷಕರಾದ ಅಕ್ಕಿ ಬಸವರಾಜ, ವಿಭೂತಿಮಠದ ಗವಿಸಿದ್ದೇಶ ಮಾರ್ಗದರ್ಶನ ನೀಡಿದರು.

ಈ ಕುರಿತು ನಂದಿ ಪಿಯು ಕಾಲೇಜಿನ ಸಂಸ್ಥಾಪಕ ಜೆ.ಎಂ. ನಾಗಭೂಷಣಯ್ಯ ಮಾತನಾಡಿ, ಪಟ್ಟಣದಲ್ಲಿ ಅತಿ ಕಡಿಮೆ ಶುಲ್ಕದೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವ ಪ್ರಯತ್ನ ನಮ್ಮದಾಗಿದೆ. ವಿಜ್ಞಾನ ವಿಭಾಗಕ್ಕೆ ವಿಶೇಷ ಒತ್ತು ನೀಡಲಾಗುತ್ತಿದ್ದು, ನುರಿತ ಉಪನ್ಯಾಸಕರು ಹಾಗೂ ವಿಶೇಷ ಪ್ರಯೋಗಾಲಯ ಹೊಂದಲಾಗಿದೆ. ವೈ.ಎಸ್.ಎಸ್.ಗ್ರುಪ್ ಆಫ್ ಇನ್‌ಸ್ಟೂಟ್‌ನ ಅಧ್ಯಕ್ಷ ಡಾ. ಕೆ.ಎಂ.ಟಿ.ಸಿದ್ದಾರ್ಥ, ರೇಣುಕಾ ವಿದ್ಯಾಸಂಸ್ಥೆಯ ಸ್ಥಾಪಕಿ ಇಂದುಮತಿ ತಿಪ್ಪೇಸ್ವಾಮಿ ಸಹಕಾರದೊಂದಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮ ಧ್ಯೇಯೋದ್ದೇಶವಾಗಿದೆ ಎಂದರು.

ರೇಣುಕಾ ಕಾಲೇಜು ವಿಜ್ಞಾನ ವಿಭಾಗದ ಪ್ರಾಂಶುಪಾಲ ಬಾವಿಹಳ್ಳಿ ಬಸವರಾಜ ಮಾತನಾಡಿದರು. ಉಪನ್ಯಾಸಕ ಸಂದೀಪ್, ಗಣೇಶ, ಗಗನ್‌ದೀಪ್, ಬಸವರಾಜ, ಅನುಷಾ, ಮಹೇಶ್, ವಿನಯ್, ಪ್ರಿಯಾಂಕ, ಕಿರಣ್‌ಕುಮಾರ, ಮಹಾಂತೇಶ ಇದ್ದರು.