ಗುಣಮಟ್ಟದ ಕಾಮಗಾರಿಗೆ ಆದ್ಯತೆ: ಶರತ್

| Published : Jan 13 2024, 01:31 AM IST

ಸಾರಾಂಶ

ಸೂಲಿಬೆಲೆ: ಯಾವುದೇ ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುತ್ತೇನೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ಸೂಲಿಬೆಲೆ: ಯಾವುದೇ ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುತ್ತೇನೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.ಹೋಬಳಿ ವ್ಯಾಪ್ತಿಯ ದ್ಯಾವಸಂದ್ರ ಗ್ರಾಮದಲ್ಲಿ ಶುಕ್ರವಾರ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿಯ ಎಸ್ ಸಿಪಿ ಟಿಎಸ್‌ಪಿ ಯೋಜನೆಯಡಿ ೮೦ ಲಕ್ಷ ಅನುದಾನ ದೊರೆತಿದ್ದು, ಲಕ್ಕೊಂಡಹಳ್ಳಿ ಗ್ರಾಮಕ್ಕೆ ೧೦ ಲಕ್ಷ, ತಿಮ್ಮಸಂದ್ರ ಗ್ರಾಮಕ್ಕೆ ೧೦ ಲಕ್ಷ, ಯನಗುಂಟೆ ೧೦ ಲಕ್ಷ, ಅರಸನಹಳ್ಳಿ ಗ್ರಾಮಕ್ಕೆ ೧೦ ಲಕ್ಷ, ಬಾಲೇನಹಳ್ಳಿ ೧೦ ಲಕ್ಷ, ದ್ಯಾವಸಂದ್ರ ೧೦ ಲಕ್ಷ, ಇ-ಮುತ್ಸಂದ್ರ ೧೦ ಲಕ್ಷ ಹಾಗೂ ಸೊಣ್ಣಹಳ್ಳಿಪುರ ಗ್ರಾಮಕ್ಕೆ ೧೦ ಅನುದಾನ ನೀಡಲಾಗಿದ್ದು ಎಲ್ಲಾ ಕಾಲೋನಿಗಳಲ್ಲಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ನಡೆಯಲಿದೆ ಎಂದು ಹೇಳಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ. ಯುವ ಮುಖಂಡ ನಾರಾಯಣಗೌಡ, ತಾಪಂ ಮಾಜಿ ಸದಸ್ಯ ಡಾ.ಡಿ.ಟಿ.ವೆಂಕಟೇಶ್, ಗ್ರಾಪಂ ಉಪಾಧ್ಯಕ್ಷೆ ಕಲಾವತಿ ಪಿಳ್ಳಪ್ಪ, ಸಹಕಾರ ಬ್ಯಾಂಕ್ ಮಾಜಿ ನಿರ್ದೇಶಕ ಅಣ್ಣೆಯಪ್ಪ, ಶಿವಣ್ಣ, ನಂಜೇಗೌಡ, ಜನಾರ್ದನರೆಡ್ಡಿ, ಮುತ್ಸಂದ್ರ ಆನಂದಪ್ಪ, ಲಕ್ಕೊಂಡಹಳ್ಳಿ ಗ್ರಾಪಂ ಅಧ್ಯಕ್ಷ ಭಾರತಿದೇವರಾಜ್, ಶ್ರೀನಿವಾಸಮೂರ್ತಿ, ಮುನಿನಂಜೇಗೌಡ, ಬುವನಹಳ್ಳಿಗೋಪಾಲಪ್ಪ, ಯನಗುಂಟೆ ರಮೇಶ್, ದ್ಯಾವಸಂದ್ರ ವೆಂಕಟೇಗೌಡ, ಪ್ರಕಾಶ್, ಗ್ರಾಪಂ ಸದಸ್ಯೆ ಅಭಿಲಾಷಾ, ರಾಮಕೃಷ್ಣಪ್ಪ, ಮದ್ದಪ್ಪ, ಮಂಜುನಾಥ್, ನಾರಾಯಣಪ್ಪ, ಬಾಲೇನಹಳ್ಳಿ ಮೂರ್ತಿ, ಇತರರಿದ್ದರು.